ಬೆಂಗಳೂರು: ಒಂದು ಕಡೆ ಕೊರೊನಾ ಪೀಡಿತರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ದಿನೇ ದಿನೇ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಮತ್ತೊಂದಡೆ ಬೆಂಗಳೂರಿನ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿವೆ.
ಹೌದು..ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿರುವುದನ್ನು ಕಾಣಬಹುದಾಗಿದೆ. ಸೌತ್ ಎಂಡ್ ಸರ್ಕಲ್‍ನಿಂದ ಜೆಪಿ ನಗರ ರಸ್ತೆವರೆಗೆ 21 ಅಂಬುಲೆನ್ಸ್‌ಗಳು ನಿಂತಿವೆ.
Advertisement
Advertisement
ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸರಿಯಾಗಿ ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಇಲ್ಲಿ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗಲು ಈ ಅಂಬುಲೆನ್ಸ್ ಸಿದ್ಧವಾಗಿದ್ದಾವೆ. ಎಲ್ಲಿಂದ ಕರೆ ಬಂದರೂ ಹೋಗಿ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಅಂಬುಲೆನ್ಸ್ ಚಾಲಕರು ಹೇಳುತ್ತಿದ್ದಾರೆ.
Advertisement
Advertisement
ಬಿಬಿಎಂಪಿ ವಾರ್ಡಿಗೆ ಎರಡು ಅಂಬುಲೆನ್ಸ್‌ಗಳನ್ನು ಅನುದಾನ ಮಾಡಿದೆ. ಒಂದು ವಾರ್ಡಿಗೆ ಎಂದು ಸೀಮಿತ ಮಾಡಿ ಬೇರೆ ಕಡೆ ಯಾಕೆ ಈ ಅಂಬುಲೆನ್ಸ್‌ಗಳನ್ನು ಕರೆಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಮೂಡಿದೆ. ಹೀಗಾಗಿ ಪಾಲಿಕೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯ ಇಲ್ವಾ? ಎಂಬ ಮಾತು ಕೇಳಿ ಬರುತ್ತಿದೆ.
ಒಂದು ಕಡೆ ಕೊರೊನಾ ರೋಗಿಗಳಿಗೆ ಸೂಕ್ತ ಅಂಬುಲೆನ್ಸ್ ಸಿಗುತ್ತಿಲ್ಲ ಎಂಬ ಆರೋಪ ಹೇಳಿ ಬರುತ್ತಿದೆ. ಆದರೆ ಇಲ್ಲಿ ಮಾತ್ರ ಕರೆದುಕೊಂಡು ಬರುವುದಕ್ಕೆ ರೋಗಿಗಲೇ ಸಿಗುತ್ತಿಲ್ಲ ಎಂದು 21 ಅಂಬುಲೆನ್ಸ್‌ಗಳು ಸಾಲಾಗಿ ನಿಂತಿವೆ.