– 14 ಮಂದಿ ಸಾವು
– ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿಕೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಲಾಕ್‌ಡೌನ್ ಜಾರಿ ಮಾಡಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದ್ದರೆ ಇನ್ನೊಂದು ಕಡೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ನೂರರ ಗಡಿ ದಾಟುತ್ತಲೇ ಇದೆ.
ಇಂದು ಬೆಂಗಳೂರಿನಲ್ಲಿ 173 ಮಂದಿಗೆ ಕೊರೊನಾ ಬಂದಿದೆ. ಒಟ್ಟು ರಾಜ್ಯದಲ್ಲಿ 397 ಮಂದಿಗೆ ಸೋಂಕು ದೃಢಪಡುವ ಮೂಲಕ 10 ಸಾವಿರದ ಗಡಿಯನ್ನು ದಾಟಿದೆ. 14 ಮಂದಿ ಸಾವನ್ನಪ್ಪಿದ್ದು, ಒಟ್ಟು ಇಲ್ಲಿಯವರೆಗೆ 164 ಮಂದಿ ಮೃತಪಟ್ಟಿದ್ದಾರೆ. ಐಸಿಯುನಲ್ಲಿ 114 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 10,118ಕ್ಕೆ ಏರಿಕೆಯಾಗಿದ್ದು, ಈ ಪೈಕಿ 6,151 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 3,799 ಸಕ್ರಿಯ ಪ್ರಕರಣಗಳಿವೆ. ಇಂದು ಪತ್ತೆಯಾದ ಸೋಂಕಿತರ ಪೈಕಿ 75 ಮಂದಿಗೆ ಅಂತರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದರೆ 8 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು 173, ಬಳ್ಳಾರಿ 34, ಕಲಬುರಗಿ 22, ರಾಮನಗರ 22, ಉಡುಪಿ 14, ಯಾದಗಿರಿ 13, ದಕ್ಷಿಣ ಕನ್ನಡ 12, ಧಾರವಾಡ 12, ಕೊಪ್ಪಳ 11, ರಾಯಚೂರು 9, ಉತ್ತರ ಕನ್ನಡ 9, ದಾವಣಗೆರೆ 8, ಚಿಕ್ಕಬಳ್ಳಾಪುರ 8, ಮೈಸೂರು 7, ಬೆಂಗಳೂರು ಗ್ರಾಮಾಂತರ 7, ಗದಗ 6, ಕೋಲಾರ 6, ಬೀದರ್ 5, ವಿಜಯಪುರ 4, ಶಿವಮೊಗ್ಗ 3, ಮಂಡ್ಯ 2, ಚಿತ್ರದುರ್ಗ 2, ಚಾಮರಾಜನಗರ 2, ಕೊಡಗು 2, ಬೆಳಗಾವಿ, ಹಾಸನ, ತುಮಕೂರು, ಚಿಕ್ಕಮಗಳೂರಿನಲ್ಲಿ ತಲಾ ಒಂದು ಪ್ರಕರಣಗಳು ದೃಢಪಟ್ಟಿದೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಇಂದು ಒಟ್ಟು 149 ಮಂದಿ ಬಿಡುಗಡೆಯಾಗಿದ್ದಾರೆ. ಕಲಬುರಗಿ 50, ಬೆಂಗಳೂರು ನಗರ 41, ಬೀದರ್ 12, ವಿಜಯಪುರ 10, ಉಡುಪಿ 9, ಬೆಳಗಾವಿ 7, ಧಾರವಾಡ 7, ಚಿಕ್ಕಮಗಳೂರು 4, ಕೋಲಾರ 4, ಕೊಡಗು 2, ಕೊಪ್ಪಳ 2, ದಾವಣಗೆರೆಯಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ.