ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಆಸ್ಪತ್ರೆಗಳು ಸಜ್ಜಾಗಿಲ್ಲ ಎನ್ನುವ ಆರೋಪವಿದೆ. ವಿಚಿತ್ರವೆಂದರೆ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಸ್ಮಶಾನಗಳು ಸಜ್ಜಾಗಿದೆ. ಹೌದು ಮೃತ ಸೋಂಕಿನ ಶವ ಸುಡಲು ಹೊಸ ತಂತ್ರಜ್ಞಾನದತ್ತ ಚಿಂತನೆ ನಡೆಯುತ್ತಿದೆ.
ಬೆಂಗಳೂರಿನ ಕೋವಿಡ್-19 ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಐಸಿಯು ಖಾಲಿ ಇಲ್ಲ. ಆದರೆ ಮೃತ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಮಹಾ ಪ್ಲ್ಯಾನ್ ಸಿದ್ಧವಾಗಿದೆ. ಹೌದು, ಕೊರೊನಾ ಪಾಸಿಟಿವ್ ಮೃತದೇಹ ಬಂದರೆ ನಿಗದಿತ ಸ್ಮಶಾನಕ್ಕೆ ಶಿಫ್ಟ್ ಮಾಡಲಾಗುತ್ತದೆ.
Advertisement
Advertisement
ಹೆಬ್ಬಾಳ, ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಮಾತ್ರ ಕೋವಿಡ್-19ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಲಾಗುವುದು. ಸದ್ಯ ವಿದ್ಯುತ್ ಚಿತಾಗಾರದಲ್ಲಿ ಹೆಣ ಸುಡಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಆದರೆ ಕೋವಿಡ್-19 ರೋಗಿಯ ಮೃತದೇಹ ಸುಡಲು ಕಡಿಮೆ ಸಮಯ ಪಡೆಯುವ ತಂತ್ರಜ್ಞಾನದತ್ತ ಚಿಂತನೆ ನಡೆದಿದೆ.