ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದು, ಇದೀಗ 4ನೇ ಬಾರಿ ವಿಮಾನ ನಿಲ್ದಾಣ ಸೇವಾ ಗುಣಮಟ್ಟದ ವಾರ್ಷಿಕ ವಾರ್ಷಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
Advertisement
ಏರ್ ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಷನಲ್ ನವರು ಈ ಪ್ರಶಸ್ತಿ ನೀಡಿದ್ದು, ವಿಮಾನ ನಿಲ್ದಾಣದ ಗಾತ್ರ ಹಾಗೂ ಪ್ರದೇಶವನ್ನು ಆಧರಸಿ ಪ್ರಶಸ್ತಿ ನೀಡಲಾಗಿದೆ. ಸತತ ನಾಲ್ಕನೇ ಬಾರಿ ಬೆಂಗಳೂರು ವಿಮಾನ ನಿಲ್ದಾಣ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಪ್ರತಿ ವರ್ಷ 2.5 ರಿಂದ – 4 ಕೋಟಿ ಪ್ರಯಾಣಿಕರು ಪ್ರಯಾಣಿಸುವ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.
Advertisement
Advertisement
ಬೆಂಗಳೂರು ವಿಮಾನ ನಿಲ್ದಾಣ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು, ಅತ್ಯುತ್ತಮ ಸೇವೆಗಾಗಿ 2017, 2018 ಹಾಗೂ 2019ರಲ್ಲಿ ಅಸಿಐ-ಎಎಸ್‍ಕ್ಯೂ ಪ್ರಶಸ್ತಿಗಳನ್ನು ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
Advertisement
ಇಡೀ ವಿಶ್ವದಲ್ಲಿ ಅರೈವಲ್ಸ್ ಹಾಗೂ ಡಿಪಾರ್ಚರ್ಸ್ ಎರಡರಲ್ಲೂ ಎಎಸ್‍ಕ್ಯೂ ಪ್ರಶಸ್ತಿ ಪಡೆದ ಏಕೈಕ ವಿಮಾನ ನಿಲ್ದಾಣವಾಗಿದೆ. 2018 ಹಾಗೂ 2019ರಲ್ಲಿ ಈ ಪ್ರಶಸ್ತಿ ಲಭಿಸಿದೆ. ವಿಶ್ವ ಮಟ್ಟದಲ್ಲಿ ಈ ರೀತಿ ಗುರುತಿಸುತ್ತಿರುವುದು ನಿಜಕ್ಕೂ ನಮಗೆ ಹೆಮ್ಮೆಯ ಸಂಗತಿ. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ನಮ್ಮ ಇಕೋಸಿಸ್ಟಮ್ ಪಾರ್ಟ್ನರ್ಸ್ ಯಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಬಿಐಎಎಲ್ ಎಂಡಿ ಹಾಗೂ ಸಿಇಒ ಹರಿ ಮಾರಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ನಮ್ಮ ಕೈಗಾರಿಕೆಗಳು ಹಲವು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿಯೂ ಈ ಪ್ರಶಸ್ತಿ ಸಿಕ್ಕಿರುವುದು ವಿಮಾನ ನಿಲ್ದಾಣದಲ್ಲಿನ ತಂಡದ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ. ನಮ್ಮ ಪ್ರಯಾಣಿಕರ ವಿಶ್ವಾಸ ಮತವು ನಮ್ಮ ಸೇವೆಯ ಶ್ರೇಷ್ಠತೆಯ ಸನ್ವೇಷಣೆಯಲ್ಲಿ ಮತ್ತಷ್ಟು ಪ್ರೇರಣೆ ನೀಡತ್ತದೆ. ನಮ್ಮ ಪ್ರಯಾಣಿಕರು, ಪಾರ್ಟ್ನರ್ಸ್ ಬೆಂಬಲಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.