– ಕೊರೊನಾ ಮುಂದೆ ಸೋತು ಮಂಡಿಯೂರಿದ ಸರ್ಕಾರ
– ತ್ರಿ ಆಹಾಕಾರದಿಂದಲೇ ಶುರುವಾಯ್ತು ತ್ರಿ ಕಂಟಕ!
ಬೆಂಗಳೂರು: ಬೆಂಗಳೂರು ಕೊರೊನಾದಿಂದಾಗಿ ಮತ್ತಷ್ಟು ಭಯಾನಕ ಆಗ್ತಿದೆ. ಇತ್ತ ಸರ್ಕಾರ ಮಾತ್ರ ಸಭೆಗಳನ್ನು ನಡೆಸುತ್ತಿದ್ದು, ಒಂದು ನಿಲುವಿಗೆ ಬರುತ್ತಿಲ್ಲ. ಇತ್ತ ಮಹಾರಾಷ್ಟ್ರದಂತೆ ಬೆಂಗಳೂರು ಆಗುತ್ತಾ ಅನ್ನೋ ಆತಂಕ ಎದುರಾಗ್ತಿದೆ. ಬೆಂಗಳೂರಿನಲ್ಲಿ 5 ಸಾವಿರ ಪ್ರಕರಣ ಬಂದ್ರೆ ಕಷ್ಟ ಎಂದು ತಜ್ಞರು ಹೇಳುತ್ತಿದ್ದರು. ಈಗ 10 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಂಗಳೂರಿನಲ್ಲಿ ವರದಿ ಬರುತ್ತಿವೆ. ಈ ತಿಂಗಳಾಂತ್ಯಕ್ಕೆ 20 ಸಾವಿರ ಪ್ರಕರಣಗಳು ಹೆಚ್ಚು ಕೇಸ್ ದಾಖಲಾಗುವ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
ಸದ್ಯ ಮೂರು ಸಮಸ್ಯೆಗಳಿಂದ ಬೆಂಗಳೂರು ಸ್ಥಿತಿ ಭಯಾನಕವಾಗುತ್ತಿದೆ. ಚಿತಾಗಾರಗಳ ಮುಂದೆ ಸಾಲು ಸಾಲು ಅಂಬುಲೆನ್ಸ್ ಗಳು, ಕೋವಿಡ್ ಸೋಂಕಿತರ ಪರದಾಟ, ಆಸ್ಪತ್ರೆ ಮತ್ತು ಸ್ಮಶಾನಗಳ ಮುಂದೆ ಕುಟುಂಬಸ್ಥರ ಕಣ್ಣೀರು ಬೆಂಗಳೂರಿನ ಕಠಿಣ ಪರಿಸ್ಥಿತಿಯನ್ನ ಬಿಚ್ಚಿಡುತ್ತಿವೆ. ಸದ್ಯ ಮೂರು ಕಂಟಕಗಳಿಂದ ಬೆಂಗಳೂರಿನಲ್ಲಿ ಕೊರೊನಾ ಎಮೆರ್ಜೆನ್ಸಿ ಉಂಟಾಗಿದೆ.
Advertisement
Advertisement
1. ಬೆಡ್ ಎಮೆರ್ಜೆನ್ಸಿ
ಕೊರೋನಾ ಹೆಮ್ಮಾರಿ ರಣಕೇಕೆ ಒಂದು ಕಡೆ ಹಿಂಸೆ ಮಾಡ್ತಿದ್ರೇ, ಸೋಂಕಿತರಿಗೆ ಬೆಡ್ ಗಳೆ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ಮೊದಲ ಅಲೆಯಲ್ಲೇ ಬೆಡ್ ಸಮಸ್ಯೆ ಮಿತಿಮೀರಿತ್ತು. ಅದ್ರೇ ಈಗ ಮತ್ತೆ ಎರಡನೇ ಅಲೆಯಲ್ಲೂ ಬೆಡ್ ಸಮಸ್ಯೆ ಹೆಚ್ಚಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿಯಿಲ್ಲ. ಎಷ್ಟು ಹುಡುಕಾಡಿದ್ರೂ ಬೆಡ್ ಸಿಗುತ್ತಿಲ್ಲ ಅಂತ ಜನ ಪರದಾಡುತ್ತಿದ್ದಾರೆ. ಬೆಡ್ ಸಿಗದೇ ಅಂಬ್ಯಲೆನ್ಸ್ ಅಲ್ಲೆ ಗಂಟೆಗಟ್ಟಲೇ ಸೋಂಕಿತರು ಕಾಯುವಂತಾಗಿದೆ.
Advertisement
2. ಐಸಿಯು ಎಮೆರ್ಜೆನ್ಸಿ
ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 589 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬೆಂಗಳೂರಿನ ಎಲ್ಲಾ ಆಸ್ಪತ್ರೆಗಳ ಐಸಿಯುಗಳು ಫುಲ್ ಆಗಿದೆ. ಯಾವ ಆಸ್ಪತ್ರೆಗೆ ಹೋದ್ರೂ ಐಸಿಯು ಬೆಡ್ ಇಲ್ಲ ಅಂತಾರೆ ಎಂದು ರೋಗಿಗಳು ಪರದಾಡುತ್ತಿದ್ದಾರೆ. ಈಗಲೇ ಹೀಗಾದ್ರೇ ಏಪ್ರಿಲ್ ಅಂತ್ಯಕ್ಕೆ, ಮೇ ತಿಂಗಳಿನಲ್ಲಿ ಇನ್ಯಾವ ಮಟ್ಟಿಗೆ ಐಸಿಯು ಎಮರ್ಜೆನ್ಸಿ ಶುರುವಾಗುತ್ತೆ ಅನ್ನೊ ಅತಂಕವನ್ನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
3. ಆಕ್ಸಿಜನ್ ಎಮೆರ್ಜೆನ್ಸಿ
ಸಾವಿನ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಆಕ್ಸಿಜನ್ ಕೊರತೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಯಾವ ಮಟ್ಟಿಗೆ ಇದೆ ಅನ್ನೊದನ್ನ ಪಬ್ಲಿಕ್ ಟಿವಿ ವಿವರವಾಗಿ ಹೇಳುತ್ತಿದೆ. ಖಾಸಗಿ ಆಸ್ಪತ್ರೆಯ ವೈದ್ಯರು ಕೈ ಮುಗಿದು ಬೇಡಿಕೊಳ್ಳುವ ಸ್ಥಿತಿ ಎದುರಾಗಿದೆ. ಇದು ಹೀಗೆ ಮುಂದುವರಿದ್ರೆ ಸರ್ಕಾರ ಆಕ್ಸಿಜನ ಪೂರೈಕೆ ಮಾಡದೇ ಇದ್ದರೆ ಸಾವಿನೂರಾಗೋದ್ರಲ್ಲಿ ಅನುಮಾನವೇ ಇಲ್ಲ.