– ಲಾಕ್‍ಡೌನ್ ಬಗ್ಗೆ ಸರ್ಕಾರದ ಪ್ಲ್ಯಾನ್ ಏನು?
ಬೆಂಗಳೂರು: ಲಂಗು ಲಗಾಮಿಲ್ಲದೇ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಕೊರೊನಾ ಮಾರಿ ಬೆಂಗಳೂರಲ್ಲಿ ಕಂಟ್ರೋಲ್ ಸಿಗುತ್ತಿಲ್ಲ. ಒಂದು ವಾರ ಸಾವಿರ ರೇಂಜ್‍ನಲ್ಲಿದ್ದ ಸೋಂಕು ಈಗ 2 ಸಾವಿರ ರೇಂಜ್‍ಗೆ ಬಂದಿದೆ. ಕಳೆದ ಮೂರು ದಿನಗಳಿಂದ 2 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗ್ತಿವೆ. ಇದನ್ನರಿತ ಸರ್ಕಾರ ಒಂದು ವಾರ ಬೆಂಗಳೂರಿಗೆ ಬೀಗ ಜಡಿದಿದೆ. ಅದರಲ್ಲಿ ಈಗ 3 ದಿನ ಕಳೆದು ಹೋಗಿದೆ. ಉಳಿದಿರೋದು ಇನ್ನೂ ನಾಲ್ಕು ದಿನ ಮಾತ್ರ. ಅಷ್ಟರಲ್ಲಿ ಕೊರೊನಾ ಕಂಟ್ರೋಲ್‍ಗೆ ಸಿಗುತ್ತಾ? ಚೈನ್ ಲಿಂಕ್ ಕಟ್ ಮಾಡೋಕೆ ಆಗುತ್ತಾ? ಲಾಕ್‍ಡೌನ್ ಮುಂದುವರಿಯುತ್ತಾ? ಈ ಪ್ರಶ್ನೆ ನಿಮಗಂತೂ ಕಾಡುತ್ತಿದೆದೆ. ಆದ್ರೆ ಇದಕ್ಕೆ ಸ್ವತಃ ಸರ್ಕಾರದಲ್ಲೂ ಗೊಂದಲ ಇದೆ.
Advertisement
ಬೆಂಗಳೂರಲ್ಲಿ ಕೊರೊನಾ ಕಂಟ್ರೋಲ್‍ಗೆ ಬರ್ತಿಲ್ಲ. ಸಿಎಂ ಸದ್ಯ ಒಂದು ವಾರ ಲಾಕ್‍ಡೌನ್ ಮಾಡಿದ್ದಾರೆ. ಲಾಕ್‍ಡೌನ್ ವಿಸ್ತರಿಸುವ ಸಂದರ್ಭ ಬಂದರೂ ಬರಬಹುದು ಅನ್ನೋ ಮೂಲಕ ಸಚಿವ ನಾರಾಯಣಗೌಡ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ಪರೋಕ್ಷವಾಗಿ ಲಾಕ್‍ಡೌನ್ ಇದೆ ಅನ್ನೋ ಸುಳಿವು ನೀಡಿದ್ದಾರೆ. ಆದರೆ ಸಚಿವ ಆರ್ ಅಶೋಕ್ ಇವರ ಮಾತನ್ನ ಅಲ್ಲಗೆಳೆದಿದ್ದಾರೆ.
Advertisement
Advertisement
ಲಾಕ್‍ಡೌನ್ ಮೊದಲು ಕೂಡ ಆರ್. ಅಶೋಕ್ ಹೀಗೆ ಸ್ಪಷ್ಟವಾಗಿಯೇ ಹೇಳಿದ್ರು. ಆದ್ರೆ ಕೊನೆಗೆ ಒಂದು ವಾರ ಲಾಕ್‍ಡೌನ್ ಮಾಡಿದರು. ಈಗಲೂ ಕೂಡ ಸಚಿವ ಆರ್.ಅಶೋಕ್ ಅದನ್ನೇ ಹೇಳ್ತಿದ್ದಾರೆ. ಬೆಂಗಳೂರಲ್ಲಿ ಲಾಕ್‍ಡೌನ್ ಮುಂದುವರಿಕೆ ಇಲ್ಲ. ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಸೀಲ್‍ಡೌನ್ ಬಗ್ಗೆ ಜಿಲ್ಲಾಧಿಕಾರಿಗಳ ಅಭಿಪ್ರಾಯ ಪಡೆಯುತ್ತಾರೆ ಎಂದು ಆರ್.ಅಶೋಕ್ ತಿಳಿಸಿದರು. ಆರ್. ಅಶೋಕ್ ಬೆನ್ನಿಗೆ ಮತ್ತೊಬ್ಬ ಸಚಿವ ಎಸ್. ಟಿ ಸೋಮಶೇಖರ್ ಕೂಡ ಲಾಕ್‍ಡೌನ್ ಇಲ್ಲ ಎಂದಿದ್ದಾರೆ. ಸೋಂಕಿರುವ ಕಡೆ ಸೀಲ್‍ಡೌನ್ ಮಾಡಬಹುದು ಅಷ್ಟೇ ಅಂದಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಸಂಬಂಧ ಬಿಎಸ್‍ವೈ ಸಂಪುಟದ ಸಚಿವರಲ್ಲೇ ಗೊಂದಲಗಳಿವೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಲು ಶುರು ಮಾಡಿದ್ದಾರೆ.
Advertisement
ಸರ್ಕಾರದ ಲಾಕ್‍ಡೌನ್ ಪ್ಲ್ಯಾನ್ ಏನು?
* ಲಾಕ್‍ಡೌನ್ ವಿಸ್ತರಣೆ ಮಾಡಿದ್ರೂ ಮಾಡಬಹುದು.
* ಲಾಕ್‍ಡೌನ್ ಮಾಡದೇ ಬೆಂಗಳೂರು ಬಿಗಿಗೊಳಿಸಬಹುದು.
* ಕಂಟೈನ್ಮೆಂಟ್ ಝೋನ್‍ಗಳಲ್ಲಿ ಮತ್ತಷ್ಟು ಸೀಲ್‍ಡೌನ್ ಮಾಡಬಹುದು.
* ಸಂಡೇ ಲಾಕ್‍ಡೌನ್ ಬದಲು ಶನಿವಾರವೂ ಮಾಡಬಹುದು.
* ಲಾಕ್‍ಡೌನ್ ಬದಲು ಸೋಂಕು ನಿಯಂತ್ರಿಸಬಹುದು.
ಲಾಕ್‍ಡೌನ್ ಮಾಡಲು ಕಷ್ಟವ್ಯಾಕೆ?
* ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡೋದು ಕಷ್ಟ.
* ಮತ್ತೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು.
* ಬೆಂಗಳೂರು ಆದಾಯವನ್ನೇ ನಂಬಿಕೊಂಡಿರುವ ಸರ್ಕಾರ.
* ರಾಜ್ಯದ ಬೊಕ್ಕಸಕ್ಕೆ ಶೇ.60ರಷ್ಟು ಆದಾಯ ಬೆಂಗಳೂರು ಮೊಲವೇ.
* ಒಂದು ವೇಳೆ ಲಾಕ್‍ಡೌನ್ ಮಾಡಿದ್ರೆ ರಾಜ್ಯದ ಆರ್ಥಿಕತೆಗೆ ಪೆಟ್ಟು.