ಬೆಂಗಳೂರು: ರಾಜಧಾನಿಯಲ್ಲಿಂದು ಸಂಜೆ ಆಗುತ್ತಿದ್ದಂತೆ ಮಳೆರಾಯ ಎಂಟ್ರಿ ನೀಡಿದ್ದಾನೆ. ಶುಕ್ರವಾರ ಸುರಿದ ಮಳೆಗೆ ತತ್ತರಿಸಿರುವ ಜನರಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಮತ್ತೆ ನೀರು ಎಲ್ಲಿ ಮನೆಯೊಳಗೆ ಬರುತ್ತೆ ಭಯದಲ್ಲಿದ್ದಾರೆ. ನಗರದ ಯಶವಂತಪುರ, ಪೀಣ್ಯ, ಮಲ್ಲೇಶ್ವರಂ ಸೇರಿ ಹಲವೆಡೆ ಮಳೆ ಆಗುತ್ತಿದೆ.
ಮಳೆಯಿಂದಾಗಿ ಜಲಾವೃತಗೊಂಡಿದ್ದ ಹೊಸಕೆರೆ ಹಳ್ಳಿಯ ಜನರ ಇಂದು ಕೆಸರಿನಲ್ಲಿ ಸಿಲುಕಿದ್ದ ವಾಹನಗಳನ್ನು ಸ್ವಚ್ಛಗೊಳಿಸಿದರು. ಹಬ್ಬದ ಸಂಭ್ರಮಕ್ಕೆ ಮಳೆರಾಯ ತಣ್ಣೀರು ಎರಚಿದ್ದರಿಂದ ಜನರು ದಿನನಿತ್ಯದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇವತ್ತು ಕುಮಾರಸ್ವಾಮಿ ಲೇಔಟ್, ದತ್ತಾತ್ರೇಯ ವಾರ್ಡ್, ಹೊಸಕೆರೆಹಳ್ಳಿಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಕಂದಾಯ ಸಚಿವ ಆರ್. ಅಶೋಕ್ ಪರಿಹಾರ ಚೆಕ್ ವಿತರಿಸಿದರು.
ಸತತವಾಗಿ ಸುರಿದ ಮಳೆಯಿಂದ ಹೊಸಕೆರೆಹಳ್ಳಿ ನಿವಾಸಿಗಳ ಮನೆಯಲ್ಲಿ ನೀರು ನಿಂತು ವೃದ್ಧರು, ಮಕ್ಕಳು ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿದ 344 ಪರಿವಾರಗಳಿಗೆ ತಲಾ ₹25000 ಚೆಕ್ ವಿತರಿಸಲಾಯಿತು.
ಪರಿಸ್ಥಿತಿ ಮೊದಲಿನಂತಾಗುವವರೆಗೂ ಸರ್ಕಾರ ಇವರ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತದೆ pic.twitter.com/VLzmDFQORb
— R. Ashoka (ಆರ್. ಅಶೋಕ) (@RAshokaBJP) October 25, 2020
ಚೆಕ್ ವಿತರಣೆ ಬಳಿಕ ಮಾತನಾಡಿದ ಆರ್.ಅಶೋಕ್, ಒಟ್ಟು 600ಕ್ಕೂ ಹೆಚ್ಚು ಸಂತ್ರಸ್ತರಿಗೆ 25 ಸಾವಿರ ರೂ. ಪರಿಹಾರ ಚೆಕ್ ವಿತರಿಸ್ತಿದ್ದೇವೆ. ನೆಲಮಹಡಿಯಲ್ಲಿ ಇರೋರಿಗೆ ಮಾತ್ರ ಪರಿಹಾರ, ಫಸ್ಟ್ ಫ್ಲೋರ್, ಸೆಕೆಂಡ್ ಫ್ಲೋರ್ ನಲ್ಲಿ ಇರೋರಿಗೆ ಪರಿಹಾರ ಇಲ್ಲ. ಈ ಮಧ್ಯೆ ಬೆಂಗಳೂರಿಗೆ ಮಳೆ ವಕ್ಕರಿಸಿದೆ. ಇದೇ ರೀತಿ ರಾತ್ರಿಯಿಡಿ ಮಳೆ ಆದಲ್ಲಿ, ಮೊನ್ನೆಯಂತೆ ಬೆಂಗಳೂರು ಆಗುತ್ತಾ ಅನ್ನೋ ಆತಂಕ ಎದುರಾಗಿದೆ.