– ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆ ಸಾವು
– ಐದಾರು ಆಸ್ಪತ್ರೆ ಅಲೆದರೂ ಸಿಗಲಿಲ್ಲ ಬೆಡ್, ಕೊನೆಯುಸಿರೆಳೆದ ವಾರಿಯರ್
ಬೆಂಗಳೂರು: ಕೊರೊನಾ ವೈರಸ್ ಭಯ, ಲಾಕ್‍ಡೌನ್ ನಡುವೆಯೂ ಜೀವ ಪಣಕ್ಕಿಟ್ಟು ಕೆಲಸ ಮಾಡಿದ್ದ ಪೌರ ಕಾರ್ಮಿಕ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆಗಾಗಿ 5-6 ಆಸ್ಪತ್ರೆಗಳಿಗೆ ಅಲೆದಾಡಿದರೂ, ಬೆಡ್ ಸಿಕ್ಕಿಲ್ಲ. ಹೀಗಾಗಿ ಕೊರೊನಾ ವಾರಿಯರ್ ಕೊನೆಯುಸಿರೆಳೆದಿದ್ದಾರೆ.
Advertisement
ಹೆಬ್ಬಾಳದ ವಿಶ್ವನಾಥ ನಾಗನಹಳ್ಳಿಯ 30 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಕಲಿದ್ದು, ಚಿಕಿತ್ಸೆಗಾಗಿ ಮಹಿಳೆ ಐದಾರು ಆಸ್ಪತ್ರೆಗೆ ಅಲೆದಾಡಿದ್ದಾರೆ. ಆದರೂ ಎಲ್ಲಿಯೂ ಬೆಡ್ ಸಿಕ್ಕಿಲ್ಲ. ಐದು ಆಸ್ಪತ್ರೆಗಳಲ್ಲಿ ಬೆಡ್‍ಗಳಿಲ್ಲ ಎಂದು ಹೇಳಿ ಕಳುಹಿಸಲಾಗಿದೆ. ಕೊನೆಯದಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದು, ಆಗಲೇ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಹೀಗಾಗಿ ಇಂದು ಬೆಳಗ್ಗೆ ಪೌರ ಕಾರ್ಮಿಕ ಮಹಿಳೆ ಸಾವನ್ನಪ್ಪಿದ್ದಾರೆ.
Advertisement
ತೀವ್ರ ಉಸಿರಾಟದ ಸಮಸ್ಯೆಯಿಂದ ಮಹಿಳೆ ಅಸ್ವಸ್ಥವಾಗಿದ್ದರು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮಹಿಳೆ ಸಾವನ್ನಪ್ಪಿದ್ದಾರೆ. ಎಷ್ಟೇ ಬಾರಿ ಬಿಬಿಎಂಪಿಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿ, ಅಂಬುಲೆನ್ಸ್ ವ್ಯವಸ್ಥೆ ಮಾಡಿ ಎಂದು ಅಂಗಲಾಚಿದರೂ ಮಹಿಳೆಗೆ ಬೆಡ್ ವ್ಯವಸ್ಥೆ ಸಿಕ್ಕಿಲ್ಲ. ಇದೀಗ ಮಹಿಳೆ ಸಾವನ್ನಪ್ಪಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಆಸ್ಪತ್ರೆಯ ಮುಂದೆ ಕುಟುಂಬಸ್ಥರು ಕಿಡಿಕಾರಿದ್ದಾರೆ.
Advertisement
Advertisement
ಕೊರೊನಾ ಟೈಮ್‍ನಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಿದ ಪೌರಕಾರ್ಮಿಕ ಮಹಿಳೆ ಕೊರೊನಾಗೆ ಬಲಿಯಾಗಿದ್ದಕ್ಕೆ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಪೌರಕಾರ್ಮಿಕರು ಹೆಲ್ತ್ ವಾರಿಯರ್ಸ್ ಅಂತಾ ಹೂಮಳೆ ಸುರಿಸುವ ಬಿಬಿಎಂಪಿ, ಕೊರೊನಾ ಬಂದಾಗ ಆಸ್ಪತ್ರೆಗಾಗಿ ಸುತ್ತಾಡಿಸುತ್ತದೆ. ಆದರೆ ಅವರ ಪ್ರಾಣ ಹೋಗುತ್ತಿದೆ ಎಂದಾಗ ಬಿಬಿಎಂಪಿ ಆಸ್ಪತ್ರೆ ವ್ಯವಸ್ಥೆ ಕಲ್ಪಿಸಲಾಗಿಲ್ಲ.