-ರಾಜ್ಯದಲ್ಲಿ 1,839 ಮಂದಿಗೆ ಡೆಡ್ಲಿ ವೈರಸ್, 42 ಸಾವು
ಬೆಂಗಳೂರು: ಈ ಹಿಂದಿನ ಎಲ್ಲ ದಾಖಲೆಗಳನ್ನು ಕೊರೊನಾ ಮಾಹಾಮಾರಿ ಮುರಿದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 1,172 ಮಂದಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ 1,839 ಮಂದಿಗೆ ಸೋಂಕಿಗೆ ತುತ್ತಾಗಿದ್ದು, ಸೋಂಕಿತರ ಸಂಖ್ಯೆ 21,549ಕ್ಕೆ ಏರಿಕೆಯಾಗಿದೆ.
Covid19 Bulletin: 4th July 2020
Total Confirmed Cases: 21549
Deceased: 335
Recovered: 9244
New Cases: 1839
Other information: Telemedicine facility, Corona Watch Application and Helpline details.#KarnatakaFightsCorona#Covid19Karnataka@BSYBJP pic.twitter.com/sUoAhmpEut
— CM of Karnataka (@CMofKarnataka) July 4, 2020
Advertisement
ಇಂದು 439 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 11,966 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 9,244 ಮಂದಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಕೊರೊನಾಗೆ ಬಲಿಯಾದವರ ಸಂಖ್ಯೆ 335ಕ್ಕೆ ತಲುಪಿದ್ದು, ಐಸಿಯುನಲ್ಲಿ 226 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Evening Media Bulletin 04/07/2020.
Please click on the link below to view bulletin.https://t.co/6ENRiEciz7 @BMTC_BENGALURU @NammaBESCOM @tv9kannada @publictvnews @suvarnanewstv @timesofindia @prajavani @udayavani_web @TV5kannada @Vijaykarnataka @VVani4U pic.twitter.com/u3WKhV0ugl
— K'taka Health Dept (@DHFWKA) July 4, 2020
Advertisement
ಇಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 1,172, ದಕ್ಷಿಣ ಕನ್ನಡ 75, ಬಳ್ಳಾರಿ 73, ಬೀದರ್ 51, ಧಾರವಾಡ 45, ರಾಯಚೂರು 41, ಮೈಸೂರು 38, ಕಲಬುರಗಿ 37, ವಿಜಯಪುರ 37, ಮಂಡ್ಯ 35, ಉತ್ತರ ಕನ್ನಡ 35, ಶಿವಮೊಗ್ಗ 31, ಹಾವೇರಿ 28, ಬೆಳಗಾವಿ 27, ಹಾಸನ 25, ಉಡುಪಿ 18, ಚಿಕ್ಕಬಳ್ಳಾಪುರ 12, ತುಮಕೂರು 12, ಬೆಂಗಳೂರು ಗ್ರಾಮಾಂತರ 11, ಕೋಲಾರ 11, ದಾವಣಗೆರೆ 7, ಚಾಮರಾಜನಗರ 5, ಗದಗ 4, ಕೊಪ್ಪಳ 3, ಚಿಕ್ಕಮಗಳೂರು 3, ರಾಮನಗರ 2 ಮತ್ತು ಯಾದಗಿರಿಯಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ.
Advertisement
ಇಂದು ಒಟ್ಟು 42 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 24, ಬೀದರ್ 6, ಬೆಂಗಳೂರು ಗ್ರಾಮಾಂತರ 1, ಧಾರವಾಡ 3, ದಕ್ಷಿಣ ಕನ್ನಡ 4, ಕಲಬುರಗಿ 3 ಮತ್ತು ಹಾಸನದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.