Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ – ಬೇಸರ ತೋಡಿಕೊಂಡ ಸರ್ಫರಾಜ್ ಖಾನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ – ಬೇಸರ ತೋಡಿಕೊಂಡ ಸರ್ಫರಾಜ್ ಖಾನ್

Districts

ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ – ಬೇಸರ ತೋಡಿಕೊಂಡ ಸರ್ಫರಾಜ್ ಖಾನ್

Public TV
Last updated: May 5, 2021 11:58 am
Public TV
Share
3 Min Read
Sarfaraz Khan BBMP 1
SHARE

ಬೆಂಗಳೂರು: ಬಿಬಿಎಂಪಿ ಬೆಡ್ ಬ್ಲಾಕ್ ದಂಧೆಗೆ ಕೋಮು ಬಣ್ಣ ಬಳಿದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.

ಕೊವಿಡ್ ಪೀಡಿತರಿಗೆ ಬೆಡ್ ಹಂಚುವ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರನ್ನು ಸೇರಿಸಿಕೊಂಡ ಒಂದು ಸಂದೇಶ ಓಡಾಡುತ್ತಿರುವುದು ನನಗೆ ಅಪಾರವಾದ ನೋವು ತಂದಿದೆ ಎಂದು ಹೇಳಿ ಬಹಿರಂಗ ಪತ್ರ ಬರೆದ್ದಾರೆ.

Tejasvi surya 5

ಪತ್ರದಲ್ಲಿ ಏನಿದೆ?
ಕೋವಿಡ್ ಪೀಡಿತರಿಗೆ ಬೆಡ್ ಹಂಚುವ ಬಿವಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರನ್ನು ಸೇರಿಸಿಕೊಂಡ ಒಂದು ಸಂದೇಶ ಓಡಾಡುತ್ತಿರುವುದು ನನಗೆ ಅಪಾರವಾದ ನೋವು ತಂದಿದೆ.

ವಾರ್ ರೂಮಿನಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಮಾತ್ರವಲ್ಲ ಅಲ್ಲಿ ಯಾವುದೇ ವೈದ್ಯರೂ ನನಗೆ ಗೊತ್ತಿಲ್ಲ. ಹೀಗಿದ್ದರೂ ನನ್ನನ್ನೂ ಆರೋಪಿಯನ್ನಾಗಿಸಿರುವುದು ನನಗೆ ಆಘಾತ ತಂದಿದೆ. ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ. ವಾರ್ ರೂಮ್ ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವುದು ಕೆಲಸ ಆರೋಗ್ಯ ಇಲಾಖೆಯ ಮತ್ತು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

BBMP JC Sarfaraz Khan bed scam

ಈ ವಿಷಯಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ಆ ಇಲಾಖೆಗೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದ ನನ್ನ ಹೆಸರು ಸೇರಿಸಿರುವುದು ನನಗೆ ನಿಜಕ್ಕೂ ನೋವು ತಂದಿದೆ.

ಎಲ್ಲಾ ಕೊವಿಡ್ ಕೇರ್ ಕೇಂದ್ರಗಳಿಗೆ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ವ್ಯವಸ್ಥೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನಾನು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ.

ಹಜ್ ಭವನವನ್ನು 140 ಬೆಡ್ ವ್ಯವಸ್ಥೆಯುಳ್ಳ ಆಕ್ಸಿಜನ್ ಸೌಲಭ್ಯವುಳ್ಳ ಕೊವಿಡ್ ಕೇರ್ ಕೇಂದ್ರವಾಗಿ ನಾನು ಪರಿವರ್ತಿಸಿದ್ದೇನೆ. ಅಷ್ಟಲ್ಲದೇ ಹಜ್ ಕಮಿಟಿ ನಿಧಿಯಿಂದಲೇ 50 ಐಸಿಯು ಗಳನ್ನು ಇಲ್ಲಿ ಹಾಕಿಸಿದ್ದೇನೆ. ನಾನು ಹೇಳಬಯಸುವುದೇನೆಂದರೆ ಈ ಹಜ್ ಭವನದಲ್ಲಿ ಸೇರಿಸಿಕೊಂಡು ಆರೈಕೆ ಮಾಡುತ್ತಿರುವ ಕೋವಿಡ್ ರೋಗಿಗಳಲ್ಲಿ 90% ರೋಗಿಗಳು ಇತರೆ ಧರ್ಮದ ನನ್ನ ಸಹೋದರರಾಗಿದ್ದಾರೆ, ಕೇವಲ 10% ರೋಗಿಗಳು ಮಾತ್ರ ಮುಸ್ಲಿಮರಾಗಿದ್ದಾರೆ.

bbmp bed block accused

ನಾನು ನಂಬಿಕೊಂಡು ಬಂದ ಮತ್ತು ಈಗಲೂ ನಂಬಿರುವ ತತ್ವ ಏನೆಂದರೆ ಅಲ್ಲಾಹ್ ಇರಲಿ, ಈಶ್ವರನಿರಲಿ, ಜೀಸಸ್ ಇರಲಿ ದೇವರೆಂಬುವನು ಎಲ್ಲರಿಗೂ ಒಬ್ಬನೇ. ನಾಮ ಹಲವು. ಮತ್ತು ನಾವೆಲ್ಲರೂ ಅವನ ಮಕ್ಕಳು.

ಕಳೆದ ವರ್ಷ ನಾನು ಬಡವರಿಗೆ ಮತ್ತು ಅಗತ್ಯವಿರುವ ಜನರಿಗೆ ಆಹಾರದ ಕಿಟ್ ಗಳನ್ನು ಒದಗಿಸಲು ಕೆಲಸ ಮಾಡಿದ್ದೆ. ಆಗ ಅವರೆಲ್ಲಾ ಯಾವ ಧರ್ಮದವರು ಯಾವ ಪ್ರದೇಶದವರು ಎಂದು ನಾನು ನೋಡಲಿಲ್ಲ. ಸಾವಿರಾರು ವಲಸೆ ಕಾರ್ಮಿಕರೊಂದಿಗೆ ನಿಂತು ಅವರಿಗೆ ಅಗತ್ಯ ಆಹಾರ ನೀಡಿ ಧೈರ್ಯ ಹೇಳುವ ಕೆಲಸ ಮಾಡಿದೆ. ಅವರಿಗೆ ತಂತಮ್ಮ ಊರುಗಳಿಗೆ ತಲುಪುವಂತೆ ರೈಲು ಪ್ರಯಾಣ ಮಾಡಲು ಸಹಕರಿಸಿದೆ. ಇದೆಲ್ಲಾ ಮಾಡುವಾಗಲೂ ನಾನು ಅವರು ಯಾವ ಧರ್ಮದವರು ಎಂದಾಗಲೀ ಯಾವ ಊರೆಂದಾಲೀ ನೋಡಲಿಲ್ಲ. ನನ್ನ ದೃಷ್ಟಿಯಲ್ಲಿ ಅವರೆಲ್ಲರೂ ಬಹಳ ಕಷ್ಟದಲ್ಲಿರುವ ನನ್ನ ಸಹೋದರ ಸಹೋದರಿಯರಾಗಿದ್ದರು. ಅವರು ಆದಷ್ಟು ಬೇಗ ತಮ್ಮ ಊರುಗಳಿಗೆ ಮರಳಿ ತಮ್ಮ ಪ್ರೀತಿಪಾತ್ರರನ್ನು ಸೇರಿಕೊಳ್ಳಲಿ ಎನ್ನುವುದಷ್ಟೇ ನನ್ನ ಕಾಳಜಿಯಾಗಿತ್ತು. ಇದರ ಪರಿಣಾಮವಾಗಿ ನನ್ನ ಇಡೀ ಕುಟುಂಬದವರಿಗೆ ನನ್ನಿಂದಾಗಿ ಕೊವಿಡ್ ಸೋಂಕು ತಗುಲಿತ್ತು.

ನಾನೂ ಸಹ ನಿಮ್ಮಲ್ಲಿ ಒಬ್ಬನಾಗಿರುವುದಕ್ಕೆ ಮತ್ತು ಯಾರೋ ಹೊರಗಿನ ವ್ಯಕ್ತಿ ಅಲ್ಲ ಎನ್ನುವುದಕ್ಕೆ ಇಷ್ಟು ಸಾಕ್ಷಿ ಸಾಲದೆ? ಯಾವತ್ತಿಗೂ ನನ್ನ ಬದ್ಧತೆ ನನ್ನ ದೇಶ, ನನ್ನ ಸರ್ಕಾರ ಮತ್ತು ಈ ದೇಶದ ಸಂವಿಧಾನಕ್ಕೆ. ಕೆಲವು ಜನರ ಅಜ್ಞಾನ ಮತ್ತು ಮೂರ್ಖತನ ನಿಜಕ್ಕೂ ನನಗೆ ನೋವುಂಟುಮಾಡಿದೆ. ಇದರ ಕುರಿತು ಕಾನೂನು ಪ್ರಕಾರ ತನಿಖೆ ನಡೆದು, ಇಂತಹ ಕಷ್ಟದ ಸಮಯದಲ್ಲಿ ಸಹ ವಿಷವನ್ನು ಹರಡುತ್ತಿರುವವರ ಮೇಲೆ ಕ್ರಮ ಜರುಗಿಸಲಿ ಎಂದು ಆಶಿಸುತ್ತೇನೆ.

TAGGED:bbmpbed scamCoronaCovid 19Sarfaraz Khanಕೊರೊನಾಕೊರೊನಾ ವೈರಸ್ಕೋವಿಡ್ 19ಬಿಬಿಎಂಪಿಬೆಂಗಳೂರು
Share This Article
Facebook Whatsapp Whatsapp Telegram

Cinema news

Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World
Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National

You Might Also Like

KSRTC Bus Transport bus catches fire in front of Lulu Mall Bengaluru
Bengaluru City

ಲುಲು ಮಾಲ್‌ ಮುಂದೆ ಹೊತ್ತಿ ಉರಿದ ಬೆಂಗಳೂರು-ಶಿವಮೊಗ್ಗ KSRTC ಬಸ್‌

Public TV
By Public TV
3 hours ago
Accident
Crime

ಬಸ್, ಪಿಕಪ್ ನಡುವೆ ಭೀಕರ ಅಪಘಾತ – 10 ಮಂದಿ ದುರ್ಮರಣ, 20ಕ್ಕೂ ಹೆಚ್ಚು ಮಂದಿಗೆ ಗಾಯ

Public TV
By Public TV
3 hours ago
Donald Trump 2
Latest

ಪಾಕ್‌ ಧ್ವಜ ಇರುವ 10 ತೈಲ ಟ್ಯಾಂಕರ್‌ಗಳನ್ನು ಇರಾನ್‌ ನಮಗೆ ಗಿಫ್ಟ್‌ ನೀಡಿದೆ: ಟ್ರಂಪ್‌

Public TV
By Public TV
4 hours ago
Nelamangala Assistant Professor Propose to Student
Bengaluru City

ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದ ಅಸಿಸ್ಟೆಂಟ್ ಪ್ರೊಫೆಸರ್ ಅರೆಸ್ಟ್

Public TV
By Public TV
5 hours ago
Mudigere Police Station
Chikkamagaluru

ಮೂಡಿಗೆರೆ ಲವ್ ಜಿಹಾದ್ ಆರೋಪ ಪ್ರಕರಣ – 1 ತಿಂಗಳು ಉಪವಾಸ, ಮನೆಯಲ್ಲೇ ನಮಾಜ್ ಮಾಡುತ್ತಿದ್ದ ಅಪ್ರಾಪ್ತೆ

Public TV
By Public TV
5 hours ago
Donald Trump 1 2
Latest

ಅಲಿ ಖಮೇನಿ ನಮ್ಮೊಂದಿಗೆ ಇಲ್ಲ, ಇರಾನ್‌ನಲ್ಲಿ ಈಗ ನಾಯಕರೇ ಇಲ್ಲ: ಟ್ರಂಪ್‌

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?