ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಭೀತಿ ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತೆಡೆಗಟ್ಟಲು ಬಿಬಿಎಂಪಿ ಪ್ಲಾನೊಂದನ್ನು ಸಿದ್ಧಮಾಡಿಕೊಂಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
ಹೌದು. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಬಿಬಿಎಂಪಿ ‘ಪ್ಲಾನ್ ಬಿ’ ರೆಡಿ ಮಾಡಿಕೊಂಡಿದೆ. ಈ ಮೂಲಕ ತನ್ನ ಮೇಲಿನ ಹೊರೆಯನ್ನು ಬಿಬಿಎಂಪಿ ಇಳಿಸಿಕೊಳ್ಳುತ್ತಿದೆ. ಆದರೆ ಈ ಪ್ಲಾನ್ ಕೊರೊನಾ ರೋಗಿ ಮೇಲೆಯೇ ಎಲ್ಲಾ ನಿರ್ಧಾರವಾಗುತ್ತದೆ ಎನ್ನಲಾಗಿದೆ.
Advertisement
Advertisement
‘ಪ್ಲಾನ್ ಬಿ’ ಅಸಲಿಯತ್ತೇನು..?:
ಸರ್ಕಾರಿನಾ? ಖಾಸಗಿನಾ? ಆಸ್ಪತ್ರೆ ಆಯ್ಕೆ ವಿಚಾರವನ್ನು ರೋಗಿಗಳ ನಿರ್ಧಾರಕ್ಕೆ ಬಿಡುವುದು. ರೋಗಿಗಳ ರೋಗಿಗಳ ಮನೆಗೆ ಭೇಟಿ ನೀಡಲು ಡಿಸ್ಟಿಕ್ ಸರ್ವೆಯೆರ್ಸ್ ಆಫೀಸರ್ಸ್ ನೇಮಕ ಮಾಡುವುದು. ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯುವುದು. ಹಾಗೆಯೇ 50 ವರ್ಷ ಮೇಲ್ಪಟ್ಟ ಹಾಗೂ 10ವರ್ಷ ಕೆಳಗಿನ ಮಕ್ಕಳ ಮೇಲೆ ಹೆಚ್ಚು ನಿಗಾ ಇರಿಸುವುದಾಗಿದೆ.
Advertisement
ದೇಹದ ಉಷ್ಣಾಂಶ ಹೆಚ್ಚಿದ್ರೆ ಅವರನ್ನ ಕೂಡಲೇ ಆಸ್ಪತ್ರೆಗೆ ಶಿಫ್ಟ್ ಮಾಡಿಸುವುದು. ಸಾಂಸ್ಥಿಕ ಕ್ವಾರಂಟೈನ್ ಬದಲು ಹೋಂ ಕ್ವಾರಂಟೈನ್‍ಗೆ ಹೆಚ್ಚು ಒತ್ತು ನೀಡುವುದು. ವಾಣಿಜ್ಯ ಚಟುವಟಿಕೆಗಳ ಮೇಲೆ ಹೆಚ್ಚು ನಿಗಾ ವಹಿಸುವುದು. ಹಾಗೂ ಸಾಮಾಜಿಕ ಅಂತರ, ಮಾಸ್ಕ್ ಬಳಸದಿರುವವರಿಗೆ ಹೆಚ್ಚೆಚ್ಚು ದಂಡ ವಿಧಿಸುವುದೇ ಬಿಬಿಎಂಪಿ ಕಂಡುಕೊಂಡ ಪ್ಲಾನ್ ಆಗಿದೆ.