ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ

Public TV
1 Min Read
benagali

ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್ ತಿವಾರಿ ಅವರ ಜಾಕೆಟ್ ಮೇಲೆ, ಅಗ್ನಿಮಿತ್ರ ಪಾಲ್ ಅವರ ಡಿಸೈನರ್ ಸೀರೆಗಳ ಕಮಲದ ಚಿಹ್ನೆ ಇತ್ತು. ಇದೀಗ ಸ್ವೀಟ್ ಅಂಗಡಿಯ ಮಾಲೀಕ ಸಂದೇಶ್ ಸರದಿ.

ಕೋಲ್ಕತ್ತಾದ ಬಲರಾಮ್ ಮುಲ್ಲಿಕ್ ರಾಧರಮನ್ ಮುಲ್ಲಿಕ್ ಸ್ವೀಟ್‍ಗಳ ಮೇಲೆ ರಾಜಕೀಯ ಪಕ್ಷದ ಚಿಹ್ನೆಗಳನ್ನು ರಚಿಸುವ ಮೂಲಕ ಮತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

bengali sweets 1

ರಾಜಕೀಯದ ಪ್ರಮುಖ ಪಕ್ಷಗಳ ಚಿಹ್ನೆ ಸೇರಿದಂತೆ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಚಿಹ್ನೆ ಜೊತೆಗೆ ಜೈ ಶ್ರೀ ರಾಮ್ ಮತ್ತು ಖೇಲಾ ಹೋಬ್ ಎಂಬ ಎರಡು ಪದಗಳನ್ನು ಸ್ವೀಟ್‍ಗಳ ಮೇಲೆ ರಚಿಸಿದ್ದಾರೆ. ಇದೀಗ ಈ ಸ್ವೀಟ್‍ಗಳು ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

bengali sweets

ಈ ಕುರಿತಂತೆ ಮಾತನಾಡಿದ ಸ್ವೀಟ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ ಮಲ್ಲಿಕ್, ವರ್ಷದ ಬಹುದೊಡ್ಡ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಾವು ಚುನಾವಣೆಯ ಸಂಬಂಧಪಟ್ಟಂತೆ ಸ್ವೀಟ್‍ಗಳನ್ನು ತಯಾರಿ ಮಾಡುತ್ತಿದ್ದು, ಈ ಸ್ವೀಟ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಖೇಲಾ ಹೋಬ್ ಮತ್ತು ಜೈ ಶ್ರೀ ರಾಮ್ ಎಂದು ಪದವನ್ನು ರಚಿಸಿರುವ ಸ್ವೀಟ್‍ಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿಹೋಗಿದೆ ಎಂದು ಹೇಳಿದ್ದಾರೆ.

ಸದ್ಯ ಈ ಸ್ವೀಟ್‍ಗಳು ಗ್ರಾಹಕರ ಗಮನ ಸೆಳೆಯುತ್ತಿದ್ದು, ಗ್ರಾಹಕರು ರಾಜಕೀಯ ಚಿಹ್ನೆಗಳುಳ್ಳ ಸ್ವೀಟ್‍ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *