ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗೋಕೆ ಅಸಲಿ ಕಾರಣ ಪಬ್ಲಿಕ್ ಟಿವಿಯಲ್ಲಿ ಬಯಲಾಗಿದೆ. ಟಾರ್ಗೆಟ್ ರೀಚ್ ಆಗೋಕೆ ಟೆಸ್ಟ್ ಮಾಡದಿದ್ರೂ ರಿಪೋರ್ಟ್ ಪಾಸಿಟಿವ್ ಎಂದು ಕೊಡಲಾಗ್ತಿದೆ.
ಹೌದು. ಬೆಂಗಳೂರಿಗರೇ ಇನ್ಮುಂದೆ ನೀವು ಹುಷಾರ್ ಆಗಿ ಇರಲೇಬೇಕು. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳದಿದ್ದರೂ ನಿಮಗೆ ಪಾಸಿಟಿವ್ ಇದೆ ಎಂದು ಕಾಲ್ ಬರುತ್ತೆ. ಈ ಹಿನ್ನೆಲೆಯಲ್ಲಿ ಫ್ರೀಯಾಗಿ ಕೊರೊನಾ ಟೆಸ್ಟ್ ಮಾಡ್ತಾರೆ ಅಂತ ಕಂಡ ಕಂಡಲ್ಲಿ ಟೆಸ್ಟ್ ಮಾಡಿಸಿಕೊಳ್ಳೋ ಮುನ್ನ ಜಾಗರೂಕರಾಗಿರಿ.
Advertisement
Advertisement
ಸ್ಯಾಂಪಲ್ಸ್ ತೆಗೆದುಕೊಳ್ಳದೇ ಕೊರೊನಾ ರಿಸಲ್ಟ್ ಕೊಡುತ್ತಿರುವ ಬಿಬಿಎಂಪಿಯ ಕರಾಳ ಮುಖವನ್ನ ಪಬ್ಲಿಕ್ ಟಿವಿ ಬಯಲಿಗೆಳೆದಿದೆ. ಈ ಅವ್ಯವಸ್ಥೆಯನ್ನ ವರದಿ ಮಾಡಲು ಹೋದ ನಮ್ಮ ತಂಡಕ್ಕೆ ಯಡಿಯೂರು ವಾರ್ಡಿನ ಸೀನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಮಂಜುನಾಥ್ ಧಮ್ಕಿ ಹಾಕಿದ್ರು.
Advertisement
ಸರ್ಕಾರ, ಬಿಬಿಎಂಪಿಯ ಟಾರ್ಗೆಟ್ ರೀಚ್ ಟಾರ್ಚರ್:
ಕೊರೊನಾ ಟೆಸ್ಟ್ ಟಾರ್ಗೆಟ್ ರೀಚ್ ಆಗೋಕೆ ಬಿಬಿಎಂಪಿ, ಕೋವಿಡ್ ಟೆಸ್ಟ್ ಮಾಡದೇ ರಿಸಲ್ಟ್ ಕೊಡ್ತಿದೆ. ಕಳೆದ ಸೆಪ್ಟೆಂಬರ್ 24 ರಂದು ಮೂವರು ಮಹಿಳೆಯರು ಬನಶಂಕರಿ ಮೆಟ್ರೋ ನಿಲ್ದಾಣದಿಂದ ಬೇರೊಂದು ಸ್ಥಳಕ್ಕೆ ಹೋಗ್ತಿದ್ರು. ಬನಶಂಕರಿ ಮೆಟ್ರೋ ನಿಲ್ದಾಣದ ಕೆಳಗಡೆ ಉಚಿತ ಕೋವಿಡ್ ಟೆಸ್ಟ್ ಅನ್ನು ಮಾಡ್ತಿದ್ರು. ಈ ವೇಳೆ ಅಲ್ಲಿದ್ದ ವೈದ್ಯರು ಮೂವರು ಮಹಿಳೆಯರ ನಂಬರ್ ಪಡೆದು, ಓಟಿಪಿ ನಂಬರ್ ನ್ನು ಪಡೆದಿದ್ದಾರೆ. ಆದರೆ ಈ ಮೂವರು ಗಂಟಲು ದ್ರವ ಪರೀಕ್ಷೆಯನ್ನ ಮಾಡಿಸಿಯೇ ಇಲ್ಲ. ಹೀಗಿದ್ದರೂ ಈ ಮೂವರು ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಬಿಬಿಎಂಪಿ ಹಾಗೂ ಪೊಲೀಸ್ ಠಾಣೆಯಿಂದ ಸೆ.26ರಂದು ಕರೆ ಬಂದಿದೆ.
Advertisement
ಈ ಬಗ್ಗೆ ನಂಬರ್ ಕೊಟ್ಟ ಸ್ಥಳಕ್ಕೆ ಬಂದು ವಿಚಾರಿಸಿದ್ರೆ ಈ ಬಗ್ಗೆ ಗೊತ್ತೇ ಇಲ್ಲ. ಏನೋ ಮಿಸ್ಸಾಗಿರಬಹುದು, ಕಾಂಪ್ರಮೈಸ್ ಆಗಿ. ಇನ್ನೊಮ್ಮೆ ಟೆಸ್ಟ್ ಮಾಡುತ್ತೇವೆ ಬನ್ನಿ ಎಂದು ವಾರ್ಡ್ ನಂಬರ್ 180 ಯಾರಬ್ ನಗರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ವೈದ್ಯಾಧಿಕಾರಿಗಳು ಮನವೋಲಿಸಿದ್ದಾರೆ. ಮುಖ್ಯವಾಗಿ ಸ್ವಾಬ್ ಕಲೆಕ್ಟ್ ಮಾಡಿಕೊಳ್ಳದೇ ಎಸ್‍ಆರ್‍ಎಫ್ ಐಡಿಯನ್ನ ಕೊಟ್ಟಿದ್ದಾರೆ. ಸ್ವಾಬ್ ಕಲೆಕ್ಟ್ ಆಗದೇ ಅದೇಗೆ ರಿಪೋರ್ಟ್ ಕೊಟ್ರು ಅನ್ನೋದು ನಂಬರ್ ಕೊಟ್ಟವರ ವಾದವಾಗಿದೆ.
ಮುಖ್ಯವಾಗಿ ಫ್ರೀ ಕೊರೊನಾ ಟೆಸ್ಟ್ ಗೆ ಬಸ್, ರೈಲ್ವೆ, ಮೆಟ್ರೋ ನಿಲ್ದಾಣಗಳಲ್ಲಿ ಕ್ಯಾಂಪ್ ಮಾಡಲಾಗ್ತಿದೆ. ಬೇರೆ ಬೇರೆ ವಿಭಾಗದವ್ರನ್ನ ಕೋವಿಡ್ ಡ್ಯೂಟಿಗೆ ಹಾಕಲಾಗಿದೆ. ಕೋವಿಡ್ ಟೆಸ್ಟ್ ಗೆ ಒಳಗಾದವ್ರ ಮಾಹಿತಿಯನ್ನು ಬೇಕಾಬಿಟ್ಟಿ ಫಿಲ್ ಮಾಡಿಕೊಂಡಿರೋದೆ ಈ ಎಡವಟ್ಟಿಗಳಿಗೆ ಕಾರಣ. ಈ ಎಡವಟ್ಟುಗಳೇ ಬೆಂಗಳೂರಿನಲ್ಲಿ ಅತ್ಯಧಿಕ ಕೇಸ್ ಗಳು ಬರೋದಕ್ಕೆ ಕಾರಣವಾಗಿದೆ. ಸದ್ಯ ನಕಲಿ ರಿಸಲ್ಟ್ ಕೊಟ್ಟವ್ರ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್, ಬಿಬಿಎಂಪಿ ಕಮಿಷನರ್ ಹಾಗೂ ಆರೋಗ್ಯಾಧಿಕಾರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಲಾಗ್ತಿದೆ. ಈ ಬಗ್ಗೆ ಆರೋಗ್ಯಾಧಿಕಾರಿಗಳನ್ನ ಪಬ್ಲಿಕ್ ವಿಚಾರಿಸಿದ್ರೆ ಬೇರೆಯದ್ದೇ ಸಬೂಬು ಹೇಳ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರ, ಬಿಬಿಎಂಪಿ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಟೆಸ್ಟ್ ಮಾಡದೇ ರಿಸಲ್ಟ್ ಕೊಡುವ ಮಾಫೀಯಾಕ್ಕೆ ಕಡಿವಾಣ ಹಾಕಬೇಕಿದೆ.