ಬೆಂಗಳೂರು: ಕೊರೊನಾ ಚಿಕಿತ್ಸಾ ಪರಿಕರಗಳ ಖರೀದಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಚಾರ ನಡೆಸಿದೆ ಎಂದು ಆರೋಪಿಸಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದ ಕಾಂಗ್ರೆಸ್ ಪಕ್ಷ ನಾಯಕರ ಆರೋಪಗಳಿಗೆ ಬಿವೈ ವಿಜಯೇಂದ್ರ ಟಾಂಗ್ ನೀಡಿದ್ದಾರೆ. ಬೆಟ್ಟ ಅಗೆದು ಇಲಿ ಹುಡುಕುವ ಪ್ರಯತ್ನ ಮಾಡಬೇಡಿ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿ ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ ಅವರು, ಆರೋಪ ಮಾಡಲೇಬೇಕು ಎನ್ನುವ ಹತಾಶೆಯಿಂದ ಆರೋಪ ಮಾಡಲು ಹೋಗಿ ಆರೋಪಿತರಾಗುವ ಸ್ಥಿತಿ ಕಾಂಗ್ರೆಸ್ ನಾಯಕರದ್ದಾಗುತ್ತಿದೆ. ನಿಮ್ಮ ಆಂತರಿಕ ಪೈಪೋಟಿಗಾಗಿ ಬೆಟ್ಟೆ ಅಗೆದು ಇಲಿ ಹುಡುಕಲು ಪ್ರಯತ್ನಿಸುವ ಬದಲು, ಸವಾಲಿನ ಕಾಲದಲ್ಲಿ ಸರ್ಕಾರಕ್ಕೆ ರಚನಾತ್ಮಕಸಲಹೆ ನೀಡಿ, ಜನರ ಸಂಕಷ್ಟದಲ್ಲಿ ಭಾಗಿಯಾಗಿ ಎಂದು ಹೇಳಿದ್ದಾರೆ.
Advertisement
Advertisement
ಕೋವಿಡ್ ಹೆಸರಿನಲ್ಲಿ ರಾಜ್ಯ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಷಾರ ನಡೆದಿದೆ ಎಂದು ಆರೋಪಿಸಿದ್ದ ಸಿದ್ದರಾಮ್ಯಯ ಅವರು, ಸರ್ಕಾರ ಕೊರೊನಾ ನೆಪದಲ್ಲಿ 4,167 ಕೋಟಿ ರೂ. ಖುರ್ಚು ಮಾಡಿದೆ. ಆದರೆ ಬಿಜೆಪಿ ಸಚಿವರು ಮಾತ್ರ 327 ರೂ. ಮಾತ್ರ ವೆಚ್ಚ ಮಾಡಿರುವುದಾಗಿ ಹೇಳುತ್ತಿದ್ದಾರೆ. ವೆಂಟಿಲೇಟರ್ ಖರೀದಿಯಲ್ಲೂ ಅಕ್ರಮ ನಡೆದಿದ್ದು, ಫುಡ್ ಕಿಟ್, ಪಿಪಿಇ ಕಿಟ್, ಮಾಸ್ಕ್ ಖರೀದಿ ಹೆಸರಿನಲ್ಲೂ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.