– ಬೆಂಗಳೂರು, ಕರ್ನಾಟಕದಲ್ಲಿ ದಾಖಲೆ
– ಒಟ್ಟು ಸೋಂಕಿತರ ಸಂಖ್ಯೆ 19,710 ಏರಿಕೆ
– ಒಂದೇ ದಿನ 21 ಸಾವು, 471 ಮಂದಿ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು ಒಟ್ಟು 1,694 ಮಂದಿಗೆ ಸೋಂಕು ಬಂದಿದ್ದು ಬೆಂಗಳೂರಿನಲ್ಲಿ ಒಂದೇ ದಿನ ದಾಖಲೆಯ 994 ಮಂದಿಗೆ ಸೋಂಕು ಬಂದಿದೆ.
ಇಂದು ಒಟ್ಟು 21 ಮಂದಿ ಮೃತಪಟ್ಟಿದ್ದು, 471 ಮಂದಿ ಬಿಡುಗಡೆಯಾಗಿದ್ದಾರೆ. ಐಸಿಯುನಲ್ಲಿ 201 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 19,710ಕ್ಕೆ ಏರಿಕೆಯಾಗಿದ್ದು, 293 ಮಂದಿ ಮೃತಪಟ್ಟಿದ್ದಾರೆ. ಒಟ್ಟು 8,805 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು ನಗರ 994, ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರಗಿ 72, ತುಮಕೂರು 57, ಬೆಂಗಳೂರು ಗ್ರಾಮಾಂತರ 44, ಧಾರವಾಡ 38, ಮೈಸೂರು 35, ಮಂಡ್ಯ 33, ಬೀದರ್ 28, ಚಾಮರಾಜನಗರ 24, ಶಿವಮೊಗ್ಗ 23, ಗದಗ 19, ಉಡುಪಿ 16, ಕೊಡಗು 16, ಯಾದಗಿರಿ 14, ಹಾಸನ 13, ಬೆಳಗಾವಿ 13, ಕೋಲಾರ 11, ರಾಮನಗರ 10, ಬಾಗಲಕೋಟೆ 8, ರಾಯಚೂರು 7, ದಾವಣಗೆರೆ 5, ಉತ್ತರ ಕನ್ನಡ 5, ವಿಜಯಪುರ 4, ಕೊಪ್ಪಳ 4, ಚಿಕ್ಕಬಳ್ಳಾಪುರ 3, ಚಿತ್ರದುರ್ಗ 3, ಹಾವೇರಿ 1 ಪ್ರಕರಣ ದೃಢಪಟ್ಟಿದೆ.
ಎಷ್ಟು ಮಂದಿ ಬಿಡುಗಡೆ?
ಬೆಂಗಳೂರು ನಗರ 197, ದಕ್ಷಿಣ ಕನ್ನಡ 51, ಬಳ್ಳಾರಿ 28, ವಿಜಯಪುರ 28, ಕೊಪ್ಪಳ 26, ಧಾರವಾಡ 20, ಮೈಸೂರು 20, ಯಾದಗಿರಿ 17, ಕಲಬುರಗಿ 17, ಉಡುಪಿ 14, ದಾವಣಗರೆ 13, ಗದಗ 12, ಹಾಸನ 9, ಉತ್ತರ ಕನ್ನಡ 8, ಕೋಲಾರ 5, ಹಾವೇರಿ, ಚಿಕ್ಕಬಳ್ಳಾಪುರ, ಮಂಡ್ಯದಲ್ಲಿ ತಲಾ ಇಬ್ಬರಿಗೆ ಕೊರೊನಾ ಬಂದಿದೆ.
ಐಸಿಯುನಲ್ಲಿ ಎಷ್ಟು ಮಂದಿ?
ಒಟ್ಟು 201 ಮಂದಿ ಐಸಿಯುನಲ್ಲಿದ್ದಾರೆ. ಬೆಂಗಳೂರು 121, ಧಾರವಾಡ19, ಹಾಸನ 9, ಬೀದರ್ 6, ರಾಯಚೂರು 5, ಬಳ್ಳಾರಿ 5, ಉಡುಪಿ 4, ಕಲಬುರಗಿ, ಮೈಸೂರು, ಗದಗ, ಕೋಲಾರ, ಬಾಗಲಕೋಟೆ , ತುಮಕೂರಿನಲ್ಲಿ ತಲಾ ಮೂವರು, ಶಿವಮೊಗ್ಗ, ಬೆಳಗಾವಿ, ಚಾಮರಾಜನಗರ, ದಕ್ಷಿಣ ಕನ್ನಡ, ಕೊಪ್ಪಳದಲ್ಲಿ ತಲಾ ಇಬ್ಬರು, ಕೊಡಗು, ದಾವಣಗೆರೆ, ಮಂಡ್ಯದಲ್ಲಿ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.