-ಟಾಪ್ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು? ಇಲ್ಲಿದೆ ವಿವರ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನ 5 ಸಾವಿರದ ಗಡಿ ದಾಟಿ ಮುನ್ನುಗ್ಗುತ್ತಿದೆ. ಗುರುವಾರ ಮತ್ತು ಶುಕ್ರವಾರ 5 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದೆ. ಎಂದಿನಂತೆ ಬೆಂಗಳೂರು ನಂಬರ್ ಒನ್ ಸ್ಥಾನದಲ್ಲಿದ್ರೆ, ಇನ್ನುಳಿದ ಜಿಲ್ಲೆಗಳಲ್ಲಿಯೂ ಕೊರೊನಾ ಆತಂಕವನ್ನು ಸೃಷ್ಟಿ ಮಾಡುತ್ತಿದೆ.
Advertisement
ಆರೋಗ್ಯ ಇಲಾಖೆಯ ಶುಕ್ರವಾರದ ಬುಲೆಟಿನ್ ಪ್ರಕಾರ, ಬೆಂಗಳೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಕೊರೊನಾ ನೂರರ ಅಂಕಿಯನ್ನು ದಾಟಿದೆ. ಇದರ ಜೊತೆಗೆ ಮೈಸೂರಿನಲ್ಲಿ ಮಹಾಮಾರಿ ದ್ವಿಶತಕವನ್ನು ದಾಖಲಿಸಿದೆ. ಟಾಪ್ 13 ಜಿಲ್ಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Advertisement
Advertisement
1. ಬೆಂಗಳೂರು ನಗರ: ಶುಕ್ರವಾರ ಬೆಂಗಳೂರಿನಲ್ಲಿ 2,267 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 41,467ಕ್ಕೆರಿಕೆಯಾಗಿದೆ. ಬೆಂಗಳೂರಿನಲ್ಲಿ 30,561 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 833ಕ್ಕೆ ತಲುಪಿದೆ.
2. ಮೈಸೂರು: ನಿನ್ನೆ ಒಂದೇ ದಿನ ಮೈಸೂರು ಜಿಲ್ಲೆಯಲ್ಲಿ 281 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 2,450ಕ್ಕೇರಿಕೆಯಾಗಿದ್ದು, 1,602 ಸಕ್ರಿಯ ಪ್ರಕರಣಗಳಿವೆ. ಮೈಸೂರು ಜಿಲ್ಲೆಯಲ್ಲಿ 14 ಜನರನ್ನು ಕೊರೊನಾ ಬಲಿ ಪಡೆದಿದೆ.
3. ಉಡುಪಿ: ಜಿಲ್ಲೆಯಲ್ಲಿ 190 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತ ಸಂಖ್ಯೆ 3,036 ಏರಿಕೆ ಕಂಡಿದೆ. ಇದುವರೆಗೂ ಒಟ್ಟು 14 ಜನ ಕೊರೊನಾದಿಂದಾಗಿ ಸಾವ್ನಪ್ಪಿದ್ದು, 1,104 ಸಕ್ರಿಯ ಪ್ರಕರಣಗಳಿವೆ.
Advertisement
4. ಬಾಗಲಕೋಟೆ: ಶುಕ್ರವಾರದ ಬುಲೆಟಿನ್ ಪ್ರಕಾರ ಬಾಗಲಕೋಟೆಯಲ್ಲಿ 184 ಹೊಸ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1,168 ಕ್ಕೇರಿಯಾಗಿದ್ದು, 36 ಸೋಂಕಿತರ ನಿಧನರಾಗಿದ್ದಾರೆ. ಒಟ್ಟು 814 ಸಕ್ರಿಯ ಪ್ರಕರಣಗಳು ಬಾಗಲಕೋಟೆಯಲ್ಲಿವೆ.
5. ದಕ್ಷಿಣ ಕನ್ನಡ: ಕಡಲೂರಿನಲ್ಲಿ ಕೊರೊನಾ ನಾಗಾಲೋಟ ಮಂದುವರಿದಿದ್ದು, ಶುಕ್ರವಾರ 180 ಹೊಸ ಪ್ರಕರಣಗಳು ದಾಖಲಾಗಿವೆ. ದಕ್ಷಿಣ ಕನ್ನಡದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4,389ಕ್ಕೇರಿಕೆ ಕಂಡಿದ್ದು, 89 ಜನರು ಕೊರೊನಾದಿಂದಾಗಿ ನಿಧನರಾಗಿದ್ದಾರೆ.
6. ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 24 ಗಂಟೆಯಲ್ಲಿ 174 ಮಂದಿಗೆ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ 2,842ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 85 ಸೋಂಕಿತರನ್ನು ಮಹಾಮಾರಿ ಬಲಿ ಪಡೆದುಕೊಂಡಿದ್ದು, 1,784 ಸಕ್ರಿಯ ಪ್ರಕರಣಗಳಿವೆ.
7. ಕಲಬುರಗಿ: ದೇಶದಲ್ಲಿ ಮೊದಲ ಕೊರೊನಾ ಸಾವಾಗಿದ್ದ ಕಲಬುರಗಿಯಲ್ಲಿ ಶುಕ್ರವಾರ 159 ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ 3,529 ಮಂದಿಗೆ ಸೋಂಕು ತಗುಲಿದ್ದು, 1,554 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ 54 ಸಾವು ದಾಖಲಾಗಿವೆ.
8. ವಿಜಯಪುರ: ಗುಮ್ಮಟ ನಗರಿಯಲ್ಲಿ ಕೊರೊನಾ ವೇಗ ಪಡೆಯುತ್ತಿದ್ದು, ಶುಕ್ರವಾರ 158 ಮಂದಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ 1,988 ಮಂದಿಗೆ ಸೋಂಕು ತಗುಲಿದ್ದು, 577 ಸಕ್ರಿಯ ಪ್ರಕರಣಗಳಿವೆ. ಕೊರೊನಾದಿಂದ 24 ಜನರು ಮರಣ ಹೊಂದಿದ್ದಾರೆ.
9. ಬಳ್ಳಾರಿ: ಗಣಿ ನಾಡಿನಲ್ಲಿ ಕೊರೊನಾ ಮಹಾಮಾರಿಯ ನಾಗಾಲೋಟ ಮುಂದುವರಿದಿದ್ದು, 136 ಹೊಸ ಪ್ರಕರಣ ದಾಖಲಾದ್ರೆ ಸೋಂಕಿತರ ಸಂಖ್ಯೆ 3,289ಕ್ಕೇರಿಕೆಯಾಗಿದೆ. ಬಳ್ಳಾರಿಯಲ್ಲಿ 69 ಸೋಂಕಿತರನ್ನು ಕೊರೊನಾ ಬಲಿ ಪಡೆದಿದ್ದು, 1,760 ಸಕ್ರಿಯ ಪ್ರಕರಣಗಳಿವೆ.
10. ಹಾಸನ: ಶುಕ್ರವಾರ 118 ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 1,357ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 37 ಸಾವಾಗಿದ್ದು, 621 ಸಕ್ರಿಯ ಪ್ರಕರಣಗಳಿವೆ.
11. ಬೆಳಗಾವಿ: ಕುಂದಾ ನಗರಿ ಬೆಳಗಾವಿಯಲ್ಲಿ 116 ಮಂದಿಗೆ ಸೋಂಕು ತಗುಲಿದ್ದು, ಒಟ್ಟು 1,645 ಪ್ರಕರಣಗಳಿವೆ. ಜಿಲ್ಲೆಯಲ್ಲಿ 35 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 1,184 ಸಕ್ರಿಯ ಪ್ರಕರಣಗಳಿವೆ.
12. ಗದಗ: ಶುಕ್ರವಾರ 108 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 882ಕ್ಕೇರಿಕೆಯಾಗಿದೆ. ಜಿಲ್ಲೆಯಲ್ಲಿ 19 ಸಾವು ದಾಖಲಾಗಿದ್ದು, 563 ಸಕ್ರಿಯ ಪ್ರಕರಣಗಳಿವೆ.
13. ರಾಯಚೂರು: ನಿನ್ನೆ 107 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 1,503 ಆಗಿದೆ. 734 ಸಕ್ರಿಯ ಪ್ರಕರಣಗಳಿದ್ದು, 18 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.