ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಎಲ್ಲಾ ಅಂಗಡಿ, ರಸ್ತೆಗಳನ್ನು ಕ್ಲೋಸ್ ಮಾಡಿಸುತ್ತಿದ್ದಾರೆ. ಇದೀಗ ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್ ಮಾಡಲಾಗಿದೆ.
ಬೆಂಗಳೂರಿಗೆ ಬರುತ್ತಿದ್ದವರು ಮತ್ತು ಬೆಂಗಳೂರಿನಿಂದ ಹೊರಟವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಯಾವ ಕಡೆಯಿಂದ ಬರುತ್ತಾರೋ ಅದೇ ಮಾರ್ಗದಲ್ಲಿ ವಾಹನ ಸವಾರರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲದೇ ಕೆಂಗೇರಿ ಚೆಕ್‍ಪೋಸ್ಟ್ ಬಳಿ ನೈಸ್ ರೋಡ್‍ಗೆ ಜೆಸಿಪಿ ಮೂಲಕ ಮಣ್ಣಿನ ರಾಶಿ ಹಾಕಿ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ.
ಕೆಂಗೇರಿಯ ನೈಸ್ ರಸ್ತೆಯ ಚೆಕ್ ಪೋಸ್ಟ್ ಬಳಿ ಬೆಂಗಳೂರಿನಿಂದ ಒಳ ಬರುವ ಮತ್ತು ಹೊರ ಹೋಗುವ ವಾಹನ ಸಂಖ್ಯೆ ಹೆಚ್ಚಳವಾಗಿತ್ತು. ಲಾಕ್‍ಡೌನ್‍ನಲ್ಲೂ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವಿವಿಧ ಕಾರಣಗಳನ್ನು ನೆಪ ಮಾಡಿಕೊಂಡು ಜನರು ಸುಮ್ಮನೆ ಓಡಾಡುತ್ತಿದ್ದರು. ಈ ವೇಳೆ ಎರಡು ಕಡೆಗಳಲ್ಲೂ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.
ಆದರೆ ಅನಾವಶ್ಯಕ ವಾಹನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಪೊಲೀಸರು ಜೆಸಿಪಿಯಲ್ಲಿ ಮಣ್ಣಿನ ರಾಶಿ ಹಾಕಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಯೂಟರ್ನ್ ಮಾಡುವುದಕ್ಕೆ ರಸ್ತೆ ಮಾಡುವ ಮೂಲಕ ಅನಗತ್ಯವಾಗಿ ಬರುವವರನ್ನು ಅದೇ ಮಾರ್ಗವಾಗಿ ವಾಪಸ್ ಕಳುಹಿಸುತ್ತಿದ್ದಾರೆ.