– ದೇಶದಲ್ಲಿ 20 ಮಂದಿಗೆ ಪಾಸಿಟಿವ್
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬ್ರಿಟನ್ ಕೊರೊನಾ ವೈರಸ್ ಹರಡುತ್ತಿರುವ ಬಗ್ಗೆ ಅನುಮಾನಗಳು ದಟ್ಟವಾಗಿವೆ. ರಾಜ್ಯದಲ್ಲಿ ರೂಪಾಂತರಿ ಕೊರೊನಾ ವೈರಸ್ ತಗುಲಿರುವ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಇದುವರೆಗೂ ದೇಶದ 20 ಜನ ಈ ಹೊಸ ಸೋಂಕಿಗೆ ತುತ್ತಾಗಿದ್ದಾರೆ.
ಬ್ರಿಟನ್ ನಿಂದ ವಾಪಸ್ ಆಗಿದ್ದವರ ವರದಿ ಪಾಸಿಟಿವ್ ಬಂದಿದ್ದು, ಸೋಂಕಿತ ಹಾಗೂ ಅವರ ಸಂಪರ್ಕದಲ್ಲಿರುವ ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದ ಮೂವರ ಬಗ್ಗೆ ಮಾಹಿತಿ ಲಭ್ಯವಾಗಬೇಕಿದೆ.
Advertisement
ಮಂಗಳವಾರ ಉತ್ತರಹಳ್ಳಿ ವಸಂತಪುರದ ಇಬ್ಬರು ಒಂದೇ ಕುಟುಂಬದವರು. ಇನ್ನೊಬ್ಬರು ಜೆ.ಪಿ. ನಗರದ ನಿವಾಸಿಗೆ ಸೋಂಕು ತಗುಲಿತ್ತಿ. ಡಿಸೆಂಬರ್ 18ರಂದು ಲಂಡನ್‍ನಿಂದ ಕೋಣನಕುಂಟೆ ಉತ್ತರಹಳ್ಳಿ ಮುಖ್ಯರಸ್ತೆಯ ವಸಂತಪುರಕ್ಕೆ ವಾಪಸ್ ಆಗಿದ್ದ ಮಹಿಳೆ ಮತ್ತು ಮಗುವಿಗೆ ಬ್ರಿಟನ್ ಕೊರೋನಾ ಸೋಂಕು ತಗುಲಿತು. ಮಹಿಳೆಯ ಪತಿಗೂ ಸಾಮಾನ್ಯ ಕೊರೊನಾ ಬಂದಿದೆ. ವಿಷಯ ಗೊತ್ತಾದ ಕೂಡಲೇ ಮೂವರು ಸೋಂಕಿತರು, ಅವ್ರ ಪ್ರಾಥಮಿಕ ಮತ್ತು ದ್ವ್ವಿತೀಯ ಸಂಪರ್ಕದಲ್ಲಿದ್ದವರನ್ನು ಸಾಂಸ್ಥಿಕ ಕ್ವಾರಂಟೇನ್‍ನಲ್ಲಿ ಇರಿಸಲಾಗಿದೆ.
Advertisement
ಹೊಸ ಸೋಂಕಿಗೆ ತುತ್ತಾದವರು ವಾಸವಿದ್ದ ಅಪಾರ್ಟ್‍ಮೆಂಟನ್ನು 14 ದಿನ ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಅಪಾರ್ಟ್‍ಮೆಂಟ್ ನಿವಾಸಿಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಲು ಬಿಬಿಎಂಪಿ ಆರೋಗ್ಯಾಧಿಕಾರಿಗಳು ನೋಡಿದ್ರು. ಆದರೆ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿರುವ 12 ಕುಟುಂಬಗಳ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯ್ತು. ಹೀಗಾಗಿ ಬಿಬಿಎಂಪಿ ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಿ, ಸ್ಯಾನಿಟೈಸ್ ಕೂಡ ಮಾಡಿದೆ