ಬೆಡ್ ಇಲ್ಲ, ಮನೆಯಲ್ಲಿ ಐಸೋಲೇಷನ್- ಧಾರವಾಡ ಜಿಲ್ಲಾಡಳಿತದ ನಿರ್ಲಕ್ಷ್ಯ

Public TV
1 Min Read
dwdh

ಧಾರವಾಡ/ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದೆ. ಪ್ರತಿನಿತ್ಯ ನೂರು, ನೂರೈವತ್ತು, ಇನ್ನೂರರ ಗಡಿ ಸಮೀಪ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ಕೂಡ ಕೊರೊನಾ ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಹೀಗಾಗಿ ಸೊಂಕಿತರು ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ಐಸೋಲೇಷನ್ ಆಗುವಂತೆ ಆಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಹೆಚ್ಚಳ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ಪ್ರಸ್ತುತವಾಗಿ ಸೋಂಕಿತರಿಗೆ ಯಾವುದೇ ವ್ಯವಸ್ಥೆ ಕೂಡ ದೊರೆಯುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

vlcsnap 2020 07 28 14h38m58s829

ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆ ಇಲ್ಲದೇ ಸೊಂಕಿತರು ಪರದಾಡುತ್ತಿದ್ದಾರೆ. ಇದೇ ರೀತಿ ಹುಬ್ಬಳ್ಳಿಯ ನವನಗರದ ಅಧ್ಯಾಪಕ ನಗರದ 53 ವರ್ಷದ ಇಂಜಿನೀಯರರೊಬ್ಬರಿಗೆ ಸೋಂಕು ದೃಡಪಟ್ಟು ನಾಲ್ಕು ದಿನವಾದರೂ ಆಸ್ಪತ್ರೆಗೆ ದಾಖಲಿಸಿಲ್ಲ. ಆಸ್ಪತ್ರೆಗೆ ದಾಖಲಿಸಿ ಅಂತ ಸೋಂಕಿತರ ಸಂಬಂಧಿಕರು ಜಿಲ್ಲಾಡಳಿತಕ್ಕೆ ಪದೇ ಪದೇ ಫೋನ್ ಮಾಡಿದ ನಂತರವೂ ದಾಖಲಿಸದೇ ಮನೆಯಲ್ಲಿ ಹೋಂ ಐಸೋಲೇಷನ್ ಮೂಲಕ ಚಿಕಿತ್ಸೆ ಪಡೆಯಿರಿ. ಆಸ್ಪತ್ರೆಯಲ್ಲಿ ಬೆಡ್ ಗಳಿಲ್ಲ. ವ್ಯವಸ್ಥೆ ಸರಿಯಿಲ್ಲವೆಂದು ಜಿಲ್ಲಾಡಳಿತದ ಕಚೇರಿಯ ಸಿಬ್ಬಂದಿಗಳು ಸೊಂಕಿತರಿಗೆ ಹೇಳಿದ್ದಾರೆ.

CORONA 10

ಹೀಗಾಗಿ ಅನಿವಾರ್ಯವಾಗಿ ಸೋಂಕಿತ ಇದೀಗ ಮನೆಯಲ್ಲಿ ಐಸೋಲೇಷನ್ ಆಗುವಂತಾಗಿದೆ. ಸೋಂಕಿತರ ಸಂಬಂಧಿಕರು ಪದೇ ಪದೇ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಫೋನ್ ಮಾಡಿದ ನಂತರ ಇದೀಗ ಮನೆ ಮುಂಭಾಗವನ್ನ ಸೀಲ್‍ಡೌನ್ ಮಾಡಿದೆ. ಹೀಗಾಗಿ ಸೋಂಕಿತರೊಂದಿಗೆ ಅವರ ಪತ್ನಿ ಮನೆಯಲ್ಲಿ ಪತಿಯ ಜೊತೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *