ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಇಂದು ರಾಜ್ಯ ರಾಜಧಾನಿಯಲ್ಲಿ ರೈತರು ಪ್ರತಿಭಟನೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸಕೋಟೆ ಟೋಲ್ ಜಂಕ್ಷನ್ ಪೊಲೀಸರು ಅಲರ್ಟ್ ಆಗಿದ್ದಾರೆ. ರೈತರು ರ‍್ಯಾಲಿ ಆರಂಭಿಸಲಿರುವ ಸ್ಥಳದಲ್ಲಿ ಪೊಲೀಸರ ಬಂದೋಬಸ್ತ್ ಕೈಗೊಂಡಿದ್ದಾರೆ. ಹೊಸಕೋಟೆ ಟೋಲ್ ನಲ್ಲಿ ಪೊಲೀಸರು ಟ್ರಾಕ್ಟರ್ ಒಂದನ್ನ ಅಡ್ಡ ಹಾಕಿದ್ದಾರೆ. ಆದರೆ ಈ ಟ್ರ್ಯಾಕ್ಟರ್ ಸ್ಥಳೀಯವಾಗಿ ಮಣ್ಣು ತರಲು ಹೊರಟಿತ್ತು. ಯಾವ ಟ್ರ್ಯಾಕ್ಟರ್ ಅನುಮತಿ ಇಲ್ಲಾ ಎಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
Advertisement
ನಿನ್ನೆ ರಾತ್ರಿಯಿಂದ 9 ಕ್ಕೂ ಹೆಚ್ಚು ಟ್ರಾಕ್ಟರ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಟ್ಟಿಗೆ ಕೊಂಡೊಯ್ಯುತ್ತಿದ್ದ ಟ್ರಾಕ್ಟರ್ ಜೊತೆಗೆ ಕೂಲಿಕಾರ್ಮಿಕರನ್ನು ಕೂಡ ವಶಪಡಿಸಿಕೊಂಡಿದ್ದಾರೆ. ನಂತರ 11 ಗಂಟೆ ನಂತರ ಬಿಟ್ಟು ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆ. ನಮಗೆ ಇದು ಗೊತ್ತಿಲ್ಲ ಕೂಲಿಗೆ ಹೊರಟಿದ್ವಿ ಪೊಲೀಸರು ಟ್ರಾಕ್ಟರ್ ಹಿಡಿದುಕೊಂಡಿದ್ದಾರೆ ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಟ್ಯಾಕ್ಟರ್ ರ‍್ಯಾಲಿ ಹಿನ್ನೆಲೆಯಲ್ಲಿ ಮುಂಜಾನೆ 4 ಗಂಟೆಗೆ ಬೆಂಗಳೂರಿನತ್ತ ಬರುತ್ತಿದ್ದ ಟ್ರ್ಯಾಕ್ಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ರೈತರು ಹಾಗೂ ಟ್ರ್ಯಾಕ್ಟರ್ ಗಳನ್ನು ಹೊಸಕೋಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದಿಂದ ಬರುವಂತ ಯಾವುದೇ ಟ್ರ್ಯಾಕ್ಟರ್ ನ ಬೆಂಗಳೂರುಗೆ ಬಿಡದೆ ಬ್ಯಾರಿಕೇಡ್ ಹಾಕಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಹೊಸ ಕೋಟೆ ಟೋಲ್ ನಲ್ಲಿ 150 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಎರಡು ಡಿಆರ್ ಬೆಟಾಲಿಯನ್ ಹಾಗೂ ಎರಡು ಕೆಎಸ್ ಆರ್ಪಿ ತುಕಡಿ ನಿಯೋಜಿಸಲಾಗಿದೆ. ಟ್ರ್ಯಾಕ್ಟರ್ ಬಿಟ್ಟು ಬೇರೆ ಯಾವುದೆ ವಾಹನ ತಡೆಯಲ್ಲ. ಟ್ರ್ಯಾಕ್ಟರ್ ಪ್ರವೇಶಕ್ಕೆ ಅನುಮತಿ ಇಲ್ಲ. ಹಾಗಾಗಿ ಟ್ರ್ಯಾಕ್ಟರನ್ನ ತಡೆದು ನಿಲ್ಲಿಸುತಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಅಡೀಶನಲ್ ಎಸ್ಪಿ ಲಕ್ಷ್ಮಿ ಗಣೇಶ್ ಹೇಳಿದ್ದಾರೆ.