ಬೆಂಗಳೂರು: ಬ್ರಿಟನ್‍ನಿಂದ ಬೆಂಗಳೂರಿಗೆ ಬಂದಿದ್ದ ಮಹಿಳೆಯಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿತ್ತು. ಆಕೆಯ ತಾಯಿಗೂ ಇಂದು ಬೆಳಗ್ಗೆ ಬ್ರಿಟನ್ ವೈರಸ್ ಪಾಸಿಟವ್ ವರದಿ ಬಂದಿದ್ದು, ಎಲ್ಲರಲ್ಲಿಯೂ ಆತಂಕ ಹೆಚ್ಚಾಗಿತ್ತು. ಅಲ್ಲದೆ ಆಕೆಯ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಲ್ಲರಿಗೂ ಪರೀಕ್ಷೆ ನಡೆಸಲಾಯಿತು. ಇದೀಗ ಅವರೆಲ್ಲರ ರಿಪೋರ್ಟ್ ಹೊರಬಿದ್ದಿದ್ದು, ಎಲ್ಲರಿಗೂ ಬ್ರಿಟನ್ ಕೊರೊನಾ ವೈರಸ್ ನೆಗಟಿವ್ ಬಂದಿದೆ.
Advertisement
ಸೋಂಕಿತೆಯ ಸಂಪರ್ಕಕ್ಕೆ ಬಂದಿದ್ದ ಆಕೆಯ ಅಣ್ಣನಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆಯನ್ನು ಟೆಸ್ಟ್ ಗೆ ಒಳಪಡಿಸಿದಾಗ ನೆಗೆಟಿವ್ ಬಂದಿದೆ. ಇನ್ನೂ ಆಸ್ಪತ್ರೆ ವಾರ್ಡ್ ಬಾಯ್‍ಗೂ ನೆಗೆಟಿವ್ ಇದ್ದು ಯಾವುದೇ ಆತಂಕ ಪಡುವಂತಹದಿಲ್ಲ. ಸೋಂಕಿತೆ ಮನೆಗೆ ಬಂದ ನಂತರ ಮನೆ ಕೆಲಸ ಮಾಡಿ ಹೋಗಿದ್ದ ಮನೆಕೆಲಸದಾಕೆಗೂ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದೆ.
Advertisement
Advertisement
ಸೋಂಕಿತೆಯ ಮನೆಯ ಕೆಳಗಡೆ ಪಾರ್ಮಸಿಟಿಕಲ್ ಆಫೀಸ್ ಇದ್ದು ಆಕೆಯ ಸಂಪರ್ಕಕ್ಕೆ ಬಂದಿದ್ದ ಮೂರು ಜನರಿಗೂ ಕೊರೊನಾ ಟೆಸ್ಟ್ ಮಾಡಲಾಗಿದ್ದು ಅವರಿಗೂ ಟೆಸ್ಟ್ ರಿಪೋರ್ಟ್ ನೆಗಟಿವ್ ಬಂದಿದೆ. ಹೀಗೆ ಇವರನ್ನೆಲ್ಲಾ ಹೋಂ ಕ್ವಾರಂಟೈನ್‍ನಲ್ಲಿ ಇರಿಸಲಾಗಿದ್ದು, ಮತ್ತೆ ಏಳು ದಿನದ ನಂತರ ಟೆಸ್ಟ್‍ಗೆ ಒಳಪಡಿಸಬೇಕಾಗುತ್ತದೆ ನಂತರ ಮತ್ತೆ ರಿಪೋರ್ಟ್ ಏನು ಬರುತ್ತದೆ ಎಂದು ಕಾದು ನೋಡಬೇಕಾಗಿದೆ.