ಬೆಂಗಳೂರು: ಮನುಕುಲಕ್ಕೆ ಬೆನ್ನಿಗಂಟಿದ ಬೇತಾಳದಂತೆ ಮಾರ್ಪಟ್ಟಿರುವ ಕೊರೋನಾ ಹೆಮ್ಮಾರಿ ಸದ್ಯಕ್ಕೆ ಬಿಟ್ಟು ಹೋಗುವ ರೀತಿ ಕಾಣುತ್ತಿಲ್ಲ. ನವೆಂಬರ್‌ವರೆಗೆ ಅಲ್ಲ, ಡಿಸೆಂಬರ್‌ವರಗೆ ಅಲ್ಲ, ಫೆಬ್ರವರಿ ಕಳೆದರೂ ಕೂಡ ಸೋಂಕು ಕಡಿಮೆ ಆಗುವ ಲಕ್ಷಣವೂ ಇಲ್ಲ.
ಅಕ್ಟೋಬರ್, ನವೆಂಬರ್ ಹೊತ್ತಿಗೆ ಅಂದ್ರೆ ದೀಪಾವಳಿ ವೇಳೆಗೆ ನೀವು ಊಹಿಸಲಾಗದ ಮಟ್ಟಕ್ಕೆ ಕೊರೋನಾ ಸೋಂಕು ವ್ಯಾಪಿಸುತ್ತದೆ. ಸೋಂಕು ಪೀಕ್‍ಗೆ ಹೋಗುತ್ತೆ. ಸಾವು ನೋವುಗಳು ಹೆಚ್ಚಾಗಬಹುದು ಎನ್ನಲಾಗುತ್ತಿದೆ.
Advertisement
Advertisement
ಕೊರೋನಾ ಹಾಟ್‍ಸ್ಪಾಟ್ ಸಿಟಿಯಾಗಿ ಮಾರ್ಪಟ್ಟಿರುವ ಬೆಂಗಳೂರಿನಲ್ಲಿ ಫೆಬ್ರವರಿ ಹೊತ್ತಿಗೆ 1.20 ಲಕ್ಷ ಮಂದಿ ಸೋಂಕಿಗೆ ತುತ್ತಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಇವರಿಗೆಲ್ಲ ಎಲ್ಲಿ ಆಸ್ಪತ್ರೆ ಸೌಲಭ್ಯ ಒದಗಿಸೋದು ಎಂಬ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿದೆ.
Advertisement
ಈ ಪೈಕಿ ಶೇ.80ಕ್ಕೂ ಹೆಚ್ಚು ಪ್ರಕರಣಗಳು ಕೊರೋನಾ ಗುಣ ಲಕ್ಷಣ ಹೊಂದಿರದೇ ನಿಗೂಢವಾಗಿ ಇರುತ್ತವೆ. ಹೀಗಾಗಿ ಎಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಅಗತ್ಯ ಎದುರಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
Advertisement
ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್, ಇನ್ನೂ ನಾಲ್ಕಾರು ತಿಂಗಳು ಕೊರೋನಾ ಇರಲಿದೆ. ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಇದು ತೀವ್ರ ಸ್ಥಾಯಿ ತಲುಪಬಹುದು. ತಕ್ಷಣಕ್ಕೆ ಇದು ನಿಲ್ಲುವಂಥಾದ್ದೂ ಅಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ.