ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸ್ಫೋಟಕ ತಿರುವು ಪಡೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ.
ಹೌದು. ಕಳೆದ 2 ದಿನಗಳಿಂದ 20 ಮಂದಿ ಡ್ರಗ್ಸ್ ಪೆಡ್ಲರ್ಸ್ ಗಳನ್ನು ಬಂಧಿಸಲಾಗಿದೆ. 2 ದಿನದಲ್ಲಿಯೇ 25 ಕೆ.ಜಿ ಗಾಂಜಾವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಎರಡು ದಿನಗಳಿಂದ ಸಿಸಿಬಿ ಪೊಲೀಸರು ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ಸ್ಯಾಂಡಲ್ ವುಡ್ ಗೆ ಡ್ರಗ್ ಪೂರೈಕೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಸಿಸಿಬಿ, ಇದೀಗ ಪೆಡ್ಲರ್ ಗಳಿಗೆ ಬಲೆ ಬೀಸಿದೆ. ಇದೇ ವೇಳೆ ಪೆಡ್ಲರ್ ಗಳು ರಾಗಿಣಿ ಆಪ್ತ ರವಿಶಂಕರ್ಗೆ ಡ್ರಗ್ಸ್ ಪೂರೈಸಿದ್ದಾಗಿ ಹೇಳಿಕೆ ನೀಡಿದ್ದಾರೆ.
ಇಂದು ಕೂಡ ದಾಳಿ ಮುಂದುವರಿಸಿರುವ ಸಿಸಿಬಿ ಪೊಲೀಸರು, ಎಲೆಕ್ಟ್ರಾನಿಕ್ ಸಿಟಿ, ಹೂಸೂರು ರೋಡ್, ಪರಪ್ಪನ ಅಗ್ರಹಾರ ದಲ್ಲಿ ರೈಡ್ ಮಾಡಲಿದ್ದಾರೆ.