– 38 ವರ್ಷದ ಮಹಿಳೆ ಬಲಿ, 5 ಸಾವು
– ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,399 ಮಂದಿಗೆ ಸೋಂಕು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮತ್ತೆ ಶತಕ ಹೊಡೆದಿದೆ. ಇಂದು ಒಟ್ಟು 126 ಮಂದಿಗೆ ಸೋಂಕು ಬಂದಿದ್ದು, ರಾಜ್ಯದಲ್ಲಿ ಒಟ್ಟು 249 ಹೊಸ ಪ್ರಕರಣಗಳು ದಾಖಲಾಗಿವೆ.
5 ಮಂದಿ ಸಾವನ್ನಪ್ಪಿದ್ದು, ಬೆಂಗಳೂರು ನಗರದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಆದರಲ್ಲೂ 38 ವರ್ಷದ ಮಹಿಳೆ ಸಾವನ್ನಪ್ಪಿರುವುದು ಆತಂಕ ಪಡುವ ವಿಚಾರವಾಗಿದೆ.
ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 9,399 ಮಂದಿಗೆ ಸೋಂಕು ಬಂದಿದ್ದು, 3,523 ಸಕ್ರಿಯ ಪ್ರಕರಣಗಳಿವೆ. ಒಟ್ಟು 5,730 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 111 ಮಂದಿ ಬಿಡುಗಡೆಯಾಗಿದ್ದಾರೆ.
ಅತಿ ಹೆಚ್ಚು ಸೋಂಕು ಬಂದಿರುವ ಬೆಂಗಳೂರಿನಲ್ಲಿ ಯಾರು ಇಂದು ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲದೇ ಅತಿ ಹೆಚ್ಚು ಐಸಿಯುನಲ್ಲಿರುವ (70) ರೋಗಿಗಳ ಸಂಖ್ಯೆಯಲ್ಲೀ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಎಲ್ಲ ಜಿಲ್ಲೆಗಳ ಪೈಕಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿದೆ. ಒಟ್ಟು 1,398 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 411 ಮಂದಿ ಮಾತ್ರ ಬಿಡುಗಡೆಯಾಗಿದ್ದಾರೆ. ಒಟ್ಟು 919 ಸಕ್ರಿಯ ಪ್ರಕರಣಗಳಿದ್ದು, 67 ಮಂದಿ ಮೃತಪಟ್ಟಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಇಂದು ಒಟ್ಟು 50 ಮಂದಿ ಅಂತರಾಜ್ಯ ಪ್ರಯಾಣಿಕರಿದ್ದರೆ, 11 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಬೆಂಗಳೂರು ನಗರ 126, ಕಕಲಬುರಗಿ 27, ವಿಜಯಪುರ 15, ಉಡುಪಿ 14, ದಕ್ಷಿಣ ಕನ್ನಡ 12, ದಾವಣಗೆರೆ 9, ಉತ್ತರ ಕನ್ನಡ ಮತ್ತು ಬಾಗಲಕೋಟೆ ತಲಾ 6, ಬೀದರ್ ಮತ್ತು ಚಿಕ್ಕಮಗಳೂರಿನಲ್ಲಿ ತಲಾ 5, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ರಾಮನಗರ 3, ಚಿತ್ರದುರ್ಗ, ಕೋಲಾರ, ತುಮಕೂರು, ಕೊಡಗಿನಲ್ಲಿ ತಲಾ 2, ಯಾದಗಿರಿ, ಮೈಸೂರು, ಚಿಕ್ಕಬಳ್ಳಾಪುರ , ಗದಗ, ಕೊಪ್ಪಳದಲ್ಲಿ ತಲಾ ಒಬ್ಬರಿಗೆ ಸೋಂಕು ಬಂದಿದೆ.
ಎಷ್ಟು ಮಂದಿ ಬಿಡುಗಡೆ?
ಕಲಬುರಗಿಯಲ್ಲಿ 34, ಯಾದಗಿರಿ 24, ದಕ್ಷಿಣ ಕನ್ನಡ 17, ತುಮಕೂರು 8, ಉತ್ತರ ಕನ್ನಡ 7, ಹಾಸನ 6, ಕೊಪ್ಪಳ 4, ವಿಜಯಪುರ 3, ಹಾವೇರಿ 3, ಉಡುಪಿ 2, ಧಾರವಾಡ 2, ಚಿಕ್ಕಬಳ್ಳಾಪುರದಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.