ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಬೆಡ್, ಐಸಿಯು ಕೊರತೆ ಉಂಟಾಗುತ್ತೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಚಟುವಟಿಕೆಗಳಿಗೆ ಕಡಿವಾಣ ಹಾಕಲೇಬೇಕಾಗುತ್ತೆ. ಸಿಎಂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸ್ತಾರೆ. ಲಾಕ್ ಡೌನ್ ಬಗ್ಗೆ ಬಹಳ ಪ್ರಚಾರ ಆಗ್ತಿದೆ. ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಆದರೆ ಬಿಗಿಯಾದ ಕ್ರಮಗಳು ಆಗಬೇಕು, ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸರ್ವಪಕ್ಷ ಸಭೆಗಳ ನಾಯಕರ ಜೊತೆಯೂ ಚರ್ಚೆ ಮಾಡುತ್ತಾರೆ. ನಾಳೆ ಸಿಎಂ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸ್ತಾರೆ. ಇಂದೇ ಬೆಂಗಳೂರಿಗೆ ಸಂಬಂಧಪಟ್ಟಂತೆ ರೂಲ್ಸ್ ಆಗಬಹುದು. ಇಲ್ಲ ನಾಳೆ ಸರ್ವಪಕ್ಷ ನಾಯಕರ ಜೊತೆ ಚರ್ಚೆ ಮಾಡಿ ನಾಳೆಯೇ ರೂಲ್ಸ್ ಬರಬಹುದು ಎಮದು ಸಚಿವರು ತಿಳಿಸಿದರು.
ಇದೇ ವೇಳೆ ಶಾಸಕ ಉದಯ್ ಗರುಡಾಚಾರ್ ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಾಸ್ತಿ ಆಗಿದೆ. ಬೆಡ್ ಗಳು ಸಿಗ್ತಿಲ್ಲ, ಸುಧಾಕರ್ ಕೂಡ ಹಲವು ಸಲಹೆ ನೀಡಿದ್ದಾರೆ. ಸುಧಾಕರ್ ಸಲಹೆಗಳನ್ನು ನಾವು ಸಭೆಯಲ್ಲಿ ಇಡ್ತೀವಿ. ಆಕ್ಸಿಜನ್, ಬೆಡ್, ಐಸಿಯುಗಳ ಬಗ್ಗೆ ಕೇಳಿದ್ದೇವೆ. ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಬೇಕು. ವೈಯಕ್ತಿಕವಾಗಿ ಲಾಕ್ ಡೌನ್ ಬಗ್ಗೆ ಬೇಡ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಮಾಡಿದ್ರೆ ಒಪ್ಪುತ್ತೇವೆ ಎಂದು ಹೇಳಿದರು.
ಶಾಸಕ ಮುನಿರತ್ನ ಪ್ರತಿಕ್ರಿಯಿಸಿ, ಕಳೆದ ಬಾರಿ ನಾಲ್ಕೈದ ಸಾವಿರಕ್ಕೆ ಕಷ್ಟಪಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿ ಆದರೆ ಕಷ್ಟ. ಸುಧಾಕರ್ ಅವರಿಗೆ ನಾವು ಸಾಕಷ್ಟು ಸಲಹೆ ಕೊಟ್ಟಿದ್ದೇವೆ. ಸುಧಾಕರ್ ಡಾಕ್ಟರ್, ಅವರಿಗೆ ಅನುಭವ ಇದೆ. ಹಾಗಾಗಿ ಅವರ ಮಾತುಗಳನ್ನ ಕೇಳುತ್ತೇವೆ ಎಂದರು.
ನಮಗೆ ಜೀವ ಉಳಿಸಬೇಕು. 25ಸಾವಿರ ಹೋದ್ರೆ ಏನಾಗ್ಬೇಕು ಅನ್ನೋದನ್ನ ಯೋಚನೆ ಮಾಡಬೇಕಿದೆ. ಐಸಿಯು, ಬೆಡ್ ಗಳು ಎಲ್ಲಿದೆ ಯೋಚನೆ ಮಾಡಬೇಕು ಎಂದು ಹೇಳಿದರು.