ಬೆಂಗಳೂರು: ವ್ಯಕ್ತಿಯನ್ನ ಮನೆಯಿಂದ ಕರೆದೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರ ವಲಯದ ಗುಲಗುಂಜನಹಳ್ಳಿಯಲ್ಲಿ ನಡೆದಿದೆ.
ಗುಲಗುಂಜನಹಳ್ಳಿಯ ರಾಮಕೃಷ್ಣ (45) ಕೊಲೆಯಾದ ಮೃತ ದುರ್ದೈವಿ. ಇಂದು ಬೆಳಗ್ಗೆ ರಾಮಕೃಷ್ಣ ಅವರ ಮೃತ ದೇಹ ಗುಲಗುಂಜನಹಳ್ಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿತ್ತು.
ರಾಮಕೃಷ್ಣ ಅವರನ್ನು ಶನಿವಾರ ರಾತ್ರಿ ಸ್ನೇಹಿತರು ಕರೆದೊಯ್ದಿದ್ದರು. ಆದರೆ ಬೆಳಗ್ಗೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಬಳಿಕ ಕುಟುಂಬಸ್ಥರು ಹುಡುಕಾಡಿದಾಗ ಕೊಲೆಯಾಗಿ ಬಿದ್ದಿದ್ದ ರಾಮಕೃಷ್ಣ ಅವರ ಮೃತದೇಹ ಪತ್ತೆಯಾಗಿತ್ತು.
ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಊರಿನವರೇ ಯಾರೋ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.