ಬೆಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯ ಏರಿಯಾವನ್ನು ಸೀಲ್‍ಡೌನ್ ಮಾಡುವ ನಿರ್ಧಾರದಿಂದ ಸರ್ಕಾರ ತೆಗೆದು ಹಾಕಿತ್ತು. ಸದ್ಯ ಸೋಂಕಿತನ ಮನೆಯ ಗೋಡೆಗೆ ಅಂಟಿಸುವ ಪೋಸ್ಟರ್‌ನ್ನು ತೆಗೆದು ಹಾಕುವ ಬಗ್ಗೆ ಸರ್ಕಾರಕ್ಕೆ ತಜ್ಞರು ಶಿಫಾರಸು ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕೊರೊನಾ ರೋಗಿಗಳ ಮನೆ ಮುಂದೇ ಕ್ವಾರಂಟೈನ್ ಕುರಿತು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಕೆಂಪು ನೋಟಿಸ್ ಅಂಟಿಸಲಾಗುತ್ತದೆ. ಆದರೆ ನಿನ್ನೆ ಸಭೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯಿಂದ ಮನೆಯ ಮುಂದೆ ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಚರ್ಚೆ ನಡೆದಿದ್ದು, ಕೊರೊನಾ ಸೀಲ್‍ಡೌನ್ ತೆಗೆದಂತೆ ಪೋಸ್ಟರ್ ಅಂಟಿಸುವ ವಿಧಾನವನ್ನು ತೆಗೆದುಹಾಕಿದರೆ ಜನರು ಹೆಚ್ಚು ಟೆಸ್ಟಿಂಗ್‍ಗೆ ಬರುತ್ತಾರೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
Advertisement
Advertisement
ಕೆಂಪು ನೋಟಿಸ್ ಅಂಟಿಸುವುದರಿಂದ ಮನೆಯವರಿಗೂ ಮುಜುಗರವಾಗುತ್ತದೆ. ಅಕ್ಕ ಪಕ್ಕದ ನಿವಾಸಿಗಳಿಗೆ ಇದರಿಂದ ಭಯದ ವಾತಾವರಣ ನಿರ್ಮಾಣವಾಗುತ್ತೆ. ಹೀಗಾಗಿ ಇದನ್ನು ತೆಗೆದು ಹಾಕಿದರೆ ಜನ ಸ್ವಯಂ ಪ್ರೇರಿತವಾಗಿ ಟೆಸ್ಟ್‍ಗೆ ಬರುತ್ತಾರೆ. ತಜ್ಞರ ಸಲಹೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತೆ ಎಂಬ ಮಾಹಿತಿ ಲಭಿಸಿದೆ.
Advertisement
ಒಂದೊಮ್ಮೆ ತಜ್ಞರ ಈ ಸಲಹೆಯನ್ನು ಸರ್ಕಾರ ಸ್ವೀಕರಿಸಿದರೆ ಕೊರೊನಾ ಸೋಂಕಿತರಿಗೆ ಬಿಗ್ ರಿಲೀಫ್ ಸಿಕ್ಕಿದ್ದಂತೆ ಆಗುತ್ತೆ. ಆದರೆ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಏನು ಮಾಡುವುದು ಎಂಬುವುದು ಬಿಬಿಎಂಪಿಗೆ ಹಾಗೂ ಆರೋಗ್ಯ ಇಲಾಖೆಗೆ ತಲೆನೋವು ಆಗಲಿದೆ.
Advertisement
ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ ಡಾ.ಮಂಜುನಾಥ್ ಅವರು, ನಿನ್ನೆ ಸಭೆಯಲ್ಲಿ ಕೊರೊನಾ ಪಾಸಿಟಿವ್ ಇರುವವರ ಮನೆಯ ಮುಂದೆ ಪೋಸ್ಟರ್ ಅಂಟಿಸುವುದು ಬೇಡ ಎನ್ನುವ ಶಿಫಾರಸು ಮಾಡಿದ್ದೇವೆ. ಸರ್ಕಾರ ಇದನ್ನು ಸ್ವೀಕರಿಸುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಪೋಸ್ಟರ್ ನಿಂದ ಜನರು ಟೆಸ್ಟ್ ಮಾಡಿಸಿಕೊಳ್ಳು ಹಿಂದೇಟು ಹಾಕುತ್ತಿದ್ದಾರೆ. ಈ ಪೋಸ್ಟರ್ ತೆಗೆದರೆ ಹೆಚ್ಚು ಜನ ಟೆಸ್ಟ್ ಗೆ ಬರುತ್ತಾರೆ. ಇದರಿಂದ ಪೋಸ್ಟರ್ ತೆಗೆದುಹಾಕಲು ನಾವು ಶಿಫಾರಸು ಮಾಡಿದ್ದೇವೆ. ಉಳಿದಂತೆ ದೆಹಲಿಯಲ್ಲಿ ಕೋವಿಡ್ ಡ್ಯೂಟಿ ಮಾಡುವ ವೈದ್ಯರಿಗೆ ಸ್ಟಾರ್ ಹೋಟೆಲ್ ವ್ಯವಸ್ಥೆ ಮಾಡಲಾಗುತ್ತೆ. ಆದರೆ ಬೆಂಗಳೂರಿನಲ್ಲಿ ಇದಾಗುತ್ತಿಲ್ಲ. ಹೀಗಾಗಿ ಈ ಬಗ್ಗೆಯೂ ನಾವು ಶಿಫಾರಸು ಮಾಡಿದ್ದೇವೆ ಎಂದರು.