ಬೆಂಗಳೂರು: ಇಂದು ಕಾವೇರಿದ್ದ ರೈತರ ಪ್ರತಿಭಟನೆ ನಾಳೆಯೂ ಬೆಂಗಳೂರಿನಲ್ಲಿ ಮುಂದುವರಿಯಲಿದೆ. ನಾಳೆ ಬೆಂಗಳೂರಿಗೆ ನೇಗಿಲ ಯೋಗಿಯ ಪ್ರತಿಭಟನೆಯ ಕಿಚ್ಚು ಬೆಂಗಳೂರಿಗೆ ತುಸು ಹೆಚ್ಚಾಗೇ ತಾಗಲಿದೆ.
ಬುಧವಾರ 10 ಸಾವಿರ ಅನ್ನದಾತರು ಬಾರುಕೋಲು ಚಳವಳಿ ನಡೆಸಲಿದ್ದಾರೆ. ಸಿಟಿ ರೈಲ್ವೆ ನಿಲ್ದಾಣದಿಂದ ಬೃಹತ್ ರ‌್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ರೈತರು ಪ್ಲಾನ್ ಮಾಡಿದ್ದಾರೆ. ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕರವೇ ನಾರಾಯಣ ಗೌಡ ಬಣವೂ ರ‌್ಯಾಲಿ ನಡೆಸಲಿದೆ.
Advertisement
Advertisement
ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿರುವ ನಾಳೆ ಬಾರುಕೋಲು ಚಳವಳಿಗೆ ಕಬ್ಬು ಬೆಳೆಗಾರರ ಸಂಘದ ಮುಖಂಡ ಕುರುಬೂರು ಶಾಂತಕುಮಾರ್ ಬೆಂಬಲ ನೀಡದಿರಲು ತೀರ್ಮಾನಿಸಿದ್ದಾರೆ. ನಮಗೆ ಮಾಹಿತಿ ಇಲ್ಲ. ಯಾರು ಬೆಂಬಲ ಕೇಳಿಲ್ಲ ಎಂದಿದ್ದಾರೆ. ಯಾರು ಮಣ್ಣಿನ ಮಕ್ಕಳ ಹೋರಾಟದಿಂದ ನಾಳೆ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಂಭವ ಹೆಚ್ಚಿದೆ.
Advertisement
Advertisement
ಎಲ್ಲೆಲ್ಲಿ ಟ್ರಾಫಿಕ್ ಜಾಮ್: ಸಿಟಿ ರೈಲ್ವೆ ಸ್ಟೇಷನ್, ಮೆಜೆಸ್ಟಿಕ್, ಗಾಂಧಿನಗರ, ಆನಂದ್‍ರಾವ್ ಸರ್ಕಲ್, ಮಲ್ಲೇಶ್ವರಂ, ಶೇಷಾದ್ರಿಪುರಂ, ಅರಮನೆ ರಸ್ತೆ, ಓಕಳೀಪುರಂ, ಕೆ.ಆರ್. ಸರ್ಕಲ್, ವಿಧಾನಸೌಧ, ರಾಜಭವನ ಆಸುಪಾಸು ಕಾರ್ಪೋರೇಷನ್ ಸುತ್ತಮುತ್ತ, ಕಬ್ಬನ್‍ಪಾರ್ಕ್ ಸುತ್ತಮುತ್ತ ಮತ್ತು ಮೈಸೂರು ಬ್ಯಾಂಕ್ ಬಳಿ ಬೆಳಗ್ಗೆ 10 ಗಂಟೆಯ ನಂತರ ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿವೆ.
ಪೊಲೀಸರ ಪ್ಲಾನ್: ರೈತರ ಪ್ರತಿಭಟನೆ ತಡೆಗೆ ಪೊಲೀಸರು ಪ್ಲಾನ್ ಸಿದ್ಧಪಡಿಸಿಕೊಂಡಿದ್ದಾರೆ. ವಿಧಾನಸೌಧದ 1 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಕಡೆ 1 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಹಾಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಮೌರ್ಯ ಸರ್ಕಲ್ ಫ್ಲೈಓವರ್, ಫ್ರೀಡಂ ಪಾರ್ಕ್ ಮುಂಭಾಗದಲ್ಲಿ ಪೊಲೀಸರ ಸರ್ಪಗಾವಲು ಇರಲಿದೆ. ವಿಧಾನಸೌಧದ ಸುತ್ತಮುತ್ತ ಕೂಡ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ.