-ರಿಪೋರ್ಟ್ ಬರುವ ಮುನ್ನವೇ ಮನೆ ಸೇರಿದ್ರು
ಬೆಂಗಳೂರು: ಸಿಲಿಕಾನ್ ಸಿಟಿಯ ಮತ್ತೊಂದು ಸ್ಲಂ ಪ್ರದೇಶಕ್ಕೆ ಮಹಾಮಾರಿ ಕೊರೊನಾ ಎಂಟ್ರಿ ನೀಡಿದ್ದು, ಕೊಳಗೇರಿ ಸುತ್ತಲಿನ ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಂಗಳೂರಿನ ಜೆ.ಪಿ.ನಗರದ ರಾಗಿ ಗುಡ್ಡದ ಸ್ಲಂನಲ್ಲಿಯ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ದೆಹಲಿ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ ಎನ್ನಲಾಗಿದ್ದು, ಸೋಂಕಿತರು ಕೋವಿಡ್-19 ವರದಿ ಬರುವ ಮುನ್ನವೇ ಮನೆ ಸೇರಿದ್ದರು ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಸೋಂಕಿತರಿಬ್ಬರು ಇಡೀ ಏರಿಯಾದಲ್ಲಿ ಸುತ್ತಾಡಿದ್ದು, ಅಕ್ಕಪಕ್ಕದ ಮಕ್ಕಳನ್ನು ಮುದ್ದಾಡಿದರು ಎಂದು ತಿಳಿದು ಬಂದಿದೆ.
Advertisement
ಸೋಂಕಿತರಿಬ್ಬರನ್ನು ಐಸೋಲೇಶನ್ ವಾರ್ಡಿಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತರಿಬ್ಬರ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಕಳೆದ ವಾರ ಬೆಂಗಳೂರಿನ ಎಸ್.ಕೆ.ಗಾರ್ಡನ್ ಸ್ಲಂನಲ್ಲಿ ತರಕಾರಿ ಮಾರುವ ಮಹಿಳೆಗೆ ಸೋಂಕು ಕಾಣಿಸಿಕೊಂಡಿತ್ತು. ಮಹಿಳೆಯ ಸಂಪರ್ಕದಲ್ಲಿದ್ದ 10ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇದೀಗ ರಾಗಿಗುಡ್ಡ ಪ್ರದೇಶದಲ್ಲಿ ಕೊರೊನಾ ಸ್ಫೋಟವಾಗುತ್ತಾ ಅನ್ನೋ ಆತಂಕವನ್ನು ಉಂಟು ಮಾಡಿದೆ.