ಬೆಂಗಳೂರು: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಬೆಂಗಳೂರಿಗರು ಇನ್ಮುಂದೆ ವಾಹನ ಖರೀದಿಗೂ ಮುನ್ನ ಕಡ್ಡಾಯವಾಗಿ ಬಿಬಿಎಂಪಿ ಅನುಮತಿ ಪಡೆಯಲೇಬೇಕು. ಪಾರ್ಕಿಂಗ್ ಮನೆ ಕಟ್ಟಡದ ಒಳಗೆ ಮಾಡಿದರೆ ಮಾತ್ರ ವಾಹನ ಖರೀದಿಗೆ ಅನುಮತಿ. ಪಾರ್ಕಿಂಗ್ ನೀತಿ ಕುರಿತು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಕುರಿತು ಸಮಿತಿ ರಚನೆ ಮಾಡಲಾಗಿದೆ ಅಂತ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
Advertisement
ಈ ಒಂದು ಕಠಿಣ ಕಾನೂನಿಗೆ ಹೊಸ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅಡಿಪಾಯ ಹಾಕಲಿದ್ದಾರೆ. ಹೊಸ ವಾಹನ ಖರೀದಿಗೆ ನಿಮಗೆ ಬಿಬಿಎಂಪಿ ಪರ್ಮಿಷನ್ ಬೇಕೇಬೇಕು. ಬಿಬಿಎಂಪಿ ಅನುಮತಿ ಸಿಕ್ಕ ಮೇಲಷ್ಟೇ ವಾಹನ ನೋಂದಾವಣೆ ಸಾಧ್ಯ. ಈ ತರಹದ ಕಠಿಣ ರೂಲ್ಸ್ ತರ್ತಿದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದಿದ್ರೆ ಹೊಸ ವೆಹಿಕಲ್ ಖರೀದಿಗೆ ಅನುಮತಿಯೇ ಸಿಗೋದಿಲ್ಲ.
Advertisement
Advertisement
ಪಾಲಿಕೆಗೆ ಕಮಿಟ್‍ಮೆಂಟ್ ಲೆಟರ್ ಕೊಟ್ಟರೆ ಮಾತ್ರ ಖರೀದಿಗೆ ಒಪ್ಪಿಗೆ ಸಿಗುತ್ತದೆ. ಮನೆ ಒಳಗೆ, ಪಾರ್ಕಿಂಗ್ ಸ್ಥಳದಲ್ಲಿ ನಾನು ನನ್ನ ವಾಹನ ನಿಲ್ಲಿಸುತ್ತೇನೆ ಅನ್ನುವ ಪತ್ರ ಕೊಡಲೇಬೇಕು. ಇಲ್ಲವಾದಲ್ಲಿ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲೇ ವಾಹನ ಪಾರ್ಕಿಂಗ್ ಆಗಬೇಕು. ಮನೆ ಮುಂದಿನ ರೋಡ್, ಮುಖ್ಯರಸ್ತೆಗಳ ಅಕ್ಕ-ಪಕ್ಕ ಪಾರ್ಕ್ ಮಾಡುವಂತಿಲ್ಲ.
Advertisement
ನಿಮ್ಮದೇ ಏರಿಯಾದ ಸರ್ಕಾರಿ, ಖಾಸಗಿ ಖಾಲಿ ಸೈಟ್‍ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ಈ ಕುರಿತು ಸೈಟ್ ಮಾಲೀಕರ ಜತೆ ಚರ್ಚೆ ನಡೆಸಿ ಸ್ಥಳಾವಕಾಶ ಕಲ್ಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಪಾರ್ಕಿಂಗ್ ಕುರಿತ ಸಮಿತಿ ವರದಿ ನಂತರ ಈ ಹೊಸ ನಿಯಮ ಜಾರಿಯಾಗಲಿದೆ ಅಂತ ಬೆಂಗಳೂರಿನಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.