ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಸಂಪೂರ್ಣ ಇಳಿಕೆಯಾಗಿದೆ. ಶನಿವಾರ ಪಾಸಿಟಿವಿಟಿ ರೇಟ್ ಶೇ.3.94ಕ್ಕಿಳಿದಿದೆ. ಇಂದು ಬೆಂಗಳೂರಿನಲ್ಲಿ 2,973 ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರಿನ ಎಂಟು ವಲಯಗಳಲ್ಲೂ 500ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ. ಪ್ರತಿಯೊಂದು ವಲಯದಲ್ಲೂ ಕೊರೊನಾ ಕಂಟ್ರೋಲ್ ಬಂದಿದೆ.
ಯಾವ ವಲಯದಲ್ಲಿ ಎಷ್ಟು ಪ್ರಕರಣ?: ಬೊಮ್ಮನಹಳ್ಳಿ – 381, ದಾಸರಹಳ್ಳಿ – 86, ಬೆಂಗಳೂರು ಪೂರ್ವ – 357, ಮಹಾದೇವಪುರ – 429, ಆರ್.ಆರ್ ನಗರ – 205, ಬೆಂಗಳೂರು ದಕ್ಷಿಣ – 201, ಬೆಂಗಳೂರು ಪಶ್ಚಿಮ – 228, ಯಲಹಂಕ – 295
ಇನ್ನೂ ಬೆಂಗಳೂರಿನ ಎಂಟು ವಲಯಗಳಲ್ಲೂ ಪಾಸಿಟಿವಿಟಿ ರೇಟ್ ಒಂದಂಕಿಗೆ ಬಂದಿದೆ. ಪಾಸಿಟಿವಿಟಿ ರೇಟ್ ಎರಡಂಕಿ ಇದ್ದು ಗಗನಕ್ಕೆ ಹೋಗಿತ್ತು. ಲಾಕ್‍ಡೌನ್ ಟೈಂನಲ್ಲಿ ಸಂಪೂರ್ಣ ಇಳಿಕೆಯಾಗಿದೆ. ಕಳೆದ 10 ದಿನಗಳಿಂದ ಪಾಸಿಟಿವಿಟಿ ರೇಟ್ ಒಂದಂಕಿಗೆ ತಲುಪಿದೆ.
ಯಾವ ವಲಯದಲ್ಲಿ ಎಷ್ಟು ಪಾಸಿಟಿವಿಟಿ ರೇಟ್? : ಮಹಾದೇವಪುರ- ಶೇ.7.7, ದಾಸರಹಳ್ಳಿ – ಶೇ.5.2, ಬೆಂಗಳೂರು ಪೂರ್ವ – ಶೇ.6.7, ಬೊಮ್ಮನಹಳ್ಳಿ- ಶೇ.7.5, ಬೆಂಗಳೂರು ದಕ್ಷಿಣ- ಶೇ.4.1, ಬೆಂಗಳೂರು ಪಶ್ಚಿಮ- ಶೇ.4.1, ಯಲಹಂಕ – ಶೇ.6.4, ಆರ್.ಆರ್ ನಗರ- ಶೇ.9.2