– 9 ಜಿಲ್ಲೆಗಳಲ್ಲಿ ಎರಡಂಕಿಗೆ ಇಳಿದ ಸೋಂಕು
– ಮೂರು ಜಿಲ್ಲೆ ಹೊರತುಪಡಿಸಿ ಒಂದಂಕಿಗೆ ಇಳಿದ ಮರಣ ಪ್ರಮಾಣ
ಬೆಂಗಳೂರು: ರಾಜಧಾನಿಯಲ್ಲಿ ಒಂದೂವರೆ ಸಾವಿರಕ್ಕೂ ಕಡಿಮೆ ಪ್ರಕರಣಗಳು ವರದಿಯಾಗಿದ್ದು, ಪಾಸಿಟಿವಿಟಿ ರೇಟ್ ಶೇ.1.84ಕ್ಕೆ ಇಳಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ 1,154 ಜನಕ್ಕೆ ಸೋಂಕು ತಗುಲಿದ್ದು, 48 ಸೋಂಕಿತರು ಸಾವನ್ನಪ್ಪಿದ್ದಾರೆ.
Advertisement
ರಾಜ್ಯದಲ್ಲಿ 8,249 ಜನಕ್ಕೆ ಸೋಂಕು ತಗುಲಿದ್ದು, 159 ಮಂದಿ ಸಾವನ್ನಪ್ಪಿದ್ದಾರೆ. 14,975 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಹರಡುವಿಕೆ ಪ್ರಮಾಣ ಶೇ.4.86ಕ್ಕೆ ಇಳಿದ್ರೆ, ಮರಣ ಪ್ರಮಾಣ ಶೇ.1.92ಕ್ಕೆ ಇಳಿಕೆ ಕಂಡಿದೆ.
Advertisement
Advertisement
ಇದುವರೆಗೂ ರಾಜ್ಯದಲ್ಲಿ 32,644 ಜನ ಕೊರೊನಾಗೆ ಬಲಿಯಾಗಿದ್ದು, ಸದ್ಯ 2,03,769 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾ ಪರೀಕ್ಷೆಗೆ 1,69,695 ಸ್ಯಾಂಪಲ್ ಗಳನ್ನು ಒಳಪಡಿಸಲಾಗಿತ್ತು. ಬೆಂಗಳೂರಿನಲ್ಲಿ 91,760 ಸಕ್ರಿಯ ಪ್ರಕರಣಗಳಿವೆ. ರಾಜ್ಯದ 9 ಜಿಲ್ಲೆಗಳಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದ್ರೆ, ಬೆಂಗಳೂರು ನಗರ, ಹಾವೇರಿ ಮತ್ತು ಮೈಸೂರು ಹೊರತುಪಡಿಸಿ ಎಲ್ಲ ಜಿಲ್ಲೆಗಳಲ್ಲಿ ಮರಣ ಸಂಖ್ಯೆ ಒಂದಂಕಿಗೆ ತಲುಪಿದೆ.
Advertisement
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ:?
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 73, ಬಳ್ಳಾರಿ 189, ಬೆಳಗಾವಿ 436, ಬೆಂಗಳೂರು ಗ್ರಾಮಾಂತರ 234, ಬೆಂಗಳೂರು ನಗರ 1,154, ಬೀದರ್ 9, ಚಾಮರಾಜನಗರ 162, ಚಿಕ್ಕಬಳ್ಳಾಪುರ 168, ಚಿಕ್ಕಮಗಳೂರು 332, ಚಿತ್ರದುರ್ಗ 123, ದಕ್ಷಿಣ ಕನ್ನಡ 506, ದಾವಣಗೆರೆ 260, ಧಾರವಾಡ 217, ಗದಗ 66, ಹಾಸನ 733, ಹಾವೇರಿ 65, ಕಲಬುರಗಿ 29, ಕೊಡಗು 189, ಕೋಲಾರ 179, ಕೊಪ್ಪಳ 98, ಮಂಡ್ಯ 366, ಮೈಸೂರು 817, ರಾಯಚೂರು 61, ರಾಮನಗರ 57, ಶಿವಮೊಗ್ಗ 429, ತುಮಕೂರು 576, ಉಡುಪಿ 215, ಉತ್ತರ ಕನ್ನಡ 311, ವಿಜಯಪುರ 174 ಮತ್ತು ಯಾದಗಿರಿಯಲ್ಲಿ 21 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.