– ಸಾವಿರದ ಗಡಿ ದಾಟಿತು ಸೋಂಕು
– ಕಬಾಬ್ ಅಂಗಡಿಯವನಿಗೂ ವಕ್ಕರಿಸಿತು ಕೊರೊನಾ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಇಂದು 94 ಪ್ರಕರಣಗಳು ದಾಖಲಾಗುವುದರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,076ಕ್ಕೆ ಏರಿಕೆಯಾಗಿದೆ.
ಮೂವರು ಸಾವನ್ನಪ್ಪಿದ್ದು ಒಟ್ಟು 61 ಮಂದಿ ಮೃತಪಟ್ಟಿದ್ದಾರೆ. ಇಂದು ಒಬ್ಬರು ಮಹಿಳೆ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 393 ಮಂದಿ ಬಿಡುಗಡೆಯಾಗಿದ್ದು, ಒಟ್ಟು 621 ಸಕ್ರಿಯ ಪ್ರಕರಣಗಳಿವೆ.
Advertisement
Advertisement
ಕೆಆರ್ ಮಾರ್ಕೆಟ್‍ನ ಆನಂದಪುರಂ ಸ್ಲಂನಲ್ಲಿ 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹಲವು ದಿನಗಳಿಂದ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿತ್ತು. ಆದರೆ ಆಸ್ಪತ್ರೆಗೆ ತೋರಿಸಿರಲಿಲ್ಲ. ಶುಕ್ರವಾರ ಸಂಜೆ ಚಾಮರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದಾಗ ಪಾಸಿಟಿವ್ ಖಚಿತವಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವ ಮೊದಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆದರೆ, ಸಾವಿಗೆ ಮುನ್ನ ಆನಂದಪುರಂ ಸ್ಲಂನಲ್ಲ ಓಡಾಡಿದ್ದು ಆತಂಕಕ್ಕೆ ಕಾರಣವಾಗಿದೆ.
Advertisement
ಕಲಾಸಿಪಾಳ್ಯ ಠಾಣೆಯ 56 ವರ್ಷದ ಪೊಲೀಸ್ ಕೊರೊನಾಗೆ ಸಾವನ್ನಪ್ಪಿದ್ದಾರೆ. ಕೊರೋನಾಗೆ ಮೃತಪಟ್ಟಿದ್ದ ವಿವಿಪುರಂ ಎಎಸ್‍ಐ ಜೊತೆಗೆ ಇವರದ್ದು ಪ್ರಾಥಮಿಕ ಸಂಪರ್ಕ ಇತ್ತು. ಇವರು ಕಾಟನ್‍ಪೇಟೆ ನಿವಾಸಿ ಆಗಿದ್ದಾರೆ. ಕುಮಾರಸ್ವಾಮಿ ಲೇಔಟ್ 45 ವರ್ಷದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ.
Advertisement
ವಾರ್ತಾ ಇಲಾಖೆಗೂ ವೈರಸ್: ವಾರ್ತಾ ಇಲಾಖೆಯ ಉಪ ನಿರ್ದೇಶಕರೊಬ್ಬರಿಗೆ ಪಾಸಿಟಿವ್ ಆಗಿದೆ. ವಿಧಾನಸೌಧದ ಪತ್ರಕರ್ತರ ಕೊಠಡಿಯಲ್ಲಿ ಕಾರ್ಯನಿರ್ವಹಿಸ್ತಿದ್ರು. ಕಳೆದ 5 ದಿನದಿಂದ ವಿಧಾನಸೌಧಕ್ಕೆ ಬರುತ್ತಿರಲಿಲ್ಲ. ಇವತ್ತು ಕೊರೊನಾ ಪಾಸಿಟಿವ್ ದೃಢವಾಗಿದೆ. ವಿಧಾನಸೌಧದ ಪತ್ರಕರ್ತರ ಕೊಠಡಿ ಸ್ಯಾನಿಟೈಸ್ ಮತ್ತು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಜೊತೆಗೆ, ವಿಧಾನಸೌಧದಿಂದ ವಾರ್ತಾಭವನಕ್ಕೆ ಇವರು ಓಡಾಟ ನಡೆಸಿದ್ದಾರೆ. ಹೀಗಾಗಿ, ಇನ್‍ಫ್ಯಾಂಟ್ರಿ ರಸ್ತೆ ವಾರ್ತಾಭವನದಲ್ಲಿ ಢವ ಢವ ಶುರುವಾಗಿದೆ. ಉಪನಿರ್ದೇಶಕರ ಪತ್ನಿಗೂ ಕೊರೋನಾ ಪಾಸಿಟಿವ್ ಆಗಿದೆ. ಉಪ ನಿರ್ದೇಶಕರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರ ಪತ್ತೆ ಕಾರ್ಯ ಮಾಡಲಾಗ್ತಿದೆ. ಕಳೆದ ಗುರುವಾರ ಕ್ಯಾಬಿನೆಟ್ ಬ್ರೀಫಿಂಗ್‌ನಲ್ಲೂ ಈ ಉಪ ನಿರ್ದೇಶಕರು ಭಾಗಿಯಾಗಿದ್ದರು.
ವಿವಿ ಟವರ್‌ನಲ್ಲೂ ಹೆಮ್ಮಾರಿ: ವಿಧಾನಸೌಧದ ಬಳಿ ಇರುವ ವಿವಿ ಟವರ್‌ನಲ್ಲೂ ವೈರಸ್ ವಕ್ಕರಿಸಿದೆ. ಸರ್ಕಾರಿ ಅಧಿಕಾರಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕಚೇರಿ ಸೀಲ್‍ಡೌನ್ ಆಗಿದೆ. ವಿವಿ ಟವರ್ ಅನ್ನು ಬಿಬಿಎಂಪಿ ಸ್ಯಾನಿಟೈಸ್ ಮಾಡಿದೆ.
ಕೊರೊನಾ `ಕಬಾಬ್’: ಸಿಎಂ ನಿವಾಸ ಡಾಲರ್ಸ್ ಕಾಲೋನಿ ಬಳಿಯ ಅಶ್ವಥ್ ನಗರದ `ಶಿವಣ್ಣ ಕಬಾಬ್ ಸೆಂಟರ್’ ನಡೆಸ್ತಿದ್ದ ವ್ಯಕ್ತಿಗೆ ಕೊರೊನಾ ಅಂಟಿದೆ. ಕಬಾಬ್ ಶಾಪ್ ಸುತ್ತ ನೂರು ಮೀಟರ್ ಸೀಲ್‍ಡೌನ್ ಮಾಡಲಾಗಿದೆ. ಕಬಾಬ್ ಸೆಂಟರ್ ವ್ಯಕ್ತಿಗೆ ಸೋಂಕು ಬಂದಿರೋದ್ರಿಂದ ಇನ್ನೆಷ್ಟು ಜನರಿಗೆ ಕೊರೊನಾ ಸಂಪರ್ಕವಾಗಿದ್ಯೋ ಎಂಬ ಟೆನ್ಷನ್ ಆರೋಗ್ಯ ಇಲಾಖೆಯದ್ದಾಗಿದೆ.