ನವದೆಹಲಿ: ಬೆಂಗಳೂರು ನಮ್ಮ ಮೆಟ್ರೋ 2ಎ ಮತ್ತು 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. 14,788 ಕೋಟಿ ವೆಚ್ಚದ 58 ಕಿಮೀ ಉದ್ದದ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
2ಎ ಹಂತ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ವರೆಗೆ ಇರಲಿದೆ. ಇನ್ನು 2ಬಿ ಹಂತ ಹೆಬ್ಬಾಳ ಮಾರ್ಗವಾಗಿ ಕೆ.ಆರ್.ಪುರಂ ಟು ಏರ್‍ಪೋರ್ಟ್ ವರೆಗೆ ವಿಸ್ತರಣೆ ಆಗಲಿದೆ ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.
Advertisement
The Govt has approved Bangalore Metro Rail Project Phase 2A from Central Silk Board Junction to K.R. Puram and Phase 2B from K.R. Puram to Airport via Hebbal Junction of total length 58 km. The total completion cost of the project is ₹14,788 Crore: @PiyushGoyal
— Piyush Goyal Office (@PiyushGoyalOffc) April 20, 2021
Advertisement
ಸದ್ಯ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ಬೆಂಗಳೂರಿಗರಿಗೆ ಸೇವೆ ನೀಡುತ್ತಿದೆ. ಕೇಂದ್ರ ಸರ್ಕಾರದ ಘೋಷಣೆಗೆ ಸಂಸದರಾದ ತೇಜಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ಲೈನ್ ಬಹುದಿನಗಳ ನಮ್ಮ ಮೆಟ್ರೋ 2ಎ ಮತ್ತು 2ಬಿ ಹಂತಕ್ಕೆ ಒಪ್ಪಿಗೆ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತೇಜಸ್ವಿ ಸೂರ್ಯ ಧನ್ಯವಾದ ಸಲ್ಲಿಸಿದ್ದಾರೆ. ಈ ಯೋಜನೆ ಆರ್ಥಿಕ ಬೆಳವಣಿಗೆಗೆ ವೇಗವನ್ನ ಮತ್ತಷ್ಟು ಹೆಚ್ಚಿಸಲಿದೆ ಎಂದಿದ್ದಾರೆ.
Advertisement
On behalf of people of Bengaluru,
I thank PM Sri @narendramodi for sanctioning most awaited Bengaluru Metro Silk Board to Airport Line.
This 21st Century Infrastructure Project will catalyse economic growth of the city.
Special thanks to Sri @HardeepSPuri for his interest. pic.twitter.com/WKFJJTji7d
— Tejasvi Surya (@Tejasvi_Surya) April 20, 2021