– ಸರ್ಕಾರದ ಅತಿದೊಡ್ಡ ಕರ್ಮಕಾಂಡ ಬಿಚ್ಚಿಟ್ಟ ಪಬ್ಲಿಕ್ ಟಿವಿ
ಬೆಂಗಳೂರು: ನಗರದಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಅಸಲಿ ಕಾರಣವನ್ನು ಪಬ್ಲಿಕ್ ಟಿವಿ ಸಾಕ್ಷ್ಯ ಸಮೇತ ಬಯಲು ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಆಕ್ಸಿಜನ್ ಎಮರ್ಜೆನ್ಸಿ ಶುರುವಾಗಿದೆ. ಟಿಟಿ ಅಂಬುಲೆನ್ಸ್‍ಗಳಲ್ಲಿ ಆಕ್ಸಿಜನ್ ಇಲ್ಲದೆ ಕೊರೊನಾ ಸೋಂಕಿತರು ಒದ್ದಾಡ್ತಿದ್ದಾರೆ. ಸರ್ಕಾರ ಹಾಗೂ ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಉಸಿರು ಬಿಡ್ತಿವೆ. ಪಬ್ಲಿಕ್ ಟಿವಿ ಮಿಡ್‍ನೈಟ್ ನಡೆಸಿದ ಆಪರೇಷನ್‍ನಲ್ಲಿ ಸರ್ಕಾರದ ಕರಾಳ ಮುಖವಾಡ ಬಯಲಾಗಿದೆ.
Advertisement
ಹೌದು. ಬೆಂಗಳೂರಿನಲ್ಲಿ ಕೊರೊನಾ ಬಂದ್ರೆ ಬದುಕುಳಿಯೋದೇ ಡೌಟ್. ಅಷ್ಟರ ಮಟ್ಟಿಗೆ ಬೆಂಗಳೂರಿನ ಪರಿಸ್ಥಿತಿ ಭೀಕರವಾಗಿದೆ. ಅಂಬುಲೆನ್ಸ್‍ಗಳಲ್ಲಿ ಆಕ್ಸಿಜನ್ ಇಲ್ಲದೇ ಕೊರೊನಾ ರೋಗಿಗಳು ಆಸ್ಪತ್ರೆಗೆ ಹೋಗುವ ದಾರಿ ಮಧ್ಯೆದಲ್ಲಿಯೇ ಪ್ರಾಣ ಬಿಡ್ತಿದ್ದಾರೆ. ಸರ್ಕಾರಕ್ಕೆ ಈ ವಿಷ್ಯ ಗೊತ್ತಿದ್ರೂ ಮೌನಕ್ಕೆ ಶರಣಾಗಿದೆ. ಅಂಬುಲೆನ್ಸ್ ಗಳಿಗೆ ಆಕ್ಸಿಜನ್ ಪೂರೈಕೆ ಮಾಡದೇ ಸರ್ಕಾರ ಮುಗ್ಧ ಜೀವಗಳ ಮೇಲೆ ಸವಾರಿ ಮಾಡ್ತಿದೆ. ಟಿಟಿ ಅಂಬುಲೆನ್ಸ್‍ಗಳಲ್ಲಿ ಆಕ್ಸಿಜನ್ ಇಲ್ಲ ಸರ್ ಅಂತ ಅಂಬುಲೆನ್ಸ್ ಡ್ರೈವರ್‍ಗಳು ತಮ್ಮ ಟಿಟಿ ಅಂಬುಲೆನ್ಸ್ ಏಜೆನ್ಸಿ ಅವರಿಗೆ ಕೇಳಿದ್ರೆ ಸತ್ರೆ ಸಾಯ್ಲಿ ಬಿಡಿ. ನಿಮ್ಮನ್ನ ಯಾರಾದ್ರೂ ಕೇಳಿ, ಜೈಲಿಗೆ ಹಾಕ್ತಾರಾ ಅಂತ ಉಡಾಫೆ ಮಾತನಾಡ್ತಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಡೆತ್ ರೇಟ್ ಹೆಚ್ಚಾಗೋಕೆ ಕೂಡ ಇದೇ ಕಾರಣ. ಈ ತಾತ್ಸರವೇ ಬೆಂಗಳೂರಿನಲ್ಲಿ ಕಿಲ್ಲರ್ ಕೊರೊನಾಗೆ ಬಲಿಯಾಗ್ತಿದ್ದಾರೆ ಎಂದು ಅಂಬುಲೆನ್ಸ್ ಡ್ರೈವರ್ ಆರೋಪಿಸಿದ್ದಾರೆ.
Advertisement
Advertisement
ಒಂದು ಟಿಟಿ ಅಂಬುಲೆನ್ಸ್ ಗೆ ಬಿಬಿಎಂಪಿಯಿಂದ 1 ಲಕ್ಷ 40 ಸಾವಿರ ಹಣ ಬರುತ್ತೆ ಎನ್ನಲಾಗಿದೆ. ಆದರೆ ನೆಟ್ಟಗೆ ಆಕ್ಸಿಜನ್ ಪೂರೈಕೆಯಾಗ್ತಿಲ್ಲ. ಇಷ್ಟೊಂದು ಹಣ ಯಾರ ಕಿಸೆ ಸೇರ್ತಿದೆ ಅನ್ನೋ ಅನುಮಾನಗಳು ದಟ್ಟವಾಗಿವೆ. ಟಿಟಿ ಅಂಬುಲೆನ್ಸ್ ಏಜೆನ್ಸಿಗಳು ತಮ್ಮ ಡ್ರೈವರ್‍ಗಳಿಗೆ ಸರಿಯಾಗಿ ಊಟನೂ ನೀಡ್ತಿಲ್ಲ. ಮಲಗೋಕೆ ಜಾಗನೂ ಕೊಟ್ಟಿಲ್ಲ. ಒಂದು ಪಿಪಿಇ ಕಿಟ್‍ನ್ನು ಎರಡು ದಿನ ಹಾಕ್ಕೊಳ್ಳಿ ಎಂದು ಅವಾಜ್ ಬೇರೆ ಹಾಕ್ತಾರೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರ ಈಗಲಾದ್ರೂ ಕಣ್ಣಿಡಬೇಕು. ಅಮಾಯಕ ಜೀವಗಳನ್ನ ಉಳಿಸಬೇಕಾಗಿದೆ.