ಬೆಂಗಳೂರು: ಉತ್ತರ ಕರ್ನಾಟಕದ ಬಳಿಕ ರಣ ಮಳೆ ಈಗ ಬೆಂಗಳೂರನ್ನು ಅಟಕಾಯಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಚಿತ್ತಾ ಮಳೆ ತನ್ನ ಕುರುಡಾಟ ಪ್ರದರ್ಶಿಸುತ್ತಿದೆ. ಯಾವಾಗಂದ್ರೆ ಆಗ ಮಳೆ ಸುರಿದು ನಾನಾ ಅವಾಂತರ ಸೃಷ್ಟಿ ಮಾಡುತ್ತಿದೆ.
ಕುರುಡ ಚಿತ್ತನ ಆಟಕ್ಕೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಬೆಂಗಳೂರಲ್ಲಿ ಬೆಳಗ್ಗೆಯಿಂದ ಸೂರ್ಯ ದರ್ಶನ ಆಗಿರಲಿಲ್ಲ. ಮಧ್ಯಾಹ್ನದವರೆಗೂ ನಗರದಲ್ಲಿ ಮೋಡಗಳ ಆಟ ಜೋರಿತ್ತು. ಆದರೆ ಆ ಬಳಿಕ ನಗರದಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯಿತು. ಅದ್ರಲ್ಲೂ ಸಂಜೆ ಮಳೆಗೆ ಬೆಂಗಳೂರಿನ ದಕ್ಷಿಣ ಭಾಗದ ಪರಿಸ್ಥಿತಿ ಭೀಕರವಾಗಿದೆ.
Advertisement
ಹೊಸಕೆರೆಹಳ್ಳಿ, ಬಸವನಗುಡಿ, ಕೆಂಗೇರಿ ಸೇರಿ ಹಲವು ಪ್ರದೇಶಗಳು ಹೈದರಾಬಾದ್‍ನ ಪ್ರವಾಹವನ್ನು ನೆನಪಿಸುತ್ತಿವೆ. ಬೋಟ್‍ಗಳಲ್ಲಿ ರಕ್ಷಣಾ ಕಾರ್ಯ ನಡೆದಿದೆ. ನೂರಾರು ವಾಹನಗಳು ಆಟಿಕೆಗಳ ರೀತಿಯಲ್ಲಿ ಕೊಚ್ಚಿ ಹೋಗಿವೆ. ವಾಹನ ಸವಾರರು ದಿಕ್ಕೆಟ್ಟಿದ್ದಾರೆ. ನೂರಾರು ಮನೆಗಳು ಮುಳುಗಡೆ ಆಗಿವೆ. ಸಾವಿರಾರು ಜನ ಜಲ ದಿಗ್ಬಂಧನದಲ್ಲಿ ಸಿಲುಕಿದ್ದಾರೆ. ಇದನ್ನೂ ಓದಿ: ನಾಳೆಯೂ ಬೆಂಗಳೂರಿನಲ್ಲಿ ಮಹಾಮಳೆ – ಯೆಲ್ಲೋ ಅಲರ್ಟ್ ಘೋಷಣೆ
Advertisement
Advertisement
ಸದ್ಯ ಕರೆಂಟ್ ಇಲ್ಲದೇ, ಜನ ಕತ್ತಲೆಯಲ್ಲಿ ಕಳೆಯುವಂತಾಗಿದೆ. ನೀರು ತುಂಬಿದ ಸ್ಥಳಗಳಿಗೆ ಸಚಿವ ಅಶೋಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರವೂ ಬೆಂಗಳೂರಿನಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Advertisement
ಎಲ್ಲೆಲ್ಲಿ ಎಷ್ಟು ಮಳೆ?
ಕೆಂಗೇರಿ – 103 ಮಿ.ಮೀ
ಆರ್‍ಆರ್ ನಗರ – 102 ಮಿ.ಮೀ
ವಿದ್ಯಾಪೀಠ – 95 ಮಿ.ಮೀ
ಉತ್ತರಹಳ್ಳಿ – 87 ಮಿ.ಮೀ
ಕೋಣಕುಂಟೆ – 83 ಮಿ.ಮೀ
ಬಸವನಗುಡಿ – 81 ಮಿ.ಮೀ
ಕುಮಾರಸ್ವಾಮಿ ಲೇಔಟ್ – 79 ಮಿ.ಮೀ
ವಿವಿ ಪುರ – 71 ಮಿ.ಮೀ