ಬೆಂಗಳೂರು: ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಿದೆ. ಈ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರವನ್ನು ರಸ್ತೆಯ ಪಕ್ಕದಲ್ಲಿ, ಮನೆ ಪಕ್ಕ ಇರುವ ಖಾಲಿ ಜಾಗದಲ್ಲೇ ಮಾಡುತ್ತಿರುವ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಹೀಗಾಗಿ ಮೃತ ಸೋಂಕಿತರನ್ನ ನಿಮ್ಮ ಮನೆ ಪಕ್ಕದ ಖಾಲಿ ಜಾಗದಲ್ಲಿಯೇ ಅಂತ್ಯ ಸಂಸ್ಕಾರ ಮಾಡಬಹುದು ಹುಷಾರಾಗಿರಿ.
ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತರ ಅಂತ್ಯ ಸಂಸ್ಕಾರ ರಾಮಸ್ವಾಮಿಪಾಳ್ಯ ವಾರ್ಡಿನಲ್ಲಿ ನಡೆಯುತ್ತಿದೆ. ಜೆಸಿ ರಸ್ತೆ – ನಂದಿದುರ್ಗ ರಸ್ತೆ ಮಧ್ಯೆ ಬರುವ ಸ್ಮಾಶನವೊಂದರಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಮುಸ್ಲಿಂ ಸಮುದಾಯದ ನಂದಿದುರ್ಗ ಪೆರಲ್ ಗ್ರೌಂಡ್ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಆದರೆ ಮೃತ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಕಳೆದ ಒಂದು ವಾರದಿಂದ ಇದುವರೆಗೆ 16 ಮೃತ ಸೊಂಕಿತರ ಅಂತ್ಯ ಸಂಸ್ಕಾರದ ಈ ಸ್ಮಶಾನದಲ್ಲಿ ಆಗಿದೆ. ಅಷ್ಟೇ ಅಲ್ಲದೇ ಅಂತ್ಯ ಸಂಸ್ಕಾರದಲ್ಲೂ ಸಿಬ್ಬಂದಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ಕೇವಲ ಮೂರು ಅಡಿ ಗುಂಡಿ ತೋಡಿ ಅಂತ್ಯ ಸಂಸ್ಕಾರ ಮಾಡಲಾಗುತ್ತೆ. ಸ್ಮಶಾನದ 50 ಮೀಟರ್ ಅಂತರದಲ್ಲಿಯೇ ಮನೆಗಳಿವೆ. ಪಿಪಿಇ ಕಿಟ್‍ಗಳನ್ನೂ ಗುಂಡಿಗಳ ಬಳಿಯೇ ಬಿಸಾಡುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement
Advertisement
ಅಲ್ಲದೇ ಗುಂಡಿ ತೋಡುವ ವ್ಯಕ್ತಿಗಳು ಕೂಡ ಮಾಸ್ಕ್ ಹಾಕಲ್ಲ. ಸ್ಮಶಾನದ ಪಕ್ಕದ ರಸ್ತೆಗೆ ಬಂದು ಟೀ ಕುಡಿಯುತ್ತಾರೆ, ಜನರೊಂದಿಗೆ ಓಡಾಡುತ್ತಾರೆ. ಸ್ಮಶಾನದ ಹತ್ತಿರ ಬೀಸಾಡಿದ ಪಿಪಿಇ ಕಿಟ್‍ಗಳನ್ನ ನಾಯಿಗಳು ರಸ್ತೆಗೆ ಎಳೆದು ತರುತ್ತವೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೆ ಬಿಬಿಎಂಪಿಗೆ ದೂರು ಕೊಡಿ ಅಂತ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಇದರಿಂದ ಸ್ಥಳೀಯರು ಭಾರೀ ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಕಾರ್ಪೋರೇಟರ್ ನೇತ್ರಾವತಿ ಕೃಷ್ಣೆಗೌಡ ಪತಿ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತನಾಡಿದ್ದಾರೆ.
ವರದಿಗಾರ: ನಿಮ್ಮ ವಾರ್ಡಿನಲ್ಲಿ ಒಂದು ಸ್ಮಶಾನದಲ್ಲಿ ಬೌರಿಂಗ್ ಮತ್ತು ವಿಕ್ಟೋರಿಯಾದಿಂದ ಮೃತ ಸೋಂಕಿತರ ಹುಳುತ್ತಿದ್ದಾರೆ ಅಂತ ಸುದ್ದಿ ಇದೆ ಹೌದ ಸರ್?
ಕಾರ್ಪೋರೇಟರ್ ಪತಿ: ತಂದು ಹುಳುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಸ್ಟೇಷನ್‍ಗೂ ಹೇಳಿದ್ದೀವಿ. ಯಾರು ನ್ಯಾಚುರಲ್ ಡೆತ್ ಆಗಿದಾರೋ ಅವರನ್ನು ಮಾತ್ರ ಹುಳಬೇಕು. ಹೊರಗಡೆಯಿಂದ ತಂದು ಹುಳಬಾರದು ಅಂತ ಇನ್ಸ್‌ಪೆಕ್ಟರ್‌ಗೂಹೇಳಿದ್ದೀವಿ, ಬಿಬಿಎಂಪಿ ಕಮಿಷನರ್ ಜೊತೆಯೂ ಮಾತನಾಡಿದ್ದೀವಿ.
ವರದಿಗಾರ: ಯಾವ ಸ್ಮಶಾನ ಸರ್, ಜೆಸಿ ರೋಡ್- ನಂದಿದುರ್ಗ ರೋಡ್ ಮದ್ಯೆನಾ?
ಕಾರ್ಪೋರೇಟರ್ ಪತಿ: ನಂದಿದುರ್ಗ ರೋಡ್ ಬರುತ್ತೆ
ವರದಿಗಾರ: ಸ್ಮಶಾನ ಹೆಸರು ಏನು ಸರ್.
ಕಾರ್ಪೋರೇಟರ್ ಗಂಡ: ನಂದಿದುರ್ಗ ಪರೇಲ್ ಗ್ರೌಂಡ್
ವರದಿಗಾರ: ನೀವೆನಾದರೂ ಆಪೋಸ್ ಮಾಡಿದ್ರಾ? ಸ್ಥಳೀಯರು ಆಪೋಸ್ ಮಾಡುತ್ತಿದ್ದಾರೆ
ಕಾರ್ಪೋರೇಟರ್ ಗಂಡ: ನಾವು ಎಲ್ಲರಿಗೂ ಹೇಳಿದ್ದೀವಿ, ಪೊಲೀಸರು ಕರೆದು ಈ ತರ ಮಾಡಬಾರದು ಅಂತ ಹೇಳಿದ್ದಾರೆ. ಈ ಬಗ್ಗೆ ಕಮಿಷನರ್ ಜೊತೆ ಮಾತ ನಾಡಿದ್ದೇನೆ. ನಾವು ಚೆಕ್ ಮಾಡಿ, ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಸ್ಥಳೀಯ ಶಾಸಕ ರಿಜ್ವಾನ್ ಬಳಿ ಮಾತನಾಡೋಣ ಅಂತ ಹೋಗಿದ್ದೆ. ಆದರೆ ಅವರು ಸಿಕ್ಕಿಲ್ಲ.