– ತಜ್ಞರಿಂದ ಇಂದು ಸಿಎಂಗೆ 2 ವರದಿ
ಬೆಂಗಳೂರು: ಲಾಕ್‍ಡೌನ್ ವಿಚಾರದಲ್ಲಿ ರಾಜ್ಯ ಸರ್ಕಾರ ಪದೇಪದೇ ಎಡವುತ್ತಿದೆ. ತಜ್ಞರು ಕೆಲವೊಂದು ಸಲಹೆಗಳನ್ನು ಸಿಎಂಗೆ ನೀಡಿದ್ದಾರಾದರೂ ಅಷ್ಟಾಗಿ ಸಕ್ಸಸ್ ಆಗಿರಲಿಲ್ಲ. ಈಗ ಮತ್ತೆ ತಜ್ಞರಿಗೆ ವರದಿ ನೀಡುವಂತೆ ಸರ್ಕಾರ ಕೇಳಿದ್ದು ಇಂದು ತಜ್ಞರು ಏನೇನೆಲ್ಲಾ ವರದಿ ನೀಡಬಹುದು ಎಂಬುದು ಕುತೂಹಲ ಮೂಡಿಸಿದೆ.
Advertisement
ಹೌದು. ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ತಜ್ಞರು ಪದೇ ಪದೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚೆ ನಡೆಸ್ತಿದ್ದಾರೆ. ಇನ್ನೂ 15 ದಿನ ಕೊರೊನಾ ಕಂಟಕ ಇದೆ. ಇದನ್ನು ತಡೆಯೋ ಸಂಬಂಂಧ ಹಲವು ಶಿಫಾರಸುಗಳನ್ನು ಕೊರೊನಾ ತಜ್ಞರ ತಂಡ ಮಾಡಿತ್ತು. ಆದರೆ ಎಲ್ಲವನ್ನು ಕೇಳಿಸಿಕೊಂಡ ಸಿಎಂ ನೋಡೋಣ ನೋಡೋಣ.. ಆಲ್ ಈಸ್ ವೆಲ್ ಎಂದು ಹೇಳಿ ಕಳಿಸಿದ್ದರು. ಈಗ ಮತ್ತೆ ತಜ್ಞರಿಗೆ ವರದಿ ನೀಡುವಂತೆ ಸರ್ಕಾರ ಸೂಚಿಸಿದ್ದು ಇಂದು ತಜ್ಞರ ತಂಡದಿಂದ ಮತ್ತೊಂದು ವರದಿ ಬರಲಿದೆ.
Advertisement
Advertisement
ಕೊರೊನಾ ಪರಿಸ್ಥಿತಿ, ನಿಯಂತ್ರಣದ ಬಗ್ಗೆ ತಜ್ಞರ ಸಮಿತಿ ಇಂದು ಸಿಎಂ ಯಡಿಯೂರಪ್ಪಗೆ ಇನ್ನೊಂದು ವರದಿ ನೀಡಲಿದೆ. ಮೊನ್ನೆ ತಾನೆ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲಾಗಿತ್ತು. ಈಗ ತಜ್ಞರ ಸಮಿತಿ ಒಟ್ಟು ಎರಡು ವರದಿ ನೀಡಲಿದ್ದು, ಬೆಂಗಳೂರಿಗೆ ಪ್ರತ್ಯೇಕ ವರದಿ ತಯಾರಿಸಲಾಗಿದೆ. ತಜ್ಞರ ಸಮಿತಿ ವರದಿ ನೋಡಿಕೊಂಡು ಶನಿವಾರವೂ ಲಾಕ್ ಡೌನ್ ಬಗ್ಗೆ ನಿರ್ಧಾರ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಎರಡು ವಾರ ಭಾನುವಾರ ಕರ್ಫ್ಯೂ ನೋಡಿ ಬಳಿಕ ಶನಿವಾರದ ಲಾಕ್ ಡೌನ್ ಬಗ್ಗೆ ಚಿಂತಿಸೋಣ ಎಂದು ಮಾತ್ರ ವರದಿ ನೀಡಿದರೆ ಬಚಾವ್. ಇಲ್ಲದಿದ್ರೆ ಶನಿವಾರಕ್ಕೂ ಕರ್ಫ್ಯೂ ವ್ಯಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ಲಾಕ್‌ಡೌನ್ ಮಾಡಲು ಸಾಧ್ಯವೇ ಇಲ್ಲ – ತಜ್ಞರ ಸಲಹೆಗೆ ಸಿಎಂ ಹೇಳಿದ್ದೇನು? ಇನ್‌ಸೈಡ್ ಸುದ್ದಿ
ತಜ್ಞರ ವರದಿಯಲ್ಲಿ ಏನಿರಬಹುದು..?
ಬೆಂಗಳೂರಿಗೆ ಅಂತರ್ ಜಿಲ್ಲೆಯ ವಾಹನ ಓಡಾಟ ನಿರ್ಬಂಧಕ್ಕೆ ಶಿಫಾರಸು ಮಾಡಬಹುದು. ಕನಿಷ್ಠ 15 ದಿನಗಳ ಕಾಲ ನಿರ್ಬಂಧಕ್ಕೆ ಸಲಹೆ ಕೊಡಬಹುದು. ಬೆಂಗಳೂರಿನಲ್ಲಿ ಭಾನುವಾರದ ಜತೆಗೆ ಶನಿವಾರವೂ ಲಾಕ್‍ಡೌನ್ ಮಾಡಿ ಎನ್ನಬಹುದು. ಅಂತಾರಾಜ್ಯ ಸಂಚಾರಕ್ಕೆ 15 ದಿನಗಳ ಕಾಲ ನಿರ್ಬಂಧಕ್ಕೆ ಸಲಹೆ ನೀಡಬಹುದು. ಬೆಂಗಳೂರಿನಲ್ಲಿ ಏರಿಯಾಗಳ ಬಂಚ್ ಸೀಲ್‍ಡೌನ್ ಮಾಡಿ ಎಂದು ಸಲಹೆ ಕೊಡಬಹುದು. ಸೋಂಕು ಹೆಚ್ಚಿರುವ ಏರಿಯಾಗಳಲ್ಲಿ ಕಡ್ಡಾಯವಾಗಿ ರ‌್ಯಾಂಡಮ್ ಟೆಸ್ಟ್ ಗೆ ಹೇಳಬಹುದು.
ಒಟ್ಟಿನಲ್ಲಿ ತಜ್ಞರ ವರದಿ ಏನು ಬರಬಹುದು ಎಂದು ಜನ ತಲೆಕೆಡಿಸಿಕೊಂಡಿದ್ದು ಇಂದಿನ ವರದಿ ಮೇಲೆ ಬೆಂಗಳೂರಿನ ಮುಂದಿನ ದಿನಗಳ ಬಗ್ಗೆ ನಿರ್ಧಾರವಾಗಲಿದೆ.