ಬೆಂಗಳೂರು: ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಿದೆ. 198 ವಾರ್ಡ್ ಗಳಲ್ಲಿ ವಾರ್ಡ್ ಕಮಿಟಿ ಜೊತೆ ಬೂತ್ ಮಟ್ಟದ ಟಾಸ್ಕ್ ಫೊರ್ಸ್ ರಚನೆ ಮಾಡಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲು ಮುಂದಾಗಿದೆ.
ಪ್ರತಿ ವಾರ್ಡ್ ನಲ್ಲಿ 50-70 ಬೂತ್ ಸಮಿತಿ ರಚನೆ, 50 ರಿಂದ 1 ಲಕ್ಷದ ಜನ ಸಂಖ್ಯೆ ಆಧಾರದಲ್ಲಿ ಕಮಿಟಿ ರಚನೆ ಮಾಡಲಾಗಿದೆ. 1,500 ಜನರು ಮತ್ತು 400 ಮನೆಗಳ ಒಳಗೊಂಡ ಕಮಿಟಿ ಇದಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಟಾಸ್ಕ್ ಫೋರ್ಸ್ ಕಮಿಟಿ ರಚನೆಯಾಗಿದೆ. ಬೂತ್ ಮಟ್ಟದ ಕಮಿಟಿಯಲ್ಲಿ 4 ಜನ ಸಿ-ರ್ಯಾಂಕ್ ಅಧಿಕಾರಿಗಳು ಮತ್ತು 10 ಜನ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ.
Advertisement
Advertisement
ಬೂತ್ ಕಮಿಟಿ ಹೇಗೆ ಕಾರ್ಯ ನಿರ್ವಹಿಸುತ್ತೆ?
* ಕೊರೊನಾ ಬಗ್ಗೆ ಜಾಗೃತಿ ಮೂಡಿಸುವುದು.
* ಲಕ್ಷಣಗಳಿಲ್ಲದ ರೋಗಿಗಳ ಚಿಕಿತ್ಸೆಗೆ ಅಗತ್ಯ ಸಹಾಯ, ಮಾರ್ಗದರ್ಶನ ನೀಡುವುದು.
* ಆರೋಗ್ಯ ಸಮಸ್ಯೆ ಇರೋರ ಮಾಹಿತಿ ಸಂಗ್ರಹಿಸಿ ವಾರ್ಡ್ ಕಮಿಟಿಗೆ ನೀಡುವುದು.
* ಬೂತ್ ಮಟ್ಟದ ಸಮಿತಿ ಜೊತೆ ಸರ್ವೆ ಕಾರ್ಯಕ್ಕೆ ಸಹಕಾರ ನೀಡುವುದು.
* ಕೊರೊನಾ ಬಗ್ಗೆ ಹರಡುವ ಗಾಳಿ ಸುದ್ದಿ ಬಗ್ಗೆ ಜಾಗೃತಿ ಮೂಡಿಸುವುದು.
* ಮಾಸ್ಕ್, ಸ್ವಚ್ಚತೆ, ಸಾಮಾಜಿಕ ಅಂತರಗಳ ಬಗ್ಗೆ ಜಾಗೃತಿ ಮೂಡಿಸುವುದು.
Advertisement
* ಹೋಂ ಕ್ವಾರಂಟೈನ್ ನಿಯಮ ಪಾಲನೆ ಮಾಡುತ್ತಿದ್ದರಾ ಎಂಬ ಮಾಹಿತಿ ವಾರ್ಡ್ ಕಮಿಟಿಗೆ ನೀಡುವುದು.
* ಪ್ರಾಥಮಿಕ ಸಂಪರ್ಕ, ದ್ವೀತಿಯ ಸಂಪರ್ಕಗಳನ್ನ ಪತ್ತೆ ಮಾಡಿ ಅವರ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು.
* ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್ ಕೇರ್ ಸೆಂಟರ್, ಫೀವರ್ ಕ್ಲಿನಿಕ್‍ಗಳಿಗೆ ಸಹಕಾರ ನೀಡುವುದು.
* ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳ ಸಹಕಾರದ ಮೂಲಕ ವಾರ್ಡ್ ಕಮಿಟಿಗೆ ಸಹಕಾರ ನೀಡುವುದು.
* ಸಾರಿ, ಐಎಲ್‍ಐ ಕೇಸ್, ಗರ್ಭೀಣಿರು, ಮಧುಮೇಹ, ಬಿಪಿ ಇನ್ನಿತರ ಸಮಸ್ಯೆ ಇರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರ್ಡ್ ಮಟ್ಟದ ಕಮಿಟಿಗೆ ಮಾಹಿತಿ ನೀಡುವುದು.
Advertisement
ವಾರ್ಡ್ ಕಮಿಟಿ ಕೆಲಸಗಳೇನು?
10 ಜನರನ್ನು ಒಳಗೊಂಡ ವಾರ್ಡ್ ಮಟ್ಟದ ಕಮಿಟಿಯು ರಚನೆ ಮಾಡಲಾಗಿದ್ದು, ಈ ಸಮಿತಿ ವಾರದಲ್ಲಿ ಕಡ್ಡಾಯವಾಗಿ ಒಂದು ದಿನ ಸಭೆ ಮಾಡಿ ಪರಿಸ್ಥಿತಿ ಅವಲೋಕನ ಮಾಡಬೇಕು. ಬೂತ್ ಮಟ್ಟದ ಕಮಿಟಿ ಕಾರ್ಯದ ಬಗ್ಗೆ ಮಾಹಿತಿ ಸಂಗ್ರಹ ಮಾಡುವುದು. ಕೊರೊನಾ ಸೋಂಕಿತರ ಮಾಹಿತಿ ಸಂಗ್ರಹ ಮಾಡುವುದು. ಸೋಂಕಿತರ ಪ್ರಾಥಮಿಕ ಸಂಪರ್ಕ, ದ್ವಿತೀಯ ಸಂಪರ್ಕ ಮಾನಿಟರ್ ಮಾಡುವುದು. ಬೂತ್ ಮಟ್ಟದ ವರದಿ, ವಾರ್ಟ್ ಮಟ್ಟದ ವರದಿಯನ್ನು ಜಂಟಿ ಆಯುಕ್ತರಿಗೆ ಕಳುಹಿಸಿ ವರದಿ ಆಧಾರದಲ್ಲಿ ಮುಂದಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು.
ಬೂತ್ ಮಟ್ಟದಲ್ಲಿ ಸ್ವಯಂ ಸೇವಕರನ್ನು ನೇಮಕ ಮಾಡಿ ತುರ್ತು ಸೇವಾ ಕೆಲಸಕ್ಕೆ ಅವರನ್ನು ಬಳಸಿಕೊಳ್ಳೋದು. 60 ವರ್ಷ ಮೇಲ್ಪಟ್ಟವರು, ಮಕ್ಕಳು, ಬಿಪಿ, ಶುಗರ್, ಗರ್ಭಿಣಿಯರು ಸೇರಿದಂತೆ ಇನ್ನಿತರ ಕಾಯಿಲೆಗಳಿಗೆ ತುತ್ತಾಗಿರುವವರ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ನೀಡುವುದು. ಕ್ವಾರಂಟೈನ್ ಇರುವ, ಐಸೋಲೇಶನ್ ನಲ್ಲಿರುವವರಿಗೆ ಅಗತ್ಯ ಮಾರ್ಗಸೂಚಿ ನೀಡಿ, ಬೂತ್ ಕಮಿಟಿ ಜೊತೆ ಅವರನ್ನು ಮೇಲ್ವಿಚಾರಣೆ ಮಾಡುವುದು.
ಕ್ವಾರಂಟೈನ್ ಇರುವವರ ಮನೆಯ ಶುಚಿತ್ವ, ಸುತ್ತಮುತ್ತಲಿನ ಪ್ರದೇಶದ ಶುಚಿತ್ವಕ್ಕೆ ಅಗತ್ಯ ಕ್ರಮವಹಿಸುವುದು. ಆರೋಗ್ಯದಲ್ಲಿ ವ್ಯತ್ಯಾಸ ಇರುವವರನ್ನು ಹತ್ತಿರದ ಫೀವರ್ ಕ್ಲಿನಿಕ್ ಗೆ ಕರೆದುಕೊಂಡು ಹೋಗಿ ಟೆಸ್ಟ್ ಮಾಡಿಸುವುದು. ವರದಿ ಬರೋವರೆಗೆ ಅವರನ್ನು ಐಸೋಲೇಶನ್‍ನಲ್ಲಿ ಇರಿಸಲು ಅಗತ್ಯ ಕ್ರಮವಹಿಸುವುದು. ಪರೀಕ್ಷೆ ನಂತರ ಪಾಸಿಟಿವ್ ಬಂದರೆ ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆ ದಾಖಲಿಸುವ ನಿಟ್ಟಿನಲ್ಲಿ ಕ್ರಮವಹಿಸುವುದು.