ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ಗ್ರಾಮಗಳು, ಜಿಲ್ಲೆ ಸ್ವಯಂ ಲಾಕ್‍ಡೌನ್ ಘೋಷಿಸಿಕೊಂಡಿವೆ. ಇದೀಗ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಂಗಳೂರಿನಿಂದ ಬರುವವರಿಗೆ ದಂಡ ವಿಧಿಸುವುದಾಗಿ ಡಂಗೂರದ ಮೂಲಕ ಸಾರಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಬೆಂಗಳೂರಿಗರ ಭಯ ಶುರುವಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಊರಿನ ಒಳಗೆ ಬೆಂಗಳೂರಿನವರು ಬರುವಾಗಿಲ್ಲ ಎಂದು ಡಂಗೂರದ ಮೂಲಕ ಸಾರಿಸಿದ್ದಾರೆ. ಇದೀಗ ಡಂಗೂರ ಸಾರಿಸಿರುವ ವಿಡಿಯೋ ವೈರಲ್ ಆಗಿದೆ.
Advertisement
Advertisement
ಅಷ್ಟೇ ಅಲ್ಲದೇ ಬೆಂಗಳೂರು, ಮೈಸೂರಿನವರು ಊರಿಗೆ ಬರಬಾರದು. ಅದೇ ರೀತಿ ಊರಿನವರು ಬೆಂಗಳೂರಿಗೆ ಹೋಗಬಾರದು. ಒಂದು ವೇಳೆ ಬೆಂಗಳೂರಿನಿಂದ ಇಲ್ಲಿದೆ ಬಂದರೆ ಮತ್ತು ಇಲ್ಲಿಂದ ಬೆಂಗಳೂರಿಗೆ ಹೋದರೆ ಐದು ಸಾವಿರ ದಂಡ ವಿಧಿಸಲಾಗುತ್ತದ ಎಂದು ಡಂಗೂರ ಸಾರಿಸಿದ್ದಾರೆ.
Advertisement
ಭಾನುವಾರ ಬೆಂಗಳೂರಲ್ಲಿ ಹೊಸದಾಗಿ 1235 ಜನರ ಮೇಲೆ ಸೋಂಕು ಸವಾರಿ ಮಾಡಿದೆ. ಪರಿಣಾಮ ಬೆಂಗಳೂರಲ್ಲಿ ಸೋಂಕಿತರ ಸಂಖ್ಯೆ 9,580ಕ್ಕೆ ಏರಿಕೆ ಆಗಿದೆ. ಇನ್ನೂ ರಾಜ್ಯದ ಒಟ್ಟು ಸೋಂಕಿತರ ಪೈಕಿ ಬೆಂಗಳೂರಿನದ್ದೇ ದೊಡ್ಡ ಪಾಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 23,474ಕ್ಕೆ ಏರಿಕೆ ಆಗಿದೆ.