-ಇವತ್ತು ಹೊಸ ದಾಖಲೆ ಬರೆದ ಹೆಮ್ಮಾರಿ ಸೋಂಕು
ಬೆಂಗಳೂರು: ಹೆಮ್ಮಾರಿ ಕೊರೊನಾ ಆರ್ಭಟಕ್ಕೆ ಈ ಹಿಂದಿನ ಎಲ್ಲಾ ದಾಖಲೆಗಳು ಉಡೀಸ್ ಆಗಿದ್ದು, ಇವತ್ತು ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಾಣವಾಗಿವೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಅರ್ಧಶತಕ ಬಾರಿಸಿದೆ.
ರಾಜ್ಯದಲ್ಲಿ ಇಂದು ಕೊರೊನಾಗೆ 54 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿತರ ರೋಗಿಗಳ ಸಾವಿನ ಸಂಖ್ಯೆ 470ಕ್ಕೇರಿದೆ. ಅಲ್ಲದೇ 452 ಮಂದಿ ರೋಗಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಬರೋಬ್ಬರಿ 290 ಮಂದಿ ಐಸಿಯುನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
Advertisement
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಮಾಹಿತಿಯ ಅನ್ವಯ, ಬೆಂಗಳೂರಿನಲ್ಲಿ ಇಂದು 23 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ನಿನ್ನೆಯ ಬುಲೆಟಿನ್‍ನಲ್ಲಿ ಬೆಂಗಳೂರಿನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಇಲಾಖೆ ತಿಳಿಸಿತ್ತು. ಉಳಿದಂತೆ ಧಾರವಾಡ 7, ರಾಯಚೂರು ಮತ್ತು ಹಾಸನದಲ್ಲಿ ತಲಾ 3, ಬಳ್ಳಾರಿ 4, ತುಮಕೂರು, ಚಿಕ್ಕಬಳ್ಳಾಪುರ, ಮೈಸೂರು, ವಿಜಯಪುರ ಜಿಲ್ಲೆಗಳಲ್ಲಿ ತಲಾ 2, ಬೀದರ್, ದಕ್ಷಿಣ ಕನ್ನಡ, ಕಲಬುರಗಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ತಲಾ 1 ಸಾವಿನ ಪ್ರಕರಣ ದಾಖಲಾಗಿದೆ.
Advertisement
ಸಾವನ್ನಪ್ಪಿದವರ ವಿವರ:
ಬೆಂಗಳೂರಿನಲ್ಲಿ 14 ವರ್ಷದ ಬಾಲಕ ರೋಗಿ ಸಂಖ್ಯೆ 12898 ಸಾವನ್ನಪ್ಪಿದ್ದು, ತೀವ್ರ ಉಸಿರಾಟದ ಸಮಸ್ಯೆ ಮತ್ತು ಜ್ವರದಿಂದ ಬಳಲುತ್ತಿದ್ದ. ಉಳಿದಂತೆ ರೋಗಿ-9287, ರೋಗಿ-10035, ರೋಗಿ-10965, ರೋಗಿ-11557, ರೋಗಿ-11558, ರೋಗಿ-11576, ರೋಗಿ-11588, ರೋಗಿ-11650, ರೋಗಿ-11672, ರೋಗಿ-11866, ರೋಗಿ-12413, ರೋಗಿ-12456, ರೋಗಿ-12477, ರೋಗಿ-12516, ರೋಗಿ-12657, ರೋಗಿ-12627, ರೋಗಿ-12894, ರೋಗಿ-12898, ರೋಗಿ-12900, ರೋಗಿ-, ರೋಗಿ-12937, ರೋಗಿ-13571, ರೋಗಿ-14077, ರೋಗಿ-14103, ರೋಗಿ-23554, ರೋಗಿ-23558 ರಾಜ್ಯ ರಾಜಧಾನಿಯಲ್ಲಿ ಸಾವನ್ನಪ್ಪಿದ್ದಾರೆ.
Advertisement
ಧಾರವಾಡದಲ್ಲಿ ರೋಗಿ-18713, ರೋಗಿ-20056, ರೋಗಿ-28431, 28450, ರೋಗಿ-28451, ರೋಗಿ-28461, ರೋಗಿ-28497 ಸಾವನ್ನಪ್ಪಿದ್ದಾರೆ.
ರಾಯಚೂರಿನಲ್ಲಿ ರೋಗಿ-28582, ರೋಗಿ-11325, ರೋಗಿ-606. ಹಾಸನದಲ್ಲಿ ರೋಗಿ-13329, ರೋಗಿ-25265, ರೋಗಿ-26884 ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ರೋಗಿ-10749, ರೋಗಿ-18448, ರೋಗಿ-18512, ರೋಗಿ-23393 ಮಂದಿ ಸಾವನ್ನಪ್ಪಿದ್ದಾರೆ.
ತುಮಕೂರಿನ 29 ವರ್ಷದ ಯುವಕ ರೋಗಿ ಸಂಖ್ಯೆ 14412 ಸೋಂಕಿಗೆ ಬಲಿಯಾಗಿದ್ದು, ಸೋಂಕಿನ ಮೂಲವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ. ಜೂನ್ 26 ರಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಜೂನ್ 30 ರಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಉಳಿದಂತೆ ಜಿಲ್ಲೆಯಲ್ಲಿ 55 ವರ್ಷದ ಮಹಿಳೆ ರೋಗಿ ಸಂಖ್ಯೆ 27038 ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ರೋಗಿ-15400, ರೋಗಿ-23624, ಮೈಸೂರಿನಲ್ಲಿ ರೋಗಿ-16565, ರೋಗಿ-28280, ವಿಜಯಪುರದಲ್ಲಿ ರೋಗಿ-24790, ರೋಗಿ-16985 ಮಂದಿ ಸಾವನ್ನಪ್ಪಿದ್ದಾರೆ.
ಬೀದರಿನಲ್ಲಿ ರೋಗಿ-21415 65 ವರ್ಷದ ವೃದ್ಧ, ದಕ್ಷಿಣ ಕನ್ನಡ ರೋಗಿ-23092 65 ವರ್ಷದ ವೃದ್ಧ, ಕಲಬುರಗಿಯ ರೋಗಿ-23277 56 ವರ್ಷದ ಪುರುಷ, ಚಿಕ್ಕಮಗಳೂರಿನ ರೋಗಿ-26858 52 ವರ್ಷದ ಮಹಿಳೆ, ಬೆಂಗಳೂರು ಗ್ರಾಮಾಂತರ ರೋಗಿ-26950 58 ವರ್ಷದ ವೃದ್ಧೆ, ತುಮಕೂರಿನ ರೋಗಿ-27038 55 ವರ್ಷದ ಮಹಿಳೆ ಸೋಂಕಿಗೆ ಸಾವನ್ನಪ್ಪಿದ್ದಾರೆ.