ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ದರ ಏರಿಕೆ ಮತ್ತೆ ಮುಂದುವರಿದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು ಸೆಂಚುರಿ ಬಾರಿಸಿದೆ. ಈ ಮೂಲಕ 1 ಲೀಟರ್ ಪೆಟ್ರೋಲ್ ಬೆಲೆ 100.23 ರೂಪಾಯಿ ತಲುಪಿದೆ.
Advertisement
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 100 ರೂಪಾಯಿ ಗಡಿದಾಟಿದೆ. ಇಂದು ಪೆಟ್ರೋಲ್ ಬೆಲೆ 28 ಪೈಸೆ ಏರಿಕೆ ಕಂಡು 1 ಲೀಟರ್ ಗೆ 100.23 ರೂ ಆಗಿದೆ. ಡಿಸೇಲ್ ದರ 44 ಪೈಸೆ ಏರಿಕೆ ಕಂಡು ಲೀಟರ್ ಗೆ 93.02 ರೂಪಾಯಿ ತಲುಪಿದೆ. ಇದನ್ನೂ ಓದಿ: SSLC ಪರೀಕ್ಷೆ ಬಗ್ಗೆ ಭಯ ಬೇಡ – ಎರಡು ದಿನ ಎರಡೇ ಪೇಪರ್
Advertisement
Advertisement
ನಗರದಲ್ಲಿ ನಿನ್ನೆ ಪೆಟ್ರೋಲ್ ಲೀಟರ್ ಗೆ 99.95 ರೂಪಾಯಿ ಮತ್ತು ಡಿಸೇಲ್ ಲೀಟರ್ ಗೆ 92.38 ರೂಪಾಯಿ ಆಗಿತ್ತು. ಇಂದು ಮತ್ತೆ ಏರಿಕೆಯತ್ತ ಮುಖಮಾಡಿ ಪೆಟ್ರೋಲ್ ಸೆಂಚುರಿ ಬಾರಿಸಿದೆ. ಈ ಮೂಲಕ ಮತ್ತೆ ವಾಹನ ಚಾಲಕರಿಗೆ ಪೆಟ್ರೋಲ್, ಡಿಸೇಲ್ ಬರೆ ಬಿದ್ದಿದೆ. ಇದನ್ನೂ ಓದಿ: SSLC ಪರೀಕ್ಷೆ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ
Advertisement
ಕೆಲ ದಿನಗಳ ಹಿಂದೆ ಹೈದರಾಬಾದ್ ಮತ್ತು ತೆಲಂಗಾಣದಲ್ಲೂ ಪೆಟ್ರೋಲ್ ದರ ಶತಕ ತಲುಪಿತ್ತು. ಭೋಪಾಲ್‍ನಲ್ಲಿ ಲೀಟರ್ ಗೆ 104.53 ರೂಪಾಯಿ ತಲುಪಿತ್ತು. ಇಂದು ಡೆಲ್ಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 96.93 ರೂಪಾಯಿ. ಡಿಸೇಲ್‍ಗೆ ಲೀಟರ್ ಗೆ 87.69 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 103.08 ರೂಪಾಯಿ, ಡಿಸೇಲ್ ಲೀಟರ್ ಗೆ 95.14 ರೂಪಾಯಿ ಆಗಿದೆ.