– ಸೋಶಿಯಲ್ ಮೀಡಿಯಾದಲ್ಲಿ ಶಾಸಕನ ದರ್ಪ ಸೆರೆ
ಲಕ್ನೋ: ಬೆಂಬಲಿಗರ 200 ವಾಹನಗಳಿಗೆ ಫ್ರೀ ಎಂಟ್ರಿ ನೀಡದ ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಶಾಸಕ ನರೇಶ್ ರಾವತ್ ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕರ ವಿರುದ್ಧ ಟೋಲ್ ಪ್ಲಾಜಾ ಮ್ಯಾನೇಜರ್ ಲಕ್ನೋ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಲಕ್ನೋ ಮಾರ್ಗದಲ್ಲಿರುವ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಇಂದು ಮಧ್ಯಾಹ್ನ ಎನ್‍ಹೆಚ್-30 ಮಾರ್ಗವಾಗಿ ಬಂದ ಶಾಸಕರ ವಾಹನಗಳನ್ನ ಟೋಲ್ ಸಿಬ್ಬಂದಿ ತಡೆದು ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದಕ್ಕೆ ಕೋಪಗೊಂಡ ಶಾಸಕ ಟೋಲ್ ಪ್ಲಾಜಾ ಕಚೇರಿಯೊಳಗೆ ನುಗ್ಗಿ ದರ್ಪ ಮರೆದಿದ್ದಾರೆ.
ಟೋಲ್ ಸಿಬ್ಬಂದಿ ಅನುಮತಿ ನೀಡದ ಹಿನ್ನೆಲೆ ಶಾಸಕ ತಮ್ಮ ಬೆಂಬಲಿಗರ ಜತೆ ಸೇರಿ ರೌಡಿಯಂತೆ ವರ್ತಿಸಿದ್ದಾರೆ. ಈ ಎಲ್ಲ ದೃಶ್ಯಗಳು ಕಚೇರಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಶಾಸಕರು ಪ್ರತಿದಿನ ಈ ಮಾರ್ಗವಾಗಿ ಸಂಚರಿಸುತ್ತಾರೆ. ಶಾಸಕರ ಹಿಂದೆ ಬರುವ ವಾಹನಗಳಿಗೆ ಟೋಲ್ ಫ್ರೀ ನೀಡಬೇಕೆಂದು ನಮ್ಮ ಮೇಲೆ ಒತ್ತಡ ಹಾಕುತ್ತಾರೆ. ಪ್ರವೇಶ ನೀಡದಕ್ಕೆ ಕಚೇರಿಯೊಳಗೆ ನುಗ್ಗೆ ಹಲ್ಲೆ ನಡೆಸಿದ್ದಾರೆ ಎಂದು ಟೋಲ್ ಪ್ಲಾಜಾ ಮ್ಯಾನೇಜರ್ ಆರೋಪಿಸಿದ್ದಾರೆ.