ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಶತಕ ಹೊಡೆದಿದೆ. ಒಂದೇ ದಿನ 138 ಮಂದಿಗೆ ಸೋಂಕು ಬಂದಿದೆ.
ರಾಜ್ಯದಲ್ಲಿ ಇಂದು ಒಟ್ಟು 337 ಮಂದಿಗೆ ಸೋಂಕು ಬಂದಿದ್ದು ಈ ಪೈಕಿ 93 ಅಂತರಾಜ್ಯ ಪ್ರಯಾಣಿಕರಿದ್ದರೆ 11 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. 10 ಮಂದಿ ಮೃತಪಟ್ಟಿದ್ದು, ಒಟ್ಟು 230 ಮಂದಿ ಬಿಡುಗಡೆಯಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 8281 ಮಂದಿಗೆ ಸೋಂಕು ಬಂದಿದ್ದು 5,210 ಮಂದಿ ಬಿಡುಗಡೆಯಾಗಿದ್ದಾರೆ. 2,943 ಸಕ್ರಿಯ ಪ್ರಕರಣಗಳಿವೆ.ಬೆಂಗಳೂರಿನಲ್ಲಿ 27 ಮಂದಿಗೆ ಹೇಗೆ ಸೋಂಕು ಬಂದಿದೆ ಎನ್ನುವುದೇ ತಿಳಿದಿಲ್ಲ. 29 ಮಂದಿ ಉಸಿರಾಟದ ಸಮಸ್ಯೆಯಿದ್ದು, ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 138, ಕಲಬುರಗಿ 52, ಬಳ್ಳಾರಿ 37, ಹಾಸನ 18, ದಕ್ಷಿಣ ಕನ್ನಡ 13, ದಾವಣಗೆರೆ 12, ಉಡುಪಿ 11, ಬೀದರ್ 10, ಮೈಸೂರು ಮತ್ತು ಕೊಪ್ಪಳದಲ್ಲಿ ತಲಾ 6, ಯಾದಗಿರಿ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ಮಂಡ್ಯ, ಧಾರವಾಡ, ಚಿಕ್ಕಬಳ್ಳಾಪುರ, ಬಾಗಲಕೋಟೆ, ರಾಮನಗರದಲ್ಲಿ ತಲಾ3, ತುಮಕೂರು, ಚಿಕ್ಕಮಗಳೂರಿನಲ್ಲಿ ತಲಾ 2, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ.
ಎಷ್ಟು ಮಂದಿ ಬಿಡುಗಡೆ?
ರಾಯಚೂರು 61, ದಕ್ಷಿಣ ಕನ್ನಡ 46, ಕಲಬರುಗಿ 40, ಬೆಳಗಾವಿ 25, ಮಂಡ್ಯ 14, ಯಾದಗಿರಿ 11, ಬೆಂಗಳೂರು ನಗರ 8, ವಿಜಯಪುರ 8, ಉಡುಪಿ 4, ಬೀದರ್ 3, ರಾಮನಗರ 3, ಧಾರವಾಡ 2, ಬಾಗಲಕೋಟೆಯಲ್ಲಿ ಮೂರು ಮಂದಿ ಬಿಡುಗಡೆಯಾಗಿದ್ದಾರೆ.