ಬೆಂಗಳೂರು: ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಿದ್ದರು. ಇದಾದ ಬಳಿಕ ಕೊರೊನಾ ಅವಧಿಯಲ್ಲಿ ಮಾಸ್ಕ್ ಹಾಕದಿದ್ದರೆ ನಗರದಲ್ಲಿ ಮಾರ್ಷಲ್‌ಗಳು 250 ರೂ. ದಂಡ ಹಾಕುತ್ತಿದ್ದಾರೆ. ಈಗ ರಸ್ತೆ ಮತ್ತು ಸಾರಿಗೆ ಇಲಾಖೆ(ಆರ್‌ಟಿಒ) ಅಧಿಕಾರಿಗಳು ವಾಹನಗಳನ್ನು ಅಡ್ಡಗಟ್ಟಿ ದಂಡ ಹಾಕುತ್ತಿದ್ದಾರೆ.
ನಂಬರ್ ಪ್ಲೇಟ್ , ಅಂತರ್ ರಾಜ್ಯ ತೆರಿಗೆ, ಲಗೇಜ್ ಸರಿಯಾಗಿಲ್ಲ, ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದವರಿಗೆ ದಂಡ ಹಾಕಲಾಗುತ್ತಿದೆ. ಅಷ್ಟೇ ಅಲ್ಲದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ದರೆ ಅವರ ಡಿಎಲ್ ಸಹ ರದ್ದಾಗಲಿದೆ.
Advertisement
Advertisement
ಹೆಲ್ಮೆಟ್ ಧರಿಸದ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್) ಮೂರು ತಿಂಗಳು ಅಮಾನತು ಮಾಡುವ ಸರ್ಕಾರದ ಅದೇಶ ಹೊರಬಿದ್ದ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ.
Advertisement
ಟಿನ್ ಫ್ಯಾಕ್ಟರಿ ಸಮೀಪ, ಗೊರಗುಂಟೆಪಾಳ್ಯ, ಫೋರಂ ಮಾಲ್, ಸುಮನಹಳ್ಳಿ ಜಂಕ್ಷನ್, ಕನಕಪುರ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಭಟ್ಟರಹಳ್ಳಿ, ಚಂದಾಪುರ ಸರ್ಕಲ್, ದೇವನಹಳ್ಳಿ ಸೇರಿ 21 ಪ್ರಮುಖ ಜಂಕ್ಷನ್‌ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.
Advertisement
ಸಾರಿಗೆ ಇಲಾಖೆಯ ನಗರ ವಿಭಾಗದ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ಪ್ರತಿಕ್ರಿಯಿಸಿ, ವಾಹನಗಳನ್ನು ತಡೆದು ತಪಾಸಣೆ ಮಾಡಲು ಸಾರಿಗೆ ಇಲಾಖೆಗೆ ಮೊದಲೇ ಅಧಿಕಾರ ಇತ್ತು. ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಸದ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.