ದಾವಣಗೆರೆ: ಹುಬ್ಬಳ್ಳಿಯಲ್ಲಿ ನಡೆದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಪ್ರೀ ರಿಲೀಸ್ ಕಾರ್ಯಕ್ರಮ ಮುಗಿಸಿ ಬೆಣ್ಣೆ ನಗರಿಗೆ ಆಗಮಿಸಿದ್ದ ದರ್ಶನ್ ಕೆಲ ಕಾಲ ರಿಲ್ಯಾಕ್ ಆಗಿ ನಂತರ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ದಾರೆ.
ನಗರದ ಬಾಪೂಜಿ ಗೆಸ್ಟ್ ಹೌಸ್‍ಗೆ, ದರ್ಶನ್ ಜೊತೆ ಹಾಸ್ಯ ನಟ ಚಿಕ್ಕಣ್ಣ ಹಾಗೂ ವಿನೋದ್ ಪ್ರಭಾಕರ್ ಕೂಡ ಆಗಮಿಸಿದ್ದರು. ಹುಬ್ಬಳ್ಳಿಯಲ್ಲಿ ನಡೆದ ಪ್ರೀ ರಿಲೀಸ್ ಮುಗಿಸಿ ನೇರವಾಗಿ ದಾವಣಗೆರೆಗೆ ಆಗಮಿಸಿದ್ದು, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮನೆಗೆ ಕೂಡ ಭೇಟಿ ನೀಡಿ ಅವರ ಜೊತೆ ಊಟ ಮಾಡಿ ಕೆಲ ಹೊತ್ತು ಹರಟೆ ಹೊಡೆದು ಸಮಯ ಕಳೆದು ರಿಲಾಕ್ಸ್ ಆಗಿದ್ದ ಬೆಂಗಳೂರಿಗೆ ಮರಳಿದ್ದಾರೆ.
ದರ್ಶನ್ ಜೊತೆ ವಿನೋದ್ ಪ್ರಭಾಕರ್ ಹಾಗೂ ಚಿಕ್ಕಣ್ಣ ಸೇರಿ ಹತ್ತಕ್ಕೂ ಹೆಚ್ಚು ಜನ ಚಿತ್ರರಂಗದ ಕಲಾವಿದರಿದ್ದರು. ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಂದ ಆಗಮಿಸಿದ್ದ ನಟರಿಗೆ ಸನ್ಮಾನ ಮಾಡಲಾಯಿತು. ಇನ್ನು ದರ್ಶನ್ ನೋಡಲು ಅಭಿಮಾನಿಗಳು ಬಾಪೂಜಿ ಗೆಸ್ಟ್ ಹೌಸ್ ಬಳಿ ಜಮಾಯಿಸಿದ್ದು, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.