ಬೆಂಗಳೂರು: ಇಷ್ಟು ದಿನ ನಗರಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಸಾಂಕ್ರಾಮಿಕ ರೋಗ, ಇದೀಗ ಹಳ್ಳಿಗಳಿಗೂ ಕಾಲಿಟ್ಟಿದೆ. ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಜಿಲ್ಲೆಗಳಲ್ಲಿ ಸೋಂಕು ಸ್ಫೋಟಗೊಳ್ಳುತ್ತಿದೆ.
Advertisement
ಯಾಕೆ ಹೆಚ್ಚಾಯ್ತು?
ಆರಂಭದ ಹಂತದಲ್ಲಿ ಸರ್ಕಾರ ಕೇವಲ ಬೆಂಗಳೂರಿನತ್ತ ಗಮನವನ್ನು ಕೇಂದ್ರೀಕರಿಸಿತು. ಜಿಲ್ಲೆಗಳಿಗೆ ಬೆಂಗಳೂರಿನಿಂದ ಗುಳೆ ಹೊರಡುವ ಸಮಯದಲ್ಲಿ ಸರ್ಕಾರ ಗ್ರಾಮೀಣ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸುವ ಗೋಜಿಗೆ ಹೋಗದೇ ಸುಮ್ಮನಾಯಿತು. ಹೀಗಾಗಿ ನಗರದತ್ತ ಇದ್ದ ಕೊರೊನಾ ಇದೀಗ ಹಳ್ಳಿಗಳಿಗಳಲ್ಲಿಯೂ ಹಬ್ಬುತ್ತಿದೆ.
Advertisement
ಮಾರ್ಗಸೂಚಿ ಸಡಿಲಿಕೆ ಮಾಡಿದ್ದರಿಂದ ಉಸ್ತುವಾರಿ ಸಚಿವರುಗಳು ಆಯಾಯ ಜಿಲ್ಲೆಯ ಪರಿಸ್ಥಿತಿಯನ್ನು ಮನಕಂಡು ಟಫ್ ರೂಲ್ಸ್ ತರುವುದಕ್ಕೆ ಹೊರಟಿದ್ದರು. ಆದರೆ ಸರ್ಕಾರ ಆರ್ಥಿಕತೆಗೆ ಹೊಡೆತ ಬೀಳಬಹುದು ಎಂಬ ಕಾರಣ ನೀಡಿ ಟಫ್ ರೂಲ್ಸ್‍ಗೆ ಅವಕಾಶ ನೀಡಲಿಲ್ಲ.
Advertisement
Advertisement
ಗ್ರಾಮೀಣ ಭಾಗದಲ್ಲಿ ಖಾಕಿ ಫೋರ್ಸ್‍ನ್ನು ಜನರನ್ನು ನಿಯಂತ್ರಿಸಲು ಇನ್ನಷ್ಟು ಹೆಚ್ಚಾಗಿ ಬಳಸಬೇಕಾಗಿತ್ತು. ಆದರೆ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಇಲ್ಲದೇ ಜನರು ಓಡಾಟ ನಡೆಸಿದರು. ಅಲ್ಲದೆ ಮದುವೆ ಸಮಾರಂಭಗಳಿಗೆ ಅವಕಾಶ ಕೊಂಡಿದ್ದರಿಂದ ಸ್ಥಳೀಯ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಹೆಚ್ಚಿನ ಜನ ಸೇರುತ್ತಿದ್ದರು.
ಲಾಕ್‍ಡೌನ್ ಮೇಲೆ ನಿಗಾ ಇಡಲು ಜಿಲ್ಲಾಡಳಿತ ವಿಫಲವಾಗಿತ್ತು. ಇನ್ನೂ ಹೆಚ್ಚು ಕೇಸ್ ಇರುವ ಭಾಗದಲ್ಲಿ ಮಾರ್ಕೆಟ್‍ಗಳ ತೆರೆದಿದ್ದರಿಂದ ಜನರು ಹೆಚ್ಚಾಗಿ ಸೇರುತ್ತಿದ್ದರು. ಜಿಲ್ಲೆಗಳಲ್ಲಿ ಟೆಸ್ಟಿಂಗ್‍ನತ್ತ ಕೂಡ ಗಮನವೇ ಹರಿಸಿಲ್ಲ. ಟೆಸ್ಟಿಂಗ್ ಹೆಚ್ಚಿಸಬೇಕಾಗಿತ್ತು.
ಪ್ರಾಥಮಿಕ ಸಂಪರ್ಕಿತರ ಟ್ರೇಸಿಂಗ್‍ನಲ್ಲಿ ಜಿಲ್ಲಾಡಳಿತ ಕೂಡ ಎಡವಿತು. ಈ ಎಲ್ಲಾ ಕಾರಣಗಳಿಂದ ನಗರಗಳಷ್ಟೇ ಅಲ್ಲದೆ ಹಳ್ಳಿಗಳಲ್ಲಿಯೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.