ಬೆಂಗಳೂರು: ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮಾರ್ಗಸೂಚಿ ಬರುವುದು ಫಿಕ್ಸ್ ಆಗಿದೆ. ಡಿಸೆಂಬರ್ 30 ಮತ್ತು 31ಕ್ಕೆ ಕಟ್ಟು ನಿಟ್ಟಿನ ಕ್ರಮ ಇರುತ್ತೆ ಅಂತ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದಾರೆ.
ಬ್ರಿಟನ್‍ನಿಂದ ಬೆಂಗಳೂರಿಗೆ ಬಂದವರ ಪೈಕಿ 150 ಜನ ನಾಪತ್ತೆಯಾಗಿರೋದು ಒಂದುಕಡೆ ಆತಂಕ ಹೆಚ್ಚಿಸಿದೆ. ಇದರ ಮಧ್ಯೆಯೇ ಹೊಸ ವರ್ಷಕ್ಕೆ ಬೆಂಗಳೂರು ಸಜ್ಜಾಗ್ತಿದೆ. ಈಗ ಬ್ರಿಟನ್ ಕೊರೊನಾ ಹರಡುವುದನ್ನು ನಿಯಂತ್ರಣ ಮಾಡುವ ಸಲುವಾಗಿ ಬೆಂಗಳೂರಿನಲ್ಲಿ 2 ದಿನ ಟಫ್ ರೂಲ್ಸ್ ಜಾರಿ ಮಾಡ್ತೇವೆ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Advertisement
Advertisement
ಈಗಿನ ಕೊರೋನಾ ನಿಯಂತ್ರಣ ಒಂದು ಹಂತಕ್ಕೆ ಬರುತ್ತಿತ್ತು. ಈ ಹೊತ್ತಲ್ಲೇ ಬ್ರಿಟನ್ ರೂಪಾಂತರ ಕೊರೊನಾ ಆತಂಕ ಹುಟ್ಟಿಸಿದೆ. ಹೊಸ ವರ್ಷದಲ್ಲಿ ಹೆಚ್ಚು ಜನ ಸೇರುತ್ತಾರೆ. ಹೀಗಾಗಿ ಕೆಲವು ನಿರ್ಬಂಧ ಹೇರುತ್ತೇವೆ. ಈ ಸಂಬಂಧ ಕಂದಾಯ ಸಚಿವರು, ಬಿಬಿಎಂಪಿ ಮತ್ತು ನಗರ ಪೋಲೀಸ್ ಆಯುಕ್ತರು ಕಾರ್ಯೋನ್ಮುಖರಾಗಿದ್ದಾರೆ ಅಂತ ಹೇಳಿದ್ದಾರೆ. ಇದೇ ವೇಳೆ ಯೂರೋಪ್‍ನಿಂದ ಬರುವವರ ಮೇಲೆ ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದಿದ್ದಾರೆ.
Advertisement
ಗೃಹ ಸಚಿವ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್‍ಪಂಥ್ ಅವರು ಮಾರ್ಗಸೂಚಿ ರೆಡಿ ಮಾಡ್ತಿದ್ದಾರೆ. ಈ ಬಗ್ಗೆ ಮಾತನಾಡಿ, 30 ಮತ್ತು 31 ರಂದು ಟಫ್ ರೂಲ್ಸ್ ಇರಲಿದೆ ಎಂದು ಹೇಳಿದ್ದಾರೆ.
Advertisement
ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಹಾಗೂ ಎಂಜಿ ರಸ್ತೆಯಲ್ಲಿ ಯಾವುದೇ ಹೊಸ ವರ್ಷಾಚರಣೆ ಇಲ್ಲ. ಸಾರ್ವಜನಿಕ ರಸ್ತೆಗಳಲ್ಲಿ ಸಂಭ್ರಮಾಚರಣೆ ಅವಕಾಶಗಳಿಲ್ಲ. ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಡಿಸೆಂಬರ್ 17ರಂದು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯೇ ಹೆಚ್ಚುಕಮ್ಮಿ ಇರಲಿದೆ. ಏನೆಲ್ಲಾ ಕ್ರಮ ಜರುಗಿಸಬೇಕು? ಯಾವುದಕ್ಕೆ ವಿನಾಯಿತಿ ಕೊಡ್ಬೇಕು ಅಂತ ಅಧಿಕಾರಿಗಳ ಜೊತೆ ಚರ್ಚಿಸ್ತೇನೆ. ಡಿ.30ಕ್ಕೆ ಮಾರ್ಗಸೂಚಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.