-ಇಂದು ಬೆಂಗಳೂರಿನಲ್ಲಿ 21 ಮಂದಿಗೆ ಸೋಂಕು
ಬೆಂಗಳೂರು: ಮಹಾಮಾರಿ ಕೊರೊನಾ ಇಂದು ಬೆಂಗಳೂರಿನ ಹೊಸ ಏರಿಯಾಗಳಿಗೂ ಕಾಲಿಟ್ಟಿದೆ. ಇವತ್ತು ಬೆಂಗಳೂರಿನ 21 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 357ಕ್ಕೆ ಏರಿಕೆಯಾಗಿದೆ.
ಶ್ರೀರಾಂಪುರದಲ್ಲಿ ವಾಸವಿರುವ ಬಿಬಿಎಂಪಿ ಜಾಹೀರಾತು ವಿಭಾಗದ ಅಧಿಕಾರಿ ಪತ್ನಿಗೆ ಕೊರೊನಾ ಬಂದಿದೆ. ಬಿಟಿಎಂ ಲೇಔಟ್, ವಿಲ್ಸನ್ ಗಾರ್ಡನ್ ನ ಇಬ್ಬರು ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ. ಬೆನ್ನು ನೋವೆಂದು ಆಸ್ಪತ್ರೆಗೆ ಹೋಗಿದ್ದ ಇಟ್ಟಮಡುವಿನ 44 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ವೈದ್ಯರ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲಾಗುತ್ತಿದೆ.
ಇಂದು ಹೊಸ 11 ಏರಿಯಾಗಳಿಗೆ ಕೊರೊನಾ ವ್ಯಾಪಿಸಿದೆ. ವೈಟ್ ಫೀಲ್ಡ್, ಬೊಮ್ಮನಹಳ್ಳಿ, ಹೆಚ್‍ಎಸ್‍ಆರ್ ಲೇಔಟ್, ಜಿಗಣಿ, ಡಿಜೆ ಹಳ್ಳಿ, ಬಿಟಿಎಂ ಲೇಔಟ್, ಹೊಂಬೇಗೌಡ ನಗರ, ಶ್ರೀರಾಂಪುರ, ಜಿಗಣಿ, ಹಗದೂರು ಮತ್ತು ಇಟ್ಟಮಡು ಏರಿಯಾಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.