– ಗುಳೆ ಹೋಗೋದನ್ನು ತಡೆಯಲು ಹೊಸ ಪ್ಲಾನ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿ ಕೊರೊನಾ ವೈರಸ್ ರೌದ್ರ ನರ್ತನ ತೋರುತ್ತಿದ್ದು, ಈ ಬೆನ್ನಲ್ಲೇ ಇದೀಗ ಸರ್ಕಾರಕ್ಕೆ ಹೊಸ ತಲೆನೋವೊಂದು ಆರಂಭವಾಗಿದೆ.
Advertisement
ಹೌದು. ಜನ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಜನರ ಈ ನಿರ್ಧಾರ ಸರ್ಕಾರದ ಆರ್ಥಿಕತೆಗೆ ಪೆಟ್ಟು ಕೊಡುತ್ತಿದೆ. ಬೆಂಗಳೂರಿನಿಂದಲೇ ಸರ್ಕಾರದ ಆರ್ಥಿಕತೆಗೆ ಅರ್ಧದಷ್ಟು ಕೊಡುಗೆ ಇತ್ತು. ಆದರೆ ಈಗ ಜನ ಬೆಂಗಳೂರು ಖಾಲಿ ಮಾಡುತ್ತಿರುವುದರಿಂದ ಆರ್ಥಿಕತೆಗೆ ಪೆಟ್ಟು ಬೀಳೋದು ಗ್ಯಾರಂಟಿಯಾಗಿದೆ. ಈ ಹಿನ್ನೆಲೆಯಲ್ಲಿ ಗುಳೆ ಹೋಗೋದು ತಡೆಯೋಕೆ ಸರ್ಕಾರ ಪ್ಲಾನ್ ಮಾಡುತ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಸರ್ಕಾರದ ಪ್ಲಾನ್ ಏನು..?
ಬೆಂಗಳೂರು ಬಿಡ್ತಿರೋರಿಂದ ಸರ್ಕಾರಕ್ಕೆ ಆತಂಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಗಡಿಗಳಲ್ಲಿ ಚೆಕ್‍ಪೋಸ್ಟ್ ರೂಲ್ಸ್ ತರುವುದಕ್ಕೆ ಚಿಂತನೆ ನಡೆಸಿದೆ. ಬೆಂಗಳೂರಿನ ಹೊರಭಾಗದ ಎಲ್ಲಾ ಗಡಿಗಳಲ್ಲಿ ಚೆಕ್‍ಪೋಸ್ಟ್ ನಿರ್ಮಾಣ ಮಾಡುವ ಸಾಧ್ಯತೆ ಇದೆ.
Advertisement
ಚೆಕ್‍ಪೋಸ್ಟ್‍ಗಳಲ್ಲಿ ಅಧಿಕಾರಿಗಳು, ಪೋಲಿಸರನ್ನು ಬಳಸಿ ಜನರ ಮನವೊಲಿಕೆಗೆ ಪ್ಲಾನ್ ಮಾಡಲಾಗುವುದು. ಅಗತ್ಯ ಜಾಗೃತಿ ಮೂಡಿಸಿ ಗುಳೆ ಹೋಗೋದನ್ನ ತಡೆಯುವುದು. ಹಾಗೂ ಗಡಿಗಳಲ್ಲಿ ನೋಡಲ್ ಅಧಿಕಾರಿಗಳನ್ನ ನೇಮಕ ಮಾಡುವ ಬಗ್ಗೆ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.